SHOCKING NEWS ಬೆಳ್ತಂಗಡಿ : ಗಂಡನನ್ನು ಕತ್ತಿ ಬೀಸಿ ಕೊಂದು, ಕತ್ತಿ ಹಿಡಿದು ರಾತ್ರಿಯಿಡೀ ಕೂತ ಪತ್ನಿ !

ಬೆಳ್ತಂಗಡಿ: ಕ್ಷುಲ್ಲಕ ಕಾರಣಕ್ಕೆ ಗಂಡ ಹೆಂಡತಿ ಮಧ್ಯೆ ಜಗಳ ನಡೆದಿದ್ದು, ಸಿಟ್ಟುಗೊಂಡ ಪತ್ನಿ ಗಂಡನನ್ನು ಕತ್ತಿಯಿಂದ ಕಡಿದು ಕೊಂದ ಘಟನೆಯೊಂದು ತಾಲೂಕಿನಲ್ಲಿ ನಡೆದಿದೆ.

ಮಲಗಿದ್ದ ಗಂಡನನ್ನು ಹೆಂಡತಿಯೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಅಬ್ಬನ ಕರೆ ಎಂಬಲ್ಲಿ ನಡೆದಿದೆ. ಬೇಬಿ @ ಪೊಟ್ಟಸ್ ಬೇಬಿ (55) ಕೊಲೆಯಾದ ವ್ಯಕ್ತಿ. ಈತನ ಪತ್ನಿ ನಲ್ಲಮ್ಮ(50) ಎಂಬಾಕೆಯೇ ಕೊಲೆದ ಆರೋಪಿ.

ಕೊಲೆ ಮಾಡಿದ ಬಳಿಕ ಕತ್ತಿ ಹಿಡಿದು ಈಕೆ ಸುಮ್ಮನೆ ಕುಳಿತಿದ್ದಳು ಎನ್ನಲಾಗಿದೆ. ಇಂದು ಬೆಳಗ್ಗೆ ಕೊಲೆ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿದ್ದಾರೆ.

ದಂಪತಿಗೆ ಒಬ್ಬ ಪುತ್ರಿ ಹಾಗೂ ಇಬ್ಬರು ಗಂಡು ಮಕ್ಕಳಿದ್ದು ಒಬ್ಬ ಮಗ ಉಪ್ಪಿನಂಗಡಿಯಲ್ಲಿ ಸ್ವಂತ ಉದ್ಯೋಗ ಮಾಡುತ್ತಿದ್ದು, ಇನ್ನೋರ್ವ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಮಗಳನ್ನು ಮದುವೆ ಮಾಡಿಕೊಡಲಾಗಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Leave A Reply

Your email address will not be published.