ಭಾರತೀಯ ರೈಲ್ವೆಯಲ್ಲಿ ಉದ್ಯೋಗವಕಾಶ | ಒಟ್ಟು ಹುದ್ದೆ – 1659, ಅರ್ಜಿ ಸಲ್ಲಿಸಲು ಕೊನೆದಿನ- ಆಗಸ್ಟ್ 1

ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಸುವರ್ಣಾವಕಾಶವಿದ್ದು, ರೈಲ್ವೆ ನೇಮಕಾತಿ ಸೆಲ್ ಉತ್ತರ ಮಧ್ಯ ರೈಲ್ವೆಯ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

ಹುದ್ದೆಗಳ ವಿವರಗಳು:

ಒಟ್ಟು ಹುದ್ದೆಗಳ ಸಂಖ್ಯೆ1659
ಯಾವ ವಿಭಾಗಗಳಿಗೆ ನೇಮಕಾತಿ:
ಪ್ರಯಾಗರಾಜ್ – 703 ಹುದ್ದೆಗಳು
ಝಾನ್ಸಿ – 660 ಹುದ್ದೆಗಳು
ಆಗ್ರಾ – 296 ಹುದ್ದೆಗಳು
ಅರ್ಹತಾ ಮಾನದಂಡಗಳು:
ಅಭ್ಯರ್ಥಿಯು ಕನಿಷ್ಟ 50% ಅಂಕಗಳೊಂದಿಗೆ ಮಾನ್ಯತೆ ಪಡೆದ ಮಂಡಳಿಯಿಂದ SSC/ಮೆಟ್ರಿಕ್ಯುಲೇಷನ್/10ನೇ ತರಗತಿ ಅಥವಾ ಅದಕ್ಕೆ ಸಮಾನವಾದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಲ್ಲದೆ ಸಂಬಂಧಿತ ವಿಷಯದಲ್ಲಿ ಐಟಿಐ ಮಾಡಿರಬೇಕು.

ವಯೋಮಿತಿ:
ಈ ಅಪ್ರೆಂಟಿಸ್ ಹುದ್ದೆಗಳಿಗೆ 15 ರಿಂದ 24 ವರ್ಷಗಳ ನಡುವಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ:
ಈ ಹುದ್ದೆಗಳಿಗೆ ಅರ್ಜಿ ಶುಲ್ಕವಾಗಿ 100 ರೂ. ನಿಗದಿಪಡಿಸಲಾಗಿದೆ.

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಆಗಸ್ಟ್ 01, 2022

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್ rrcpryj.org ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

Leave A Reply

Your email address will not be published.