“ಟ್ಯಾಕ್ಸ್” ವಸೂಲಾತಿಗೆ ಬಿಬಿಎಂಪಿಯಿಂದ ಮಾಸ್ಟರ್ ಪ್ಲ್ಯಾನ್ !

ಟ್ಯಾಕ್ಸ್ ಕಟ್ಟೋದಕ್ಕೆ ಬೆಂಗಳೂರಿನಲ್ಲಿರುವ ಬಹುಪಾಲು ಪ್ರತಿಷ್ಠಿತ ಕಂಪನಿಗಳು, ಮಾಲ್‌, ಆಸ್ಪತ್ರೆಗಳು ಟ್ಯಾಕ್ಸ್ ಹಿಂದೇಟು ಹಾಕುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಿದೆ. ಈ ಬಗ್ಗೆ ಈಗಾಗಲೇ ಬಿಬಿಎಂಪಿ ನೋಟಿಸ್‌, ತಮಟೆ ಚಳುವಳಿ, ಒತ್ತಡ ಹೀಗೆ ಅನೇಕ ರೀತಿಯಲ್ಲಿ ಕ್ರಮಗಳನ್ನು ಕೈಗೊಂಡಿದೆ. ಆದರೂ ಯಾವುದಕ್ಕೂ ಕಂಪನಿಗಳು ಕ್ಯಾರ್ ಮಾಡಿಲ್ಲ. ಹಾಗಾಗಿ ಇದೀಗ ತೆರಿಗೆ ವಸೂಲಿ ಮಾಡಲು ಬಿಬಿಎಂಪಿ ಹೊಸ ರೀತಿಯಲ್ಲಿ ಮಾಸ್ಟರ್‌ ಪ್ಲ್ಯಾನ್‌ ಮಾಡಿದೆ. 

ಐಟಿ ಇಲಾಖೆಯ ಸಲಹೆ ಮೇರೆಗೆ  ನೇರವಾಗಿ ಬ್ಯಾಂಕ್‌ ಅಕೌಂಟ್‌ ಲಿಂಕ್‌ ಮೂಲಕ  ʻಡಿಜಿಟಲ್‌‌ ಮಾರ್ಗ’ದ ಮೂಲಕ ವಸೂಲಾತಿಗೆ ಬಿಬಿಎಂಪಿ ಮುಂದಾಗಿದೆ. ಯಾರು ತೆರಿಗೆ ಕಟ್ಟೋದಕ್ಕೆ ಹಿಂದೇಟು ಹಾಕುತ್ತಾರೋ ಅವರಿಗೆ ಇದೀಗ ಮತ್ತೊಂದು ಶಾಕ್‌ ಎದುರಾಗಿದ್ದಂತೂ ನಿಜ. ನಿಮ್ಮ ಇಎಂಐ ಹೇಗೆ  ಅಕೌಂಟ್‌ನಿಂದ ಹಣ ಕಟ್‌ ಅಗುತ್ತದೆಯೇ ಅದೇ ರೀತಿಯಲ್ಲಿ ಬಡ್ಡಿ ಸಮೇತ ವಸೂಲಾತಿ ಮಾಡಲು ಬಿಬಿಎಂಪಿ ಅಧಿಕಾರಿಗಳು ಮುಂದಾಗುತ್ತಾರೆ. ಬಿಬಿಎಂಪಿಯ ಈ ಹೊಸ ಪ್ರಯೋಗದಿಂದ ಪ್ರತಿಷ್ಠಿತ ಕಂಪನಿಗಳು ತೆರೆಗೆ ವಸೂಲತಿ ಮಾಡಲಾಗುತ್ತದೆಯೋ ಇಲ್ಲವೇ ಅನ್ನೋದನ್ನು ಕಾದುನೋಡಬೇಕಾಗಿದೆ.

Leave A Reply

Your email address will not be published.