ದೇಶಿ ನಾಯಿಗಳ ರಕ್ಷಣೆಗೆ ₹5 ಕೋಟಿ ಕೊಡುತ್ತೇನೆ – ರಕ್ಷಿತ್ ಶೆಟ್ಟಿ
ಬೆಂಗಳೂರು : ನಟ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಬಿಡುಗಡೆಯಾಗಿ 25 ದಿನಾ ಪೂರೈಸಿದೆ. ಇದೇ ಸಂದರ್ಭದಲ್ಲಿ ದೇಶಿ ತಳಿ ನಾಯಿಗಳ ದತ್ತು ರಕ್ಷಣೆ ಘೋಷಣೆಗೆ ಚಿತ್ರದ 5 ರಷ್ಟು ಹಣವನ್ನು ಕೊಡುತ್ತೇನೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು,
ನಾಯಿಗಳನ್ನು ದತ್ತು ಪಡೆಯುವ ಕುರಿತು ಉತ್ತಮ ಸಂದೇಶವನ್ನು ನಮ್ಮ ಸಿನಿಮಾ ಹೊಂದಿತ್ತು. ಸಿನಿಮಾ ಒಟ್ಟಾರೆ ₹150 ಕೋಟಿ ವ್ಯವಹಾರ ಮಾಡಿದೆ. ಇದರಲ್ಲಿ ₹90 ರಿಂದ ₹ 100 ಕೋಟಿ ನಿರ್ಮಾಪಕರ ಕೈ ಸೇರಲಿದ್ದು, ಬಂದಿರುವ ಲಾಭದಲ್ಲಿ ₹4-5 ಕೋಟಿ ರಷ್ಟು ಚಾರ್ಲಿ ಹೆಸರಿನಲ್ಲಿ ದೇಶದಲ್ಲಿ ಇರುವ ದೇಶಿಯ ಸ್ಥಳೀಯ ತಳಿಗಳ ನಾಯಿಗಳ ರಕ್ಷಣೆ ಮತ್ತು ದತ್ತು ಕೇಂದ್ರ ಗಳಿಗೆ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ನೀಡಲಿದ್ದೇವೆ.
ನಾವು ಈ ಹಣವನ್ನು ನೇರವಾಗಿ ಹಂಚುವ ಉದ್ದೇಶ ಹೊಂದಿದ್ದೇವೆ. ಈಗಾಗದೆ ಇದ್ದಲ್ಲಿ ನಾವು ಈ ಹಣವನ್ನು ಚಾರ್ಲಿ ಹೆಸರಲ್ಲಿ ಬ್ಯಾಂಕ್ ಖಾತೆ ಯನ್ನು ಮಾಡಿ, ಅದರಲ್ಲಿ ಬಂದ ಬಡ್ಡಿಯಿಂದ ನಾವು ಇಂತಹ ಕೇಂದ್ರಗಳಿಗೆ ಸಹಾಯ ಧನವಾಗಿ ನೀಡುವುದು ನಿರ್ಧಾರ ಎಂದು ಹೇಳಿದ್ದಾರೆ. ಇದು ಸಹಾಯವಲ್ಲ ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ.
ದೇಶದದ್ಯಂತ 450 ಚಿತ್ರ ಮಂದಿರಗಳಲ್ಲಿ 777ಚಾರ್ಲಿ ಸಿನಿಮಾ ಚಾಲನೆಯಲ್ಲಿದ್ದು. ಇಂದಿಗೆ 25 ದಿನಾ ಪೂರೈಸಿದೆ ಎನ್ನಲಾಗಿದೆ. ಇದನ್ನು ವ್ಯಯಕ್ತಿಕವಾಗಿ ಸಾಧನೆ ಎನ್ನಬಹುದು. ಇದು ಕೇವಲ ಸಿನಿಮಾವಲ್ಲ ಮೂರು ವರ್ಷದ ಪ್ರಯಾಣ ನಮ್ಮ ಜೀವನದ ಶೇಕಡಾ 5 ರಷ್ಟು ಸಮಯವನ್ನು ಈ ಸಿನಿಮಾಕ್ಕೆ ಕಳೆದಿದ್ದೇವೆ ಎಂದಿದ್ದಾರೆ.
ಬೇರೆಭಾಷೆಗಳಿಂದ ಒಟಿಟಿ ಹಾಗೂ ಸಾಟಲೈಟ್ ಹಕ್ಕಿಗೆ ಒಳ್ಳೆಯ ಓಪರ್ ಬಂದಿದ್ದು. ಸಿನಿಮಾದ ಹಿಂದೆ 200 ಜನ ಕೆಲಸ ಮಾಡಿದ್ದೇವೆ. ಬೇರೆ ಭಾಷೆಗಳಿಂದ ರಿಮೆಕ್ಸ್ ಹಕ್ಕು ಕೇಳುತ್ತಿದ್ದಾರೆ. ಆದರೆ ಈಗಾಗಲೇ ನಾವೇ ಈ ಸಿನಿಮಾವನ್ನು ಡಬ್ ಮಾಡಿ ಬಿಡುಗಡೆ ಮಾಡಿರುವ ಕಾರಣ ಹಾಗೂ ಒಟಿಟಿಯಲ್ಲೂ ಬಿಡುಗಡೆಯಾಗಿರುವ ಕಾರಣ ಮುಂದೆ ಏನಾಗುತ್ತೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಎರಡನೇ ಭಾಗ ಬರುತ್ತದೋ ಎಂಬಾ ಪ್ರಶ್ನೆಗೆ ಉತ್ತರಿಸಿದ ರಕ್ಷಿತ್ ಶೆಟ್ಟಿ ಮೊದಲನೇ ಭಾಗವೇ ಮೂರು ವರ್ಷದ ಪ್ರಯಾಣ. ಇದನ್ನು ಮೊದಲು ಜೀರ್ಣಸಿಕೊಳ್ಳಬೇಕು ಎಂದಿದ್ದಾರೆ. ಕಿರಣ್ ರಾಜ್ ಗೆ ಏನಾದರೂ ಎರಡನೇ ಭಾಗ ಮಾಡಬೇಕೆಂದು ಮನಸಾದರೆ ಮಾಡುತ್ತೇವೆ ಎಂದರು. ನಾನೇ ನಿರ್ಮಾಪಕರಾಗುತ್ತೇವೆ ಮತ್ತು ಸರ್ವರಿ ಆಗ ದೊಡ್ಡವಳು ಆಗುತ್ತಾರೆ. ಆಕೆಯೇ ನಾಯಕಿ ಎಂದು ಮುಗುಳು ನಕ್ಕಿದ್ದಾರೆ.