Breaking News: ಕನ್ಹಯ್ಯಲಾಲ್ ಮರ್ಡರ್ ಮಾದರಿಯ ಇನ್ನೊಂದು ಜಿಹಾದಿ ಹತ್ಯೆ !

ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಬಿಜೆಪಿ ವಕ್ತಾರೆ ನೂಪರ್ ಶರ್ಮಾ ನೀಡಿದ ಹೇಳಿಕೆ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಗಿತ್ತು. ನೂಪುರ್ ರನ್ನು ಬೆಂಬಲಿಸಿದ ಕಾರಣಕ್ಕಾಗಿ ರಾಜಸ್ಥಾನದ ಹಿಂದೂ ಟೈಲರ್ ಕನ್ಹಯ್ಯಲಾಲ್ ಭೀಕರ ಹತ್ಯೆ ನಡೆದಿತ್ತು. ಇದೀಗ ಆ ಪ್ರಕರಣ ಮಾಸುವ ಬೆನ್ನಲ್ಲೇ ಮತ್ತೊಂದು ಹತ್ಯೆಯಾಗಿರುವ ವಿಚಾರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

 

ಮಹಾರಾಷ್ಟ್ರದ ಅಮರಾವತಿಯಲ್ಲಿ ಮೆಡಿಕಲ್ ಶಾಪ್ ಮಾಲೀಕನಾಗಿರುವ ಉಮೇಶ್ ಪ್ರಹ್ಲಾದ್ ರಾವ್, ನೂಪರ್ ಶರ್ಮಾ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು ಎನ್ನಲಾಗಿದೆ. ಇದೇ ದ್ವೇಷಕ್ಕೆ ಉಮೇಶ್ ನನ್ನು ಹತ್ಯೆ ಮಾಡಲಾಗಿದೆ. ಐದು ಜನ ರಕ್ಕಸರು ಸೇರಿ ಉಮೇಶ್ ನ್ನು, ಅವರ ಮಗ, ಸೊಸೆಯ ಮುಂದೆಯೇ ಹತ್ಯೆಗೈದಿದ್ದಾರೆ.

ಜೂನ್ 21 ರಂದು ಅಮರಾವತಿ ಜಿಲ್ಲೆಯಲ್ಲಿ 54 ವರ್ಷದ ಪಶುವೈದ್ಯ ಉಮೇಶ್ ಪ್ರಹ್ಲಾದರಾವ್ ಕೋಲ್ಹೆ ಅವರನ್ನು ಹತ್ಯೆ ಮಾಡಲಾಗಿತ್ತು. ಘಟನೆ ಸಂಬಂಧ ಪೊಲೀಸರು ಈಗಾಗಲೇ 7 ಜನರನ್ನು ಬಂಧಿಸಿದ್ದು, ಈ ಪೈಕಿ ಮುದಾಸಿನ್ ಅಹ್ಮದ್ ಹಾಗೂ ಶಾರೂಖ್ ಪಠಾಣ್ ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕೆ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.