ಹೆಚ್ಚುವರಿ ಹಣ ಪಾವತಿಸಿ 2611 ಬೈಕ್ ನೋಂದಣಿ ಸಂಖ್ಯೆ ಪಡೆದ ಉದಯಪುರದ ನರಹಂತಕರು!

ಉದಯಪುರದಲ್ಲಿ ನಡೆದಿದ್ದ ಟೈಲರ್ ಕನ್ಹಯ್ಯ ಲಾಲ್ ಬರ್ಬರ ಹತ್ಯೆ ಪ್ರಕರಣದ ಇಡೀ ದೇಶವನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಇತ್ತೀಚೆಗೆ ಆರೋಪಿಗಳಿಗೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪಿನ ನಂಟು ಹೊಂದಿರುವ ವಿಚಾರದ ಗೊತ್ತಾದ ಬೆನ್ನಲ್ಲೇ ಮತ್ತೊಂದು ಅಘಾತಕಾರಿ ಅಂಶವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.

ಕೊಲೆ ಆರೋಪಿ ರಿಯಾಜ್ ಅಖ್ತರಿ ತನ್ನ ಬೈಕ್ ಗೆ ” 2611 “ಎಂದು ಬರೆದ ನಂಬರ್ ಪ್ಲೇಟ್ ಪಡೆಯಲು ಹೆಚ್ಚುವರಿ ಹಣವನ್ನು ಪಾವತಿಸಿದ್ದಾನೆ” ಎಂದು ತಿಳಿದುಬಂದಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಮುಂಬೈ ಮೇಲೆ ಪಾಕಿಸ್ತಾನದ ಲಷ್ಕರ್ ಎ ತೊಯ್ಬಾ ಉಗ್ರರು ದಾಳಿ ನಡೆಸಿದ ಭೀಕರ ದಿನವೇ 2008 ರ 26/11 . ಅಂದು ಸಮುದ್ರ ಮಾರ್ಗದಿಂದ ಬಂದ ಈ ನರಹಂತಕ ದುಷ್ಕರ್ಮಿಗಳು ತಾಜ್ ಮಹಲ್ ಹೊಟೇಲ್, ಒಬೇರಾಯ್ ಹೊಟೇಲ್, ಲಿಯೋಪೋಲ್ಡ್ ಕೆಫೆ ನಾರಿಮನ್ ಹೌಸ್, ಛತ್ರಪತಿ ಶಿವಾಜಿ ರೈಲ್ವೆ ಟರ್ಮಿನಲ್ ಮೊದಲಾದ ಕಡೆಗೆ ಬಂದು ಮನಬಂದಂತೆ ತಮ್ಮ ಬಂದೂಕಿನಿಂದ ದಾಳಿ ಮಾಡಿದ್ದರು. 26/11 ಮುಂಬೈ ಮೇಲೆ ನಡೆದ ದಾಳಿಯನ್ನು ಯಾರೇ ಸಾರ್ವಜನಿಕರು ಇಲ್ಲಿಯವರೆಗೆ ಮರೆತಿಲ್ಲ.

ಈತನ ಬೈಕ್ ನೋಂದಣಿ ಸಂಖ್ಯೆಯನ್ನು ಮುಂಬೈ ಭೀಕರ ಭಯೋತ್ಪಾದನಾ ದಾಳಿಯನ್ನು ನಡೆದ ದಿನಾಂಕಕ್ಕೆ ಪೊಲೀಸರು ಲಿಂಕ್ ಮಾಡಿದ್ದಾರೆ. ಇದೇ ನೋಂದಣಿಯ ಬೈಕ್ ನ ಮೂಲಕವೇ ಇಬ್ಬರು ಹಂತಕರಾದ ಗೋಸ್ ಮೊಹಮ್ಮದ್ ಮತ್ತು ರಿಯಾಜ್ ಅಖ್ತರಿ ಟೈಲರ್ ಕನ್ಹಯ್ಯಾ ಲಾಲ್ ಅವರ ಕುತ್ತಿಗೆಯನ್ನು ಕ್ರೂರವಾಗಿ ಸೀಳಿ ಪರಾರಿಯಾಗಲು ಯತ್ನಿಸಿದ್ದರು. RJ 27 AS 2611 ರ ನೋಂದಣಿ ಸಂಖ್ಯೆ ಹೊಂದಿರುವ ಈ ಬೈಕ್ ಈಗ ಉದಯಪುರದ ಧನ್ ಮಂಡಿ ಪೊಲೀಸ್ ಠಾಣೆಯ ವಶದಲ್ಲಿದೆ. ಆರೋಪಿಗಳ ಬಂಧನದ ಬಳಿಕ ಈ ಬೈಕನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾದೇಶಿಕ ಸಾರಿಗೆ ಕಚೇರಿ (RTO) ದಾಖಲೆಗಳು 2013 ರಲ್ಲಿ HDFC ನಿಂದ ಸಾಲವನ್ನು ಪಡೆದು ರಿಯಾಜ್ ಅಖ್ತರಿ ಬೈಕು ಖರೀದಿ ಮಾಡಿದ್ದು, ವಾಹನದ ವಿಮೆಯು 2014 ಮಾರ್ಚ್‌ನಲ್ಲಿ ಮುಕ್ತಾಯಗೊಂಡಿತ್ತು

26 11 ನೋಂದಣಿ ಸಂಖ್ಯೆಯನ್ನು ರಿಯಾಜ್ ಉದ್ದೇಶಪೂರ್ವಕವಾಗಿ ಕೇಳಿ ಪಡೆದಿದ್ದಾನೆ. ಇದೇ ನಂಬರ್ ಪ್ಲೇಟ್‌ಗಾಗಿ ರೂ.5,000 ಹೆಚ್ಚಾಗಿ ಪಾವತಿಸಿದ್ದಾನೆ ಎಂದು ತಿಳಿದು ಬಂದಿದೆ. ಪೊಲೀಸರು ಈ ನೋಂದಣಿ ಸಂಖ್ಯೆಯ ಮೂಲಕ ರಿಯಾಜ್ ಅಖ್ತರಿಯ ಮತ್ತಷ್ಟು ಮಾಹಿತಿ ಹಾಗೂ ಇತರ ಸಂಚಿನ ಬಗ್ಗೆ ಪ್ರಮುಖ ಸುಳಿವುಗಳನ್ನು ಕಲೆ ಹಾಕುತ್ತಿದ್ದಾರೆ.

2014ರ ಹಿಂದೆಯೇ ರಿಯಾಜ್‌ ಯಾವ ಸಂಚು ರೂಪಿಸಿದ್ದ ಎಂಬುದಕ್ಕೆ ನಂಬರ್ ಪ್ಲೇಟ್ ಕೂಡ ಸುಳಿವು ನೀಡಬಹುದೆಂದು ಪೊಲೀಸರು ನಂಬಿದ್ದು, ರಿಯಾಜ್‌ನ ಪಾಸ್‌ಪೋರ್ಟ್ ನಲ್ಲೂ 2014 ರಲ್ಲಿ ನೇಪಾಳಕ್ಕೆ ಭೇಟಿ ನೀಡಿದ್ದಾನೆ. ಇದು ತನಿಖೆಗೆ ಮತ್ತಷ್ಟು ಪುಷ್ಟಿ ನೀಡಿದೆ. ಈತ ಪಾಕಿಸ್ತಾನಕ್ಕೆ ಮಾಡಿರುವ ದೂರವಾಣಿ ಕರೆಗಳು ಕೂಡಾ ತನಿಖೆಯ ಭಾಗವಾಗಲಿದೆ.

error: Content is protected !!
Scroll to Top
%d bloggers like this: