ಆಭರಣ ಪ್ರಿಯರೇ ಗಮನಿಸಿ, ಚಿನ್ನದ ಮೇಲಿನ ‘ಆಮದು ಸುಂಕ’ ಹೆಚ್ಚಿಸಿದ ಕೇಂದ್ರ ಸರ್ಕಾರ !!!
ಚಿನ್ನ ಖರೀದಿದಾರರಿಗೆ ಇದೊಂದು ಕಹಿ ಸುದ್ದಿ ಎಂದೇ ಹೇಳಬಹುದು. ಆಮದು ಸುಂಕ ಹೆಚ್ಚಳಗೊಳಿಸಿ ಸರಕಾರ ಅಧಿಸೂಚನೆ ಹೊರಡಿಸಿದೆ. ಭಾರತವು ಚಿನ್ನದ ಮೇಲಿನ ತನ್ನ ಮೂಲ ಆಮದು ಸುಂಕವನ್ನ ಹೆಚ್ಚಿಸಿದ್ದು, ದೇಶೀಯ ಬೆಲೆಗಳು ತೀವ್ರವಾಗಿ ಹೆಚ್ಚಿಸಿದೆ. ಹಳದಿ ಲೋಹದ ಮೇಲಿನ ಆಮದು ಸುಂಕವನ್ನು ಶೇ.7.5ರಿಂದ ಶೇ.12.5ಕ್ಕೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.
ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಚಿನ್ನದ ಆಮದುದಾರ ರಾಷ್ಟ್ರವಾಗಿದ್ದು, ತನ್ನ ಹೆಚ್ಚಿನ ಚಿನ್ನದ ಬೇಡಿಕೆಯನ್ನು ಆಮದುಗಳ ಮೂಲಕ ಪ್ಯೂಫಿಲ್ ಮಾಡುತ್ತದೆ. ಇದು ರೂಪಾಯಿಯ ಮೇಲೆ ಒತ್ತಡ
ಹೇರುವುದರಿಂದ, ಇಂದು ಯುಎಸ್ ಡಾಲರ್ ವಿರುದ್ಧ ದಾಖಲೆಯ ಕನಿಷ್ಠ 779ಕ್ಕೆ ತಲುಪಿದೆ. ಅಂದ್ದಾಗೆ, ಎಂಸಿಎಕ್ಸ್ನಲ್ಲಿ ಚಿನ್ನದ ದರ ಸುಮಾರು 3% ಏರಿಕೆಯಾಗಿ ಪ್ರತಿ 10 ಗ್ರಾಂಗೆ ರೂ.51,900ಕ್ಕೆ ತಲುಪಿದೆ.