ಬೆಳ್ತಂಗಡಿ | ಧರ್ಮಸ್ಥಳಕ್ಕೆ ಬಂದ ಮಹಮದ್ ಕೈಫ್ ಮತ್ತು ಹಿಂದೂ ಹುಡುಗಿ | ಸರ್ಕಾರಿ ಬಸ್ಸಿನಲ್ಲಿದ್ದ ಜೋಡಿ ಈಗ ಪೊಲೀಸ್ ಸ್ಟೇಶನ್ ಕಡೆಗೆ

Share the Article

ಮತ್ತೆ ಕೊಕ್ಕಡದಲ್ಲಿ ಟ್ರಿಪ್ ನಿರತ ಅನ್ಯಮತೀಯ ಜೋಡಿ ಸಿಕ್ಕಿಬಿದ್ದಿದ್ದಾರೆ. ಧರ್ಮಸ್ಥಳದಿಂದ ಬೆಂಗಳೂರಿಗೆ ಹಾದು ಹೋಗುವ ಸರಕಾರಿ ಬಸ್ವಿನಲ್ಲಿ ಅನ್ಯಕೋಮಿನ ಜೋಡಿ ಇರುವುದು ಸುದ್ದಿಯಾಗುತ್ತಿದ್ದಂತೆ ಧರ್ಮಸ್ಥಳ ಹಾಗೂ ಕೊಕ್ಕಡ ಆಸುಪಾಸಿನ ಹಿಂದೂ ಕಾರ್ಯಕರ್ತರು ಕೊಕ್ಕಡದಲ್ಲಿ ಬಸ್ ಗೆ ಕೈ ಅಡ್ಡ ಹಾಕಿದ್ದರು. ಅಲ್ಲಿ ಬಸ್ ನಿಲ್ಲಿಸಿ ಈ ಜೋಡಿಯನ್ನು ವಿಚಾರಿಸಿದ್ದಾರೆ.

ಆತ ಬೆಂಗಳೂರಿನ ದೇವನಹಳ್ಳಿಯ ಮುಸ್ಲಿಂ ಹುಡುಗ. ಬಸ್ಸು ಅಡ್ಡಗಟ್ಟಿ ಜೋಡಿಯನ್ನು ವಿಚಾರಿಸಿದಾಗ ಯುವಕನು ತಬ್ಬಿಬ್ಬಾಗಿ ಹಾಗೂ ಹೆಸರನ್ನು ತಿರುಚಿ ಹೇಳಿದ್ದಾನೆ. ನಂತರ ಬ್ಯಾಗಿನಿಂದ ಐಡಿ ಕಾರ್ಡ್ ತೆಗೆದು ವಿಚಾರಿಸಿದಾಗ ಗುಟ್ಟು ಬಯಲಾಗಿದೆ. ಯುವಕನ ಹೆಸರು ಮಹಮ್ಮದ್ ಕೈಫ್ ಹಾಗೂ ಯುವತಿ xxx ಎಂದು ತಿಳಿದುಬಂದಿದೆ. ಆತ ದೇವನಹಳ್ಳಿ ತಾಲೂಕಿನ ಬೂದಿಗೆರೆಯ ಅಬ್ದುಲ್ ಸಲಾಂ ಎಂಬವರ ಮಗ.

ತನ್ನ ಮನೆಯವರಿಗೆ ಗೊತ್ತಿಲ್ಲದೆ ಪ್ರಯಾಣ ಬೆಳೆಸಿದ್ದಾರೆ ಎಂದು ವಿಚಾರಣೆ ವೇಳೆ ಗೊತ್ತಾಗಿದೆ. ಯುವತಿ ಅಪ್ರಾಪ್ತ ಬಾಲಕಿ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಹೆಚ್ಚಿನ ವಿಚಾರಣೆಗಾಗಿ ಅವರನ್ನು ಕರೆದೊಯ್ಯಲಾಗುತ್ತಿದೆ.ಈ ಜೋಡಿಯನ್ನು ಹಿಂದೂ ಸಂಘಟನೆಯ ಹುಡುಗರು ಈಗ ವಿಚಾರಿಸಿ ತಕ್ಷಣ ಬಸ್ಸಿನಿಂದ ಕೆಳಗೆ ಇಳಿಸಿ, ಧರ್ಮಸ್ಥಳ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಹಿಂದೂ ಪವಿತ್ರ ಕ್ಷೇತ್ರ ಧರ್ಮಸ್ಥಳಕ್ಕೆ ಮಜಾ ಹೊಡೆಯಲು ಈಗೀಗ ಹೆಚ್ಚೆಚ್ಚು ಅನ್ಯಕೋಮಿನ ಜನರು ಬರುತ್ತಿರುವುದು ಆತಂಕಕಾರಿ ಸಂಗತಿ. ಭದ್ರತೆಯ ದೃಷ್ಟಿಯಿಂದ ಕೂಡಾ ಇದು ಕಳವಳಕಾರಿ ವಿಷಯ ಎಂದು ಸಂಘಟನೆಯಲ್ಲಿ ಸಕ್ರಿಯರಾಗಿರುವ ಮುಖಂಡರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

Leave A Reply