ಉಡುಪಿ : ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಅನುತ್ತೀರ್ಣ, ವಿದ್ಯಾರ್ಥಿನಿ ಆತ್ಮಹತ್ಯೆ!

Share the Article

ಉಡುಪಿ: ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಮತ್ತೆ ಫೇಲಾಗಿದ್ದಕ್ಕೆ ಮನನೊಂದು ಪ್ರಥಮ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದಲ್ಲಿ ನಿನ್ನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಮಾನಸ (17) ಎಂದು ಗುರುತಿಸಲಾಗಿದೆ.

ಶಂಕರನಾರಾಯಣ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿದ್ದ ಮಾನಸ ಎಪ್ರಿಲ್ ತಿಂಗಳ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದಳು. ನಂತರ ಮನೆಯಲ್ಲಿಯೇ ಇದ್ದು, ಜೂನ್ ತಿಂಗಳ ಸಪ್ಲಿಮೆಂಟರಿ ಪರೀಕ್ಷೆ ಬರೆದಿದ್ದಳು.

ಜೂ.30 ರಂದು ಸಪ್ಲಿಮೆಂಟರಿ ಪರೀಕ್ಷೆಯ ಫಲಿತಾಂಶ ಬಂದು ಅದರಲ್ಲಿಯೂ ಅನುತ್ತೀರ್ಣಳಾದ ಹಿನ್ನೆಲೆ ಮನನೊಂದು ಮನೆಯಲ್ಲಿ ಯಾರೂ ಇಲ್ಲದ ಸಮಯ ತನ್ನ ಮನೆಯ ಎದುರು ಇರುವ ಹುಲ್ಲು ಹಾಕುವ ಕೊಟ್ಟಿಗೆ ಮಾಡಿನ ಪಕ್ಕಾಸಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply