ಪಿಯುಸಿ ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ !! | ಇನ್ನು ಮುಂದೆ ಕಾಲೇಜಿಗೆ ಯಾವುದೇ ಫೀಸ್ ಕಟ್ಟಬೇಕಿಲ್ಲ

ಪಿಯುಸಿ ಓದುವ ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಇನ್ನು ಮುಂದೆ ಸರ್ಕಾರಿ ಕಾಲೇಜು ಸೇರುವ ವಿದ್ಯಾರ್ಥಿನಿಯರು ಶುಲ್ಕವನ್ನೇ ಕಟ್ಟುವ ಅವಶ್ಯಕತೆ ಇಲ್ಲ.

ಹೌದು. ಇನ್ನು ಮುಂದೆ ವಿದ್ಯಾರ್ಥಿನಿಯರಿಗೆ ಸಂಪೂರ್ಣ ಶುಲ್ಕ ವಿನಾಯಿತಿ ಇರಲಿದೆ. ಬಾಲಕಿಯರು ಇನ್ನು ಮುಂದೆ ಒಂದೇ ಒಂದು ರೂಪಾಯಿ ಶುಲ್ಕ ಕೂಡ ಕಟ್ಟಬೇಕಿಲ್ಲ. ವಿದ್ಯಾರ್ಥಿನಿಯರ ಕಾಲೇಜು ಶುಲ್ಕವನ್ನು ಸರ್ಕಾರವೇ ಕಟ್ಟಲಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಇಷ್ಟು ದಿನ ಕಾಲೇಜಿಗೆ ದಾಖಲಾಗುವ ವೇಳೆ ವಿದ್ಯಾರ್ಥಿಗಳಿಂದ ಶುಲ್ಕ ಅಂತ 456 ರೂಪಾಯಿ ಕಟ್ಟಿಸಿಕೊಳ್ಳಲಾಗುತ್ತಿತ್ತು. ಬಳಿಕ ಅ ಹಣವನ್ನು ವಿದ್ಯಾರ್ಥಿನಿಯರ ಖಾತೆಗೆ ವಾಪಸ್ ಹಾಕಲಾಗುತ್ತಿತ್ತು. ಇದರಿಂದ ಅನೇಕ ಸಮಸ್ಯೆ ಉಂಟಾಗುತ್ತಿತ್ತು.

ವಿದ್ಯಾರ್ಥಿನಿಯರಿಗೆ ದಾಖಲಾತಿ ಸಮಯದಲ್ಲಿ ಹಣ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಇನ್ನು ಮುಂದೆ ಸರ್ಕಾರವೇ ಶುಲ್ಕ ಪಾವತಿ ಮಾಡಲಿದೆ. ಕಾಲೇಜಿನ ಪ್ರಾಂಶುಪಾಲರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುತ್ತದೆ. ಇದರಿಂದ ದಾಖಲಾತಿ ವೇಳೆ ವಿದ್ಯಾರ್ಥಿನಿಯರು ಉಚಿತವಾಗಿ ಕಾಲೇಜಿಗೆ ದಾಖಲು ಆಗಬಹುದಾಗಿದೆ.

error: Content is protected !!
Scroll to Top
%d bloggers like this: