ದಾವಣಗೆರೆ : ಚಾಲಕನ ನಿಯಂತ್ರಣ ತಪ್ಪಿ ಹಾಲಿನ ವಾಹನ ಕೆರೆಗೆ ಬಿದ್ದು ಮುಳುಗಿದ ಘಟನೆ ದಾವಣಗೆರೆಯ ಚೆನ್ನಾಗಿರಿ ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೆಳಿಗ್ಗೆ ಅಂಗಡಿಗೆ ನಂದಿನಿ ಹಾಲು ಪೂರೈಸುತ್ತಿದ್ದ ವಾಹನ ಕೆರೆಗೆ ಬಿದ್ದು, 500 ಲೀಟರ್ ಗಳಷ್ಟು ಹಾಲು ನೀರು ಪಾಲದ ಘಟನೆ ದೇವರ ಹಳ್ಳಿ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಚಾಲಕ ಮತ್ತು ಕ್ಲಿನರ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸಂತೆ ಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ.
You must log in to post a comment.