ಬೆಳ್ತಂಗಡಿ: ಕೆರೆಗೆ ಬಿದ್ದು ವ್ಯಕ್ತಿ ಸಾವು, 30 ಅಡಿ ಆಳದಲ್ಲಿದ್ದ ಮೃತದೇಹವನ್ನು ಮೇಲಕ್ಕೆತ್ತಿದ ಮುಳುಗು ತಜ್ಞ

Share the Article

ಬೆಳ್ತಂಗಡಿ : ವ್ಯಕ್ತಿಯೋರ್ವರು ಕೆರೆಗೆ ಬಿದ್ದು ಮೃತಪಟ್ಟ ಘಟನೆ ಬಂದಾರು ಗ್ರಾಮದ ಪಾಪುದಡ್ಕ ಎಂಬಲ್ಲಿ ನಡೆದಿದೆ.

ಮೃತರು ಪಾಪುದಡ್ಕ ನಿವಾಸಿ ಲಕ್ಷ್ಮಣ ಗೌಡ (54).

ಮೃತರು, ನಿನ್ನೆ ಸಂಜೆ ಹುಲ್ಲು ಕೊಯ್ಯಲೆಂದು ತೆರಳಿದ್ದ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ. ಇವರ ಮೃತದೇಹ ಕೆರೆಯ ತಳ ಸೇರಿತ್ತು.

ಈ ಬಗ್ಗೆ ಮಾಹಿತಿ ಪಡೆದ ನುರಿತ ಈಜುಗಾರ ಮುಳುಗು ತಜ್ಞ ಮುಹಮ್ಮದ್ ಬಂದಾರು, ಸುಮಾರು 30 ಅಡಿಯಷ್ಟು ನೀರಿದ್ದ ಕೆರೆಯಲ್ಲಿ ಮುಳುಗಿ ತಳದಲ್ಲಿದ್ದ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.

Leave A Reply