*SHOCKING NEWS*ಮಂಗಳೂರು | ಬರೋಬ್ಬರಿ 518 ಮಂದಿ ಅಕ್ರಮ ಬಾಂಗ್ಲಾ ವಲಸಿಗರ ವಶಕ್ಕೆ, ತೀವ್ರ ವಿಚಾರಣೆ !
ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಪತ್ತೆಗೆ ಗೃಹ ಸಚಿವರ ಸೂಚನೆ -518 ವಿದೇಶಿಗರು ವಶಕ್ಕೆ – ಒಂದು ವಾರದಿಂದ ಪೊಲೀಸ್ ಕಾರ್ಯಾಚರಣೆ.
ಮಂಗಳೂರು : ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ಪತ್ತೆ ಹಚ್ಚಲು ಪೊಲೀಸ್ ರು ಕಾರ್ಯ ಚರಣೆ ನಡೆಸುತ್ತಿದ್ದಾರೆ.
ಸರಿಯಾದ ದಾಖಲೆಗಳು ಇಲ್ಲದ 518 ವಿದೇಶಿಗರೆಂದು ಹೇಳಲಾದವರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯ ಸೂಚನೆಯಂತೆ ಪೊಲೀಸ್ ರು ಪತ್ತೆ ಮಾಡಲು ಒಂದು ವಾರದಿಂದ ಹುಡುಕಾಟ ನಡೆಸುತ್ತಿದ್ದಾರೆ.
ಈಗಾಗಲೇ ಮಂಗಳೂರು ನಗರ 18 ಪೊಲೀಸ್ ಠಾಣೆಯಲ್ಲಿ ನೆಲೆಸಿರುವ 4 ಸಾವಿರ ವಿದೇಶಿಗರನ್ನು ಗುರುತಿಸಲಾಗಿದೆ.ಇದರಲ್ಲಿ ಸೂಕ್ತ ದಾಖಲೆಗಳು ಇಲ್ಲದ 518 ಮಂದಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.
ಮಂಗಳೂರಿನ ರೋಸಾರಿಯೋ ಹಾಲ್ ನಲ್ಲಿ ವಿಚಾರಣೆ ನಡೆಯುತ್ತಿದೆ.
18 ವಿವಿಧ ಪೊಲೀಸ್ ಠಾಣೆಗೆ ಸೇರಿರುವ ವ್ಯಾಪ್ತಿಯನ್ನು ಆಯಾ ಠಾಣೆಗೆಂದು ಮಾಡಲಾದ ಕೌಂಟರ್ ನಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸುವ ಕಾರ್ಯಾಚರಣೆ ನಡೆಯುತ್ತಿದೆ.
ಇವರಲ್ಲಿ ಹಲವಾರು ಸಿಕ್ಕಿಂ, ತಮಿಳುನಾಡು, ಒಡಿಸಾ, ಪಕ್ಷಿಮ ಬಂಗಾಳ ಮೂಲದವರೆಂದು ತಿಳಿದ್ದಿದು.ದಾಖಲೆ ಜೊತೆಗೆ ಮೊಬೈಲ್ ಪರಿಶೀಲನೆ, ಗೂಗಲ್ ಮ್ಯಾಪ್ ನಲ್ಲಿ ಖಾಯಂ ವಿಳಾಸ ಪರಿಶೀಲನೆ ಸಂಬಂಧಿಕರ, ಮತ್ತು ಸ್ನೇಹಿತರ ದೃಡೀಕರಣ ಮುಂತಾದ 20 ಅಂಶಗಳನ್ನು ಇಟ್ಟು ಕೊಂಡು ವಿಚಾರಣೆ ನಡೆಸಲಾಯಿತು.