ಪುರಸಭೆ ಕಚೇರಿಗೆ ಉರ್ದು ಭಾಷೆಯಲ್ಲಿ ನಾಮಫಲಕ: ಹಿಂದೂ-ಮುಸ್ಲಿಂ ಕಾರ್ಯಕರ್ತರ ಮಧ್ಯೆ ವಾಗ್ವಾದ, ಘರ್ಷಣೆ!

ನಾಮಫಲಕದಲ್ಲಿ ದೇವನಾಗರಿ ಲಿಪಿ ಬಳಕೆ ವಿವಾದ ಕಾರವಾರದಲ್ಲಿ ನಡೆದ ಬೆನ್ನಲ್ಲೇ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದಲ್ಲಿ ಮತ್ತೊಂದು ಭಾಷಾ ವಿವಾದ ಈಗ ಕಾಣಿಸಿಕೊಂಡಿದೆ. ಭಟ್ಕಳದ ಪಟ್ಟಣ ಪುರಸಭೆ (ಟಿಎಂಸಿ) ಕಚೇರಿಯಲ್ಲಿ ಉರ್ದು ಸೂಚನಾ ಫಲಕ ಕಾಣಿಸಿಕೊಂಡ ನಂತರ, ಕನ್ನಡ ಮತ್ತು ಹಿಂದೂ ಕಾರ್ಯಕರ್ತರು ಅದನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿ ಮುಸ್ಲಿಂ ಸಮುದಾಯದ ಸದಸ್ಯರೊಂದಿಗೆ ವಾಗ್ವಾದ ನಡೆಸಿ ಕಚೇರಿಗೆ ಬೀಗ ಹಾಕಿದ ಪ್ರಸಂಗ ನಡೆದಿದೆ.

ಭಟ್ಕಳ ಟಿಎಂಸಿ ಕಟ್ಟಡವನ್ನು ಇತ್ತೀಚೆಗೆ ಬಣ್ಣ ಸುಣ್ಣಗಳಿಂದ ನವೀಕರಿಸಲಾಗಿತ್ತು. ಆದರೆ ಬೋರ್ಡನ್ನು ಕನ್ನಡ ಮತ್ತು ಉರ್ದು ಭಾಷೆಯಲ್ಲಿ ಹಾಕಿರುವುದು ಕಾರ್ಯಕರ್ತರನ್ನು ಕೆರಳಿಸಿದೆ. ಬೋರ್ಡ್‌ನಲ್ಲಿರುವ ಉರ್ದು ಅಕ್ಷರವನ್ನು ಅಧಿಕಾರಿಗಳು ಅಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡಿ, ಕೊನೆಗೂ ಅಧಿಕಾರಿಗಳು ಒತ್ತಡಕ್ಕೆ ಮಣಿದು ಅದನ್ನು ಅಳಿಸಲು ನಿರ್ಧರಿಸಿದಾಗ ವಿವಾದ ಭುಗಿಲೆದ್ದಿತು. ಕೂಡಲೇ ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟಿಸಿದ್ದಾರೆ. ಆರೋಪ-ಪ್ರತ್ಯಾರೋಪ ಎರಡು ಗುಂಪುಗಳ ನಡುವೆ ನಡೆದು, ವಾಗ್ವಾದಗಳು ಕೂಡಾ ನಡೆದವು.


Ad Widget

Ad Widget

Ad Widget

Ad Widget

Ad Widget

Ad Widget

ಈ ವಿಚಾರದಲ್ಲಿ ನಾವು ಸುಮ್ಮನಿರುವುದಿಲ್ಲ. ಉರ್ದು ಬೋರ್ಡ್‌ ಪ್ರದರ್ಶಿಸಲು ಅವಕಾಶವಿಲ್ಲ. ರಾಜ್ಯದಲ್ಲಿ ಬೋರ್ಡ್‌ಗಳು ಕನ್ನಡ, ಇಂಗ್ಲಿಷ್ ಮತ್ತು ಹಿಂದಿಯಲ್ಲಿರಬಹುದು, ಉರ್ದು ಅಲ್ಲ. ಸ್ಥಳೀಯವಾಗಿ ಮಾತನಾಡುವ ಭಾಷೆಗಳಿಗೆ ಪ್ರಾಮುಖ್ಯತೆ ನೀಡಲು ಪ್ರಾರಂಭ ಮಾಡಿದರೆ, ಅಧಿಕಾರಿಗಳು ಕೊಂಕಣಿ, ಮರಾಠಿ, ಉರ್ದು ಮತ್ತು ನವಾಯತ್ ಭಾಷೆಗಳಲ್ಲಿ ಫಲಕಗಳನ್ನು ಪ್ರದರ್ಶಿಸಬೇಕಾಗುತ್ತದೆ. ರಾಜ್ಯದ ಪ್ರಮುಖ ಭಾಷೆಯಾದ ಕನ್ನಡವು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತದೆ ಎಂದು ಸ್ಥಳೀಯ ಕಾರ್ಯಕರ್ತರು ಹೇಳುತ್ತಾರೆ.

ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ನಾವು ಹಾಗೆ ಮಾಡಿದ್ದೇವೆ. ನಂತರ ಭಾರತೀಯ ಭಾಷೆಯಾದ ಉರ್ದು ಬೋರ್ಡ್ ಕೂಡ ಹಾಕಿದ್ದೇವೆ. ಇದು ಶತಮಾನಗಳಿಂದ ಬಳಕೆಯಲ್ಲಿದೆ. ಅದಕ್ಕೆ ಮಲತಾಯಿ ಧೋರಣೆ ಏಕೆ, ಇದಲ್ಲದೆ, ಭಟ್ಕಳ ಟಿಎಂಸಿಗೆ ವಸಾಹತುಶಾಹಿ ಕಾಲದಿಂದಲೂ ಇತಿಹಾಸ ಮತ್ತು ವಿಶೇಷ ಜಾಗವಿದೆ. ಅಂದಿನಿಂದ ಉರ್ದು ಬಳಕೆಯಲ್ಲಿದೆ
ಎಂದು ಜಾಲಿ ಟಿಎಂಸಿ ಸದಸ್ಯ ಮಿಸ್ತಾ ಉಲ್ ಹಕ್,
ಹೇಳುತ್ತಾರೆ.

ಆದರೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಹೆಚ್ಚಾದರಿಂದ, ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಮಧ್ಯಪ್ರವೇಶ ಮಾಡಬೇಕಾಯಿತು. ಈಗ ಸಹಾಯಕ ಆಯುಕ್ತ ಮಮತಾ ಅವರು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲಾಧಿಕಾರಿ ಮೂಲಕ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು. ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಫ್ ಮುಹಿಲನ್ ಅವರನ್ನು ಸಂಪರ್ಕಿಸಿದಾಗ, ನಾನು ಭಟ್ಕಳಕ್ಕೆ ಹೋಗುತ್ತಿದ್ದೇನೆ. ನಾಳೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದಿದ್ದಾರೆ.

error: Content is protected !!
Scroll to Top
%d bloggers like this: