ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಕೇಸ್, ರಕ್ತಸಿಕ್ತ ಫೋಟೋ ಅಪ್ಲೋಡ್, ಕೇಸ್ ಜಡಿದ ಪೊಲೀಸರು!

Share the Article

ಬಜರಂಗದಳ ಕಾರ್ಯಕರ್ತ ಹರ್ಷನ ರಕ್ತಸಿಕ್ತ ಪೋಟೋ ಅಪ್‌ಲೋಡ್ ಪ್ರಕರಣಕ್ಕೆ ಸಂಬಂಧಿಸಿದತೆ ಶಿವಮೊಗ್ಗ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ. ಇನ್‌ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ ರಕ್ತ ಸಿಕ್ತನಾಗಿ ಬಿದ್ದ ಹರ್ಷನ ಫೊಟೋ ಜೊತೆಗೆ ನಾಲ್ವರು ತಮ್ಮ ಫೋಟೋ ಅಪಲೋಡ್ ಮಾಡಿದ್ದರು.

ಈ ಬೆನ್ನಲ್ಲೇ ಪೋಲಿಸರು ಕೋಮು ಸೌಹಾರ್ಧತೆಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇಲೆ ಕೇಸ್ ದಾಖಲಿಸಿದ್ದು, ನಾಲ್ವರು ಅಪ್ರಾಪ್ತ ಬಾಲಕರ ವಿರುದ್ಧ ಸುಮೋಟೊ ಪ್ರಕರಣ ದಾಖಲು ಮಾಡಿದ್ದಾರೆ.

ನಾಲ್ವರಲ್ಲಿ ಇಬ್ಬರನ್ನ ವಶಕ್ಕೆ ಪಡೆದು ಪೋಲಿಸರು ವಿಚಾರಣೆ ನಡೆಸಿದ್ದಾರೆ. ಪಿಐ ಸಂಜೀವ್ ಕುಮಾರ್ ಗಸ್ತಿನಲ್ಲಿದ್ದಾಗ ರಾಗಿಗುಡ್ಡದ ಬಳಿ ನಾಲ್ವರು ಅನುಮಾನಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದರು. ಒರ್ವನ ಬಳಿಯಿದ್ದ ಮೊಬೈಲ್ ಪೋನಿನಲ್ಲಿ ಹತ್ಯೆಯಾದ ಹರ್ಷ ರಕ್ತಸಿಕ್ತವಾಗಿ ಬಿದ್ದಿರುವ ಪೋಟೋ ಜೊತೆಗೆ ಟ್ಯಾಗ್ ಲೈನ್ ಹಾಕಲಾಗಿತ್ತು. ಕೋಮು ಸೌಹಾರ್ದತೆಗೆ ಧಕ್ಕೆ ತರುವಂತೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದು ಸ್ಟೇಟಸ್ ಹಾಕಿ ಹೆಸರು ಮಾಡಲು ಹೊರಟಿದ್ದ ನಾಲ್ವರು ವಿರುದ್ಧ ಪ್ರಕರಣ ದಾಖಲಾಗಿದೆ.

Leave A Reply

Your email address will not be published.