ಈ ನೆಲಕ್ಕೆ ಕಾಲಿಟ್ರಿ ಅಂದ್ಕೊಳ್ಳಿ, ನೀವು ದಿಢೀರ್ ಶ್ರೀಮಂತರಾದಿರೀ ಅಂತ್ಲೇ ಅರ್ಥ !! | ಇವತ್ತಿನಿಂದ ನಾಳೆಗೆ 545 ಪಟ್ಟು ಶ್ರೀಮಂತರಾಗಬೇಕಾದರೆ ಹೀಗೆ ಮಾಡಿ

ಬಹುಶ: ಪ್ರತಿಬಾರಿಯೂ ವಿದೇಶಕ್ಕೆ ಹೋಗಿ ಬಂದವರನ್ನು ನಾವು ಅಚ್ಚರಿಯಿಂದ ನೋಡುತ್ತೇವೆ. ‘ ಬೇರೆ ದೇಶ ಅಂದರೆ ಸುಮ್ಮನೇನಾ, ಅಲ್ಲಿಗೆ ಶ್ರೀಮಂತರು ಮಾತ್ರ ಹೋಗಿ ಬರಕಾಗತ್ತೆ. ಅಲ್ಲಿ ಒಂದು ದಿನ ತಂಗಬೇಕಿದ್ದರೆ ಲಕ್ಷಾಂತರ ದುಡ್ಡಾಗುತ್ತದಂತೆ. ಅಲ್ಲಿ ಒಂದು ಕಾಫಿಗೆ ಖರ್ಚು ಮಾಡೋದ್ರಲ್ಲಿ ಇಲ್ಲಿ ನಮ್ಮ ಶೆಟ್ಟರಂಗಡಿಯ ತಿಂಗಳ ಪೂರ್ತಿ ಬಿಲ್ ಕೊಟ್ಟು ಮತ್ತೂ ಮುಗಿಸಬಹುದು. ಅಲ್ಲಿ ನಮ್ಮ ದುಡ್ಡಿಗೆ, ಅಂದರೆ ಭಾರತದ ಕರೆನ್ಸಿಗೆ ಕಿಮ್ಮತ್ತೇ ಇಲ್ವಂತೆ. ‘ ಇದು ನಾವು-ನೀವೆಲ್ಲ ಮಧ್ಯಮವರ್ಗದವರು ವಿದೇಶಗಳ ಬಗ್ಗೆ, ಅಲ್ಲಿನ ಪ್ರವಾಸ ಮತ್ತು ಶ್ರೀಮಂತಿಕೆ ಬಗ್ಗೆ ನಂಬಿಕೊಂಡು ಬಂದ ಮಾತುಗಳು.

ಆದರೆ ಸರ್, ನಿಮಗೆ ಗೊತ್ತಾ ? ಈ ಪ್ರಪಂಚದಲ್ಲಿ ಅದೆಷ್ಟೋ ರಾಷ್ಟ್ರಗಳಿವೆ. ಅವುಗಳ ಮುಂದೆ ನಾವು ಮಹಾರಾಜರಂತೆ. ನಾವು ಕೆಲವೇ ಕೆಲವು ರೂಪಾಯಿಗಳನ್ನು ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಂಡು ಹೋದರೂ ಸಾಕು : ಅಲ್ಲಿ ಬೇಕಾಬಿಟ್ಟಿಯಾಗಿ ಖರ್ಚು ಮಾಡಿ, ಬೇಕಾದ್ದನ್ನು ಬೇಡವಾದ್ದನ್ನು ಸಹ ಮೂಟೆ ಕಟ್ಟಿಕೊಂಡು ಮನೆಗೆ ಬರಬಹುದು. ಅಂತಹಾ ದೇಶಗಳಿವೆ. ಅಲ್ಲಿ ನಾವು ಪರ್ಸಿಗೆ ಏನೊಂದೂ ಭಾರವಾಗದ ಥರ, ಕೆಲವೇ ಕೆಲವು ಚಿಲ್ಲರೆ ದುಡ್ಡಿಟ್ಟುಕೊಂಡು, ಹೆಮ್ಮೆಯಿಂದ ಶ್ರೀಮಂತರ ಥರ ಬದುಕಬಹುದು. ಅಂತಹಾ, ಆ ನೆಲಕ್ಕೆ ಕಾಲಿಟ್ಟ ಕೂಡಲೇ ನಮ್ಮನ್ನು ಶ್ರೀಮಂತರನ್ನಾಗಿಸುವ ಎಷ್ಟೋ ದೇಶಗಳಿವೆ. ಆ ದೇಶಗಳಾದರೂ ಯಾವುದು ನಿಮಗೆ ಗೊತ್ತಾ?


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಪಕ್ಕದ ಪಾಕಿಸ್ತಾನದಿಂದ ಶುರು ಮಾಡೋಣ. ಪಾಕಿಸ್ತಾನ ಭಾರತಕ್ಕಿಂತ ಎರಡೂವರೆ ಪಟ್ಟು ಅಗ್ಗ. ನಮ್ಮ ಒಂದು ರೂಪಾಯಿಗೆ ಸಮ ಅವರ 2.56 ರೂಪಾಯಿ. ಸ್ಪಷ್ಟ ಕಾರಣಗಳಿಗಾಗಿ ಅಲ್ಲಿಗೆ ಭಾರತದಿಂದ ಹೋಗಲು ಯಾರೂ ಇಷ್ಟಪಡುವುದಿಲ್ಲ. ಆದರೂ ನೀವು ಅಲ್ಲಿಗೆ ಹೋದ್ರಿ ಅಂತಿತ್ಕೊಳ್ಳಿ. ಇಲ್ಲಿ 250 ರೂಪಾಯಿಗೆ ಸಿಗೋ ವಸ್ತು ಅಲ್ಲಿ ಕೇವಲ 100 ರೂಪಾಯಿಗೆ ( ಭಾರತದ ಕರೆನ್ಸಿಯ ಲೆಕ್ಕದಲ್ಲಿ) ಸಿಗತ್ತೆ. ಅದು ನಿಮಗೆ ತೀರಾ ಅಗ್ಗವಾಗಿ ಅನಿಸುವುದರಲ್ಲಿ ಸಂದೇಹವೇ ಇಲ್ಲ. ಅದೇ ರೀತಿ ಪಕ್ಕದ ಶ್ರೀಲಂಕಾವನ್ನು ತೆಗೆದುಕೊಳ್ಳಿ. ನಮ್ಮ ಭಾರತದ ಒಂದು ರುಪಾಯಿ ಕರೆನ್ಸಿಯ ಬೆಲೆ ಅಲ್ಲಿ ₹4.57. ಇಂತಹಾ ದೇಶಗಳ ಕಡೆಗೆ ಹೋಗಿ ತಿರುಗಾಡಿ ಬರುವುದು ಜೇಬಿಗೆ ಕಷ್ಟವಾಗಲಾರದು.

ಇನ್ನೂ ಕೆಲವು ದೇಶಗಳಿವೆ. ಅವುಗಳ ಕರೆನ್ಸಿ ನಿಮ್ಮನ್ನು ಅಕ್ಷರಶಃ ರಾಜರ ಥರ ಟ್ರೀಟ್ ಮಾಡುತ್ತವೆ. ಅವುಗಳನ್ನು ಒಂದು ಸುತ್ತು ಹಾಕಿ ಬರೋಣ ಬನ್ನಿ.

1.ಪೆರುಗ್ವೆ : ಅಲ್ಲಿಗೆ ಅಡಿಯಿಟ್ಟ ಕೂಡಲೇ ನೀವು ಒಮ್ಮೆಲೇ 88 ಪಟ್ಟು ಶ್ರೀಮಂತರಾಗಿ ಬಿಡುತ್ತೀರಿ. ನಮ್ಮ ಒಂದು ರೂಪಾಯಿ ಅವರ 88 ರೂಪಾಯಿಗೆ ಸಮ. ಪೆರುಗ್ವೆ ಯ ಸುಂದರ ಪರಿಸರ ಕೈಬೀಸಿ ಕರೆಯುವ ಬೀಚುಗಳು,8 ಅಗಾಧ ಸೌಂದರ್ಯದಿಂದ ತುಂಬಿತುಳುಕುವ ಗಿರಿಶಿಖರಗಳ ಜೊತೆ ಹೆಚ್ಚುಕಮ್ಮಿ ಏನು ಖರ್ಚು ಮಾಡದೆ ಆನಂದಿಸಿ ಖುಷಿಯಿಂದ ವಾಪಸ್ಸು ಬರುವ ಅವಕಾಶ ನಿಮ್ಮದಾಗುತ್ತದೆ.

2.ಕಾಂಬೋಡಿಯಾ : ಇದು ಶ್ರೀಮಂತ ಸಂಸ್ಕೃತಿಯ ಅಳಿದು ಉಳಿದ ಪಳೆಯುಳಿಕೆಗಳ ನಗರ. ಮತ್ತೊಂದು ಕಡೆ ನಿಬಿಡ ನಿಬಿಡ ಅರಣ್ಯ ಸಂಪತ್ತು ಹೇರಳವಾಗಿರುವ ಪ್ರದೇಶ. ಇವೆಲ್ಲವನ್ನು ಆನಂದಿಸಿ ಬರುವುದು ಇನ್ನು ನಮಗೆ ಬಹು ಸುಲಭ. ಕಾರಣ ಅಲ್ಲಿಯ ಕರೆನ್ಸಿಯ ನಿಕೃಷ್ಟ ಮೌಲ್ಯ. ಅಲ್ಲಿ ನಮ್ಮ 1 ರೂಪಾಯಿಗೆ 52 ರಿಯಲ್ ದುಡ್ಡು ಸಿಗುತ್ತದೆ.

3.ವಿಯೆಟ್ನಾಂ : ವಿಯೆಟ್ನಾಂ ಪ್ರಪಂಚದ ಒಂದು ಅತ್ಯಾಕರ್ಷಕ ಟೂರಿಸ್ಟ್ ಡೆಸ್ಟಿನೇಶನ್. ಅಲ್ಲಿನ ನೆಲದಲ್ಲಿ ಸುಮ್ಮನೆ ಅಡಿ ಇಟ್ಟರೆ ಸಾಕು. ಸಂತೋಷದಿಂದ ಮತ್ತು ಬಹಳಷ್ಟು ಅಪನಂಬಿಕೆಯಿಂದ ನಮ್ಮ ಕಣ್ಣು ಅರಳುವುದು ಪಕ್ಕಾ. ಕಾರಣ ಜೇಬಿನಲ್ಲಿ ಒಂದು ರೂಪಾಯಿ ನಾಣ್ಯ ಇದ್ದರೆ ಸಾಕು, ಅದರಲ್ಲಿ ನಾವು ಇಲ್ಲಿ ಭಾರತದಲ್ಲಿ 298 ರೂಪಾಯಿಗೆ ಕೊಳ್ಳಬಹುದಾದ ವಸ್ತುಗಳನ್ನು ಕೊಂಡು ಕೊಳ್ಳಲು ಅವಕಾಶಗಳ ಸಾಲುಗಳನ್ನು ಕಲ್ಪಿಸಿಕೊಡುತ್ತದೆ. ಅಲ್ಲಿ ಮನಮೋಹಕ ಬೀಚುಗಳಿವೆ, ಸುಂದರ ಪರಿಸರದ ಜೊತೆಜೊತೆಗೆ ಓಪನ್ ಮನಸ್ಸತ್ವದ ಲಲನೆಯರು, ರಸಿಕ ಮತ್ತು ಅರಸಿಕ ಮನಸ್ಸಿನವರಿಗೆ, ಆನಂದಿಸಲು ಅನಂತ ಅವಕಾಶಗಳನ್ನು ತೆರೆದಿಟ್ಟಿದ್ದಾರೆ.

4.ಜಪಾನ್: ನಾವು ನೀವೆಲ್ಲಾ ಪಠ್ಯಗಳಲ್ಲಿ ಓದಿದಂತೆ, ವೃತ್ತಪತ್ರಿಕೆಗಳಲ್ಲಿ ವೆಬ್ ತಾಣಗಳಲ್ಲಿ ನೋಡಿದಂತೆ ಜಪಾನ್ ಜಗತ್ತಿನ ಮುಂದುವರೆದ ಮತ್ತು ಒಂದು ಶ್ರೀಮಂತ ರಾಷ್ಟ್ರ. ಆದರೆ ಜಪಾನಿನ ಕರೆನ್ಸಿ ಯೆನ್ ನಮಗಿಂತ ಕಮ್ಮಿ ಮೌಲ್ಯವುಳ್ಳದ್ದು. ನಮ್ಮ 1 ರೂಪಾಯಿಗೆ ಅವರ 1.64 ಯೆನ್ ಸಮ. ಹಾಗಾಗಿ ಜಗತ್ತಿನ ಈ ಶ್ರೀಮಂತ ಮತ್ತು ಅಭಿವೃದ್ಧಿ ಹೊಂದಿದ ದೇಶಕ್ಕೂ ನಾವು ಅಗ್ಗವಾಗಿ ಹೋಗಿ ತಿರುಗಾಡಿಕೊಂಡು ಬರಬಹುದು. ಅಲ್ಲಿನ ಅರಮನೆಗಳು ಅನನ್ಯವಾಗಿ ಕಾಪಾಡುತ್ತಿರುವ ರಾಷ್ಟ್ರೀಯ ಉದ್ಯಾನವನಗಳು ಆಕಾಶಕ್ಕೆ ಕೈ ಚಾಚಿ ನಿಂತಿರುವ ಬೃಹತ್ ವಾಸ್ತುಶಿಲ್ಪದ ಸೌಂದರ್ಯವನ್ನು ಸವಿದು ಕೊಂಡು ಬರಲು ಜಪಾನ್ ಒಂದು ಒಳ್ಳೆಯ ರಾಷ್ಟ್ರ.

5.ಇಂಡೋನೇಷ್ಯಾ : ಭಾರತದಂತೆಯೇ ಬಹುಸಂಸ್ಕೃತಿಯ ತಾಣ ಇವತ್ತಿನ ಇಂಡೋನೇಷ್ಯಾ. ಏಷ್ಯಾಖಂಡದ ಭಾಗವಾಗಿದ್ದರೂ ಮುಸ್ಲಿಂ ಬಾಹುಳ್ಯದ ದೇಶವು ಪಾಶ್ಚಾತ್ಯರ ಪ್ರಭಾವಕ್ಕೆ ಒಳಗಾಗಿದ್ದು, ಇವತ್ತು ಓಪನ್ ಕಲ್ಚರ್ ಅನ್ನು ಹೊಂದಿದೆ. ಇಂಡೋ ನೇಶ್ಯಾದ ಬಾಲಿ, ಜಕಾರ್ತಾ, ಲೇಕ್ ತೋಬಾ, ಬಂಡುಂಗ್, ರಾಜಾ ಅಂಪಟ್ ಮುಂತಾದ ಹಲವು ಸ್ಥಳಗಳು ಇಂಡೋನೇಷ್ಯಾದ ಪ್ರಾಕೃತಿಕ ಆಕರ್ಷಣೆಗಳು. ಅದರಲ್ಲೂ ಬಾಲಿ ಮತ್ತು ಜಕಾರ್ತಾದ ಪ್ರಾಪಂಚಿಕ ಆಕರ್ಷಣೆಗಳಿಂದ ವಿಶ್ವದಾದ್ಯಂತ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ರಾತ್ರಿಯನ್ನು ಪೂರ ಹಗಲಾಗಿಸಿ ಜಗಮಗಿಸುವ ಬೆಳಕಿನಲ್ಲಿ ನಡೆಯುವ ಕ್ಲಬ್ಬುಗಳು, ಅಲ್ಲಿ ನರ್ತಿಸುವ ಬಾರ್ ಡ್ಯಾನ್ಸರುಗಳು, ಬೀದಿಬದಿಯಲ್ಲಿ ಸರಾಗವಾಗಿ ಸೆಕ್ಸ್ ಗಾಗಿ ಅಗ್ಗವಾಗಿ ಸಿಗುವ ಹುಡುಗಿಯರು ಇಂಡೋನೇಷ್ಯಾದ ಪ್ರಮುಖ ಬಿಜಿನೆಸ್ ಆಗಿಹೋಗಿದೆ. ಅಂದಹಾಗೆ ಅಲ್ಲಿಯ 188 ಇಂಡೋ ರುಪಾಯಕ್ಕೆ ನಮ್ಮ ಒಂದು ರೂಪಾಯಿ ಸಮನಾಗಿದೆ. ಜುಜುಬಿ ಖರ್ಚು ಮಾಡಿದರೂ ಅಲ್ಲಿ ನಮಗೆ ಸಿಗಲಿದೆ ರಾಜಾತಿತ್ಯ.

ಇನ್ನೂ ಇಂತಹ ಹಲವು ಮತ್ತು ಇವೆಲ್ಲಕ್ಕಿಂತಲೂ ತೀರಾ ಅಗ್ಗದ ಕರೆನ್ಸಿಯ ದೇಶಗಳಿವೆ ಉದಾಹರಣೆಗೆ ಅದೊಂದು ದೇಶವಿದೆ. ಈ ದೇಶಕ್ಕೆ ನೀವು ಕಾಲಿಟ್ಟ ಕೂಡಲೇ ನೀವು ಚಕ್ರವರ್ತಿಯ ಥರ ಆಗುತ್ತೀರಿ. ಅಲ್ಲಿ ನಮ್ಮ 1 ರೂಪಾಯಿಗೆ 545 ರುಪಾಯಗಳ ಬೃಹತ್ ಮೊತ್ತ ಸಿಗುತ್ತವೆ. ಇದು ಯಾರಿಗುಂಟು ಯಾರಿಗಿಲ್ಲ ಅವಕಾಶ. ಆದರೆ ನಮ್ಮ ದುರದೃಷ್ಟಕ್ಕೆ ಅಲ್ಲಿಗೆ ಯಾರೂ ಹೋಗಲ್ಲ. ಆ ಊರು ಬೇರೆ ಯಾವುದೂ ಅಲ್ಲ, ಅದು ಇರಾನ್. ಇವತ್ತಿಗೆ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಅತ್ಯಂತ ಕೀಳು ಮಟ್ಟದ ಕರೆನ್ಸಿ ಮೌಲ್ಯ ಇರುವುದು ಇರಾನ್ ನಲ್ಲಿ.

ಶ್ರೀಮಂತರಾಗಲು ಬಹಳ ಕಷ್ಟಪಟ್ಟು ದುಡಿಯಬೇಕೆಂದೇನಿಲ್ಲ, ಕೆಲವೊಮ್ಮೆ ಸ್ಥಳ ಬದಲಾವಣೆ, ವಿದೇಶ ಸುತ್ತಿದರೂ ಸಾಕಲ್ಲವೇ !!

1 thought on “ಈ ನೆಲಕ್ಕೆ ಕಾಲಿಟ್ರಿ ಅಂದ್ಕೊಳ್ಳಿ, ನೀವು ದಿಢೀರ್ ಶ್ರೀಮಂತರಾದಿರೀ ಅಂತ್ಲೇ ಅರ್ಥ !! | ಇವತ್ತಿನಿಂದ ನಾಳೆಗೆ 545 ಪಟ್ಟು ಶ್ರೀಮಂತರಾಗಬೇಕಾದರೆ ಹೀಗೆ ಮಾಡಿ”

  1. Pingback: ಮಳಲಿ ಮಸೀದಿ ವಿವಾದ : ಎಸ್.ಡಿ.ಪಿ.ಐ ಗೆ ಖಡಕ್ ವಾರ್ನಿಂಗ್ ಮಾಡಿದ ಜಮಾತ್ ಕಮಿಟಿ - Hosakananda

Leave a Reply

error: Content is protected !!
Scroll to Top
%d bloggers like this: