ಮಾರುಕಟ್ಟೆಯಲ್ಲಿ ಇಂಧನ ಕೊರತೆ, ಆಮದು ಮಾಡಲು ಮುಗಿಬಿದ್ದ ಸರಕಾರಿ ಕಂಪನಿಗಳು

ಇಂಧನ ಕೊರತೆ ಸ್ಥಳೀಯ ಮಾರುಕಟ್ಟೆಯಲ್ಲಿ ಉಂಟಾಗಿದ್ದು, ಹೀಗಾಗಿ ಭಾರತ ತೈಲ ಆಮದು ಮಾಡಿಕೊಳ್ಳಲು ಮುಂದಾಗಿದೆ. ಹಾಗಾಗಿ ತೈಲ ಅಭಾವ ಹೆಚ್ಚಾಗುವುಕ್ಕಿಂತ ಮುನ್ನ ಕೊರತೆ ನೀಗಿಸಲು ಕೇಂದ್ರ ಸರ್ಕಾರ ದೌಡಾಯಿಸಿದೆ. ಹಾಗಾಗಿ, ಶೀಘ್ರವೇ ಭಾರೀ ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳಲು ಮುಂದಾಗಿದೆ.

 

ಭಾರತ ಏಷ್ಯಾದಲ್ಲಿ ಅತೀ ಹೆಚ್ಚು ತೈಲ ರಫ್ತು ಮಾಡಿಕೊಳ್ಳುವುದರಿಂದ, ಈಗ ತೈಲದ ಅಭಾವ ಉಂಟಾಗಿದ್ದು, ಹೀಗಾಗಿ ತೈಲ ರಫ್ತು ದೇಶಗಳಿಂದ ತೈಲ ಆಮದಿಗೆ ದೌಡಾಯಿಸಿದೆ.

ಈಗಾಗಲೇ ತೈಲ ಆಮದು ಹೆಚ್ಚಳವಾಗಿದ್ದು, ತೈಲ ಆಮದು ಮಾಡಿಕೊಂಡು ಭಾರೀ ಪ್ರಮಾಣದಲ್ಲಿ ಶೇಖರಿಸಿಡಲು ಕೇಂದ್ರ ತೈಲ ಕಂಪನಿಗಳು ಮುಂದಾಗಿದೆ. ಭವಿಷ್ಯದಲ್ಲಿ ಆಗಬಹುದಾದ ತೈಲ ಅಭಾವವನ್ನು ನೀಗಿಸಲು ಕಂಪನಿಗಳು ಹೆಚ್ಚಿನ ಪ್ರಮಾದಲ್ಲಿ ತೈಲ ಆಮದಿಗೆ ಮುಂದಾಗಿದೆ.

ಜೂನ್ ತಿಂಗಳಲ್ಲೇ ತೈಲೋತ್ಪನ್ನಗಳ ಆಮದು ಏರಿಕೆಯಾಗದೆ. ಜೂನ್ ತಿಂಗಳ ಮೊದಲಾರ್ಧದಲ್ಲಿ ದಿನಕ್ಕೆ ಸುಮಾರು 13,000 ರಷ್ಟು ಬ್ಯಾರಲ್‌ನಷ್ಟು ಗ್ಯಾಸೋಲೈನ್ (Gasoline – ಕಚ್ಚಾ ತೈಲ ಹಾಗೂ ಪೆಟ್ರೋಲಿಯಂ ಉತ್ಪನ್ನಗಳಿಂದ ತಯಾರು ಮಾಡಲಾದ ಒಂದು ವಿಧದ ಇಂಧನ) ಆಮದು ಮಾಡಿಕೊಂಡಿದೆ. ಇದು ಕಳೆದ ಏಳು ತಿಂಗಳಲ್ಲೇ ಇಷ್ಟೊಂದು ಪ್ರಮಾಣದಲ್ಲಿ ಗ್ಯಾಸೋಲೈನ್ ಆಮದು ಮಾಡಿಕೊಂಡಿದ್ದು ಇದೇ ಮೊದಲು.

ಇನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹಾಗೂ ಭಾರತ್ ಪೆಟ್ರೋಲಿಯಂ ಲಿಮಿಟೆಡ್‌ನ ಡೀಸೆಲ್ ಆಮದು ಕೂಡ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಎರಡು ಕಂಪನಿಗಳು ದೈನಂದಿನ ಸರಾಸರಿ 48,000 ಬ್ಯಾರಲ್‌ನಷ್ಟು ಡೀಸೆಲ್ ಆಮದು ಮಾಡಿಕೊಳ್ಳುತ್ತಿದೆ. 2020ರ ಫೆಬ್ರವರಿ ರ ಬಳಿಕ ಇಷ್ಟೊಂದು ಪ್ರಮಾಣದಲ್ಲಿ ತೈಲ ಖರೀದಿ ಮಾಡುತ್ತಿರುವುದು ಇದೇ ಮೊದಲ ಬಾರಿ ಎಂದು ಈ ಬಗ್ಗೆ ನಿಗಾ ವಹಿಸುವ ಕಂಪನಿಯೊಂದು ಅಂಕಿ
ಅಂಶ ನೀಡಿದೆ.

Leave A Reply

Your email address will not be published.