ವಾಹನ ಸವಾರರೇ, ಈ ನಿಯಮ ಉಲ್ಲಂಘಿಸಿದರೆ ನಿಮ್ಮ ‘ವಾಹನ ಮುಟ್ಟುಗೋಲು’ ಗ್ಯಾರಂಟಿ!

ಡ್ರಿಂಕ್ ಅಂಡ್ ಡ್ರೈವ್ ವಿರುದ್ಧದ ಕ್ರಮವನ್ನು ಪೊಲೀಸರು ಮತ್ತಷ್ಟು ಕಠಿಣಗೊಳಿಸಿದ್ದು, ಕುಡಿದು ವಾಹನ ಚಲಾಯಿಸುವ ಸವಾರರಿಗೆ ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ. ಅದೇನೆಂದರೆ, ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳೋದಾಗಿ ಎಚ್ಚರಿಕೆ ನೀಡಿದ್ದಾರೆ.

 

ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಡಾ.ಬಿ.ಆರ್.ರವಿಕಾಂತೇಗೌಡ ಈ ಬಗ್ಗೆ ಎಚ್ಚರಿಕೆ ನೀಡಿದ್ದು, ‘ಡ್ರಿಂಕ್ ಅಂಡ್ ಡ್ರೈವ್ ಒಂದು ಅಪಾಯಕಾರಿ ಸಂಚಾರ ಉಲ್ಲಂಘನೆ. ಈ ಸಂಚಾರ ಉಲ್ಲಂಘನೆಯನ್ನು ಪೊಲೀಸರು ರಾಜಿ
ಮಾಡಿಕೊಳ್ಳುವುದಿಲ್ಲ. ನಿಯಮ ಉಲ್ಲಂಘಿಸುವವರು
ವಾಹನ ವಾಪಾಸ್ ತೆಗೆದುಕೊಳ್ಳಲು ಸಾಧ್ಯವಿಲ್ಲ.
ಪೊಲೀಸರು ವಾಹನವನ್ನು ಮುಟ್ಟುಗೋಲು
ಹಾಕಿಕೊಳ್ಳುತ್ತಾರೆ ಮತ್ತು ಸ್ವೀಕೃತಿಯನ್ನ ನೀಡುತ್ತಾರೆ. ಇನ್ನು ದಂಡವನ್ನು ನ್ಯಾಯಾಲಯದಲ್ಲಿ ಮಾತ್ರ ಪಾವತಿಸಬೇಕು’ ಎಂದಿದ್ದಾರೆ.

Leave A Reply

Your email address will not be published.