ಮದುವೆ ಮಂಟಪದಲ್ಲಿ ವರನನ್ನು ನೋಡಿ ದಿಢೀರನೆ ಅತ್ತ ವಧು!!! ಕಾರಣವೇನು ಗೊತ್ತೇ?

Share the Article

ಮದುವೆ ಎನ್ನುವುದು ಎಲ್ಲರ ಬಾಳಲ್ಲಿ ಒಂದು ಹೊಸ ಕಲ್ಪನೆ, ಒಂದು ನವನವೀನ ಆಸೆಗಳನ್ನು ಹುಟ್ಟಿಸೋ ಸಂದರ್ಭ ಎಂದೇ ಹೇಳಬಹುದು. ಈ ಸಂದರ್ಭದಲ್ಲಿ ಗಂಡು ಹೆಣ್ಣಿನ ಭಾವನೆ ಇದೇ ರೀತಿ ಇರುತ್ತದೆ. ಅವರ ಕಲ್ಪನೆಗೆ ತಕ್ಕ ಹುಡುಗ, ಹುಡುಗಿ ಸಿಕ್ಕರೆ ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು ಅಂತಾನೇ ಹೇಳಬಹುದು ಅಲ್ವಾ. ಇಲ್ಲೂ ನಾವು ಹೇಳುವ ಈ ವಿಷಯದಲ್ಲಿ ವಧು ಮದುವೆ ಮಂಟಪಕ್ಕೆ ಬಂದಾಗ, ವರನನ್ನು ನೋಡಿ ಕಣ್ತುಂಬಿಕೊಳ್ಳುವ ದೃಶ್ಯ ಮನಮೋಹಕವಾಗಿದೆ. ಆಕೆಯ ಕಣ್ಣೀರು ನಿಜಕ್ಕೂ ಎಲ್ಲರ ಕಣ್ಣಾಲಿಗಳನ್ನು ತುಂಬಿತ್ತು. ಇದಕ್ಕೆ ವರ ಕೂಡಾ ಹೊರತಾಗಿಲ್ಲ.

ಮದುವೆಯ ನಂತರ ಹೆಣ್ಣಿನ ಹೊಸ ಜೀವನ ಆರಂಭವಾಗುತ್ತದೆ. ಮದುವೆಯ ದಿನ ತನ್ನ ಹೊಸ ಜೀವನದ ಬಗ್ಗೆ ಹೆಣ್ಣು ಸಾವಿರಾರು ಕನಸು ಹೊತ್ತು ಮನೆಯಿಂದ ಹೆಜ್ಜೆ ಇಡುತ್ತಾಳೆ. ತನ್ನ ಬಾಳ ಸಂಗಾತಿಯೊಂದಿಗೆ ಕಳೆಯುವ ಮುಂದಿನ ಜೀವನದ ಬಗ್ಗೆ ಭಯ ಕೂಡಾ ಆ ಹೆಣ್ಣು ಮಗಳನ್ನು ಆವರಿಸಿರುವುದು ಕೂಡಾ ಅಷ್ಟೇ ಸತ್ಯ.

https://www.instagram.com/reel/CeyLpLSoGyR/?utm_source=ig_web_copy_link

ಹಾಗೆಯೇ ಹೆಣ್ಣು ಮದುವೆ ಮನೆ ಪ್ರವೇಶಿಸುವಾಗ ತಾನು ಮುಂದಿನ ಬದುಕು ಯಾರೊಂದಿಗೆ ಕಳೆಯಬೇಕೋ ಆ ಜೀವ ತನ್ನೆದುರು ಕಂಡಾಗ ಭಾವುಕಗೊಳ್ಳುವ ಕ್ಷಣ ಅದ್ಭುತ. ಸಾಮಾಜಿಕ ಜಾಲತಾಣದಲ್ಲಿ ಇಂಥದ್ದೇ ವಿಡಿಯೋವೊಂದು ವೈರಲ್ ಆಗಿದೆ. ಈ ವೀಡಿಯೋದಲ್ಲಿ ವರ ಮಂಟಪದಲ್ಲಿ ಕುಳಿತಿರುವುದು ಕಂಡು ಬರುತ್ತದೆ. ತನ್ನ ಮನದನ್ನೆಯನ್ನು ನೋಡುವ ಕುತೂಹಲ ವರನ ಕಣ್ಣಿನಲ್ಲಿಯೂ ಎದ್ದು ಕಾಣುತ್ತದೆ. ವಧು ವೇದಿಕೆಗೆ ಬರುತ್ತಿದ್ದಂತೆಯೇ ವರನನ್ನು ಕಂಡ ವಧು ಕಣ್ಣೀರಾಗುತ್ತಾಳೆ. ಆ ಕಣ್ಣೀರಿನಲ್ಲಿ ಸಂತೋಷ, ಭಯ, ಕಾತುರ ಎಲ್ಲವೂ ಅಡಗಿದೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ವಧು ಮಾತ್ರ ಇಲ್ಲಿ ಭಾವುಕಳಾಗುವುದರ ಜೊತೆಗೆ ವರನ ಕಣ್ಣಂಚಲ್ಲಿ ಕೂಡಾ ನೀರು ಇರುತ್ತದೆ.

ವೀಡಿಯೋದ ಕೊನೆಯಲ್ಲಿ ಕಂಡು ಬರುವ ದೃಶ್ಯ ಹೃದಯಸ್ಪರ್ಶಿಯಾಗಿದೆ.  ಮದುವೆಯ ಈ ವೀಡಿಯೋ ವೀಕ್ಷಕರಿಗೆ ಬಹಳ ಇಷ್ಟವಾಗುತ್ತಿದೆ.

Leave A Reply