ಆ್ಯಂಕರ್ ಅನುಶ್ರೀಗೆ ಸಿಕ್ತು ಶಿವಣ್ಣನಿಂದ ಭರ್ಜರಿ ಗಿಫ್ಟ್! ವೀಡಿಯೋ ವೈರಲ್!!!

ಕನ್ನಡ ಕಿರುತೆರೆ ಲೋಕದಲ್ಲಿ ಆ್ಯಂಕರ್ ಅನುಶ್ರೀ ಅವರು ಟಾಪ್ ನಿರೂಪಕಿ ಎಂದರೆ ತಪ್ಪಿಲ್ಲ. ಅನೇಕ ಸಿನಿಮಾ ಕಾರ್ಯಕ್ರಮಗಳನ್ನೂ, ಮಾತ್ರವಲ್ಲದೇ ಕಿರುತೆರೆಯ ಹಲವಾರು ಕಾರ್ಯಕ್ರಮಗಳನ್ನು ಮಾಡುವುದರಲ್ಲಿ ಎತ್ತಿದ ಕೈ ಎಂದೇ ಹೇಳಬಹುದು. ಅಷ್ಟು ಮಾತ್ರವಲ್ಲದೇ, ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಬಹುಬೇಡಿಕೆಯ ಈ ನಿರೂಪಕಿ ಎಂದರೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳಿಗೂ ಅಚ್ಚುಮೆಚ್ಚು. ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮ ಕೂಡ ಅನುಶ್ರೀ ಅವರಿಂದಾಗಿ ಕಳೆ ಕಟ್ಟಿದೆ. ಈ ಶೋನಲ್ಲಿ ಶಿವರಾಜ್‌ಕುಮಾರ್ ಜಡ್ಜ್ ಆಗಿದ್ದಾರೆ. ಶಿವಣ್ಣ ಭರ್ಜರಿ ಗಿಫ್ಟೊಂದನ್ನು ಅನುಶ್ರೀಗೆ ನೀಡಿದ್ದಾರೆ. ಈ ಉಡುಗೊರೆ ಸಿಕ್ಕಿದ್ದಕ್ಕೆ ಅನುಶ್ರೀ ತುಂಬಾ ಖುಷಿ ಪಟ್ಟಿದ್ದಾರೆ. ಆ ಗಿಫ್ಟ್ ಬೇರೇನೂ ಅಲ್ಲ. ಸ್ವತಃ ಶಿವಣ್ಣ ಧರಿಸಿದ್ದ ಜಾಕೆಟ್. ಹೌದು, ಈ ಉಡುಗೊರೆ ಪಡೆದ ಕ್ಷಣ ಹೇಗಿತ್ತು ಎಂಬುದನ್ನು ವಿಡಿಯೋ ಸಮೇತ ವಿವರಿಸಿದ್ದಾರೆ ಅನುಶ್ರೀ. ಆ ವಿಡಿಯೋ ಈಗ ವೈರಲ್ ಆಗಿದೆ.


Ad Widget

Ad Widget

ಅನುಶ್ರೀ ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಅವರು ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ. ‘ಇದು ಯಾವ ಜನ್ಮದ ಪುಣ್ಯ? ಕಳೆದ ವಾರ ಡಿಕೆಡಿ ಶೂಟ್ ವೇಳೆ ಹೇಳಿದೆ ಶಿವಣ್ಣ ಜಾಕೆಟ್ ಸಕ್ಕತ್ ಆಗಿದೆ ಅಂತ. ಆಯ್ತು ಬಿಡಮ್ಮ ನಿಂಗೆ ಕೊಡ್ತೀನಿ ಅಂದ್ರು. ಸುಮ್ನೆ ಹೇಳಿರ್ತಾರೆ ಅಂದೊಂಡೆ ನಾನು. ಆದ್ರೆ ಎಷ್ಟೇ ಆದ್ರೂ ಅಣ್ಣಾವರ ರಕ್ತ ಅಲ್ವಾ? ಆಕಾಶ ನೋಡದ ಕೈ, ಪ್ರೀತಿ ಹಂಚಿದ ಕೈಗಳು ಅವು. ಹೊರಡುವ ಮುನ್ನ, ಜಾಕೆಟ್ ಬಿಚ್ಚಿ ‘With lots of love to dearest friend Anu’ ಅಂತ ಬರೆದು ಸಹಿ ಹಾಕಿ, ತಮ್ಮ ಕೈಯಾರೆ ಜಾಕೆಟ್ ತೊಡಿಸಿ, ಮತ್ತೊಮ್ಮೆ ಮಮತೆ ಮೆರೆದ ಮುತ್ತಣ್ಣ. ಶಿವಣ್ಣ.. ನಿಮ್ಮ ರೂಪದಲ್ಲಿ ನಮ್ಮ ಪರಮಾತ್ಮನನ್ನು ಕಾಣಿದೀವಿ. ಮತ್ತೊಮ್ಮೆ ಧನ್ಯವಾದಗಳು ಸರ್’ ಎಂದು ಅನುಶ್ರೀ ಬರೆದುಕೊಂಡಿದ್ದಾರೆ.


Ad Widget

ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ 3 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. 71 ಸಾವಿರಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ. ಕಮೆಂಟ್‌ಗಳ ಮೂಲಕ ನೂರಾರು ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. ‘ನೀವು ತುಂಬಾ ಲಕ್ಕಿ’ ಎಂದು ಎಲ್ಲರೂ ಕೆಮಂಟ್ ಮಾಡಿದ್ದಾರೆ.

error: Content is protected !!
Scroll to Top
%d bloggers like this: