ಗುರುವಾರ ಪಿಎಸ್‌ಎಲ್‌ವಿ-ಸಿ53 ಉಡಾವಣೆ ; ಇಲ್ಲಿದೆ ಸಂಪೂರ್ಣ ವಿವರ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗುರುವಾರ ತನ್ನ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ಸ್ (PSLV) ನಲ್ಲಿ ಮೂರು ಪ್ರಯಾಣಿಕ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಿದೆ.
ಪಿಎಸ್‌ಎಲ್‌ವಿ-ಸಿ53 (PSLV C-523) ಮಿಷನ್ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಎರಡನೇ ಉಡಾವಣಾ ಪ್ಯಾಡ್‌ನಿಂದ ಸಂಜೆ 6 ಗಂಟೆಗೆ ಉಡ್ಡಯನಗೊಳ್ಳಲಿದೆ.
ಇದು ಎರಡನೇ ಉಡಾವಣಾ ಕೇಂದ್ರದಿಂದ 16ನೇ ಪಿಎಸ್‌ಎಲ್‌ವಿ ಉಡಾವಣೆಯಾಗಿದೆ. ಇಸ್ರೋ ಮಿಷನ್‌ನ ಲೈವ್ ಸ್ಟ್ರೀಮ್ ಅನ್ನು ಸಹ ಮಾಡಲಿದ್ದು, ಇಸ್ರೋ ಯೂ ಟ್ಯೂಬ್ ಚಾನೆಲ್‌ನಲ್ಲಿ ಇದರ ನೇರಪ್ರಸಾರವಾಗಲಿದೆ.