ವಾಮಾಚಾರಕ್ಕೆ ಮಹಿಳೆಯ ಖಾಸಗಿ ಅಂಗಕ್ಕೆ ಕೈ ಹಾಕಿ ಕರುಳು ಕಿತ್ತು ತೆಗೆದ ಮಂತ್ರವಾದಿ!! ಭೀಕರ ಕೃತ್ಯದಿಂದ ಮಹಿಳೆ ಸಾವು

Share the Article

ವಾಮಾಚಾರದ ಕೃತ್ಯಕ್ಕೆ ಮಹಿಳೆಯೊಬ್ಬರ ದೇಹವನ್ನು ಛಿದ್ರಗೊಳಿಸಿ, ಖಾಸಗಿ ಅಂಗದಿಂದ ಕರುಳು ಕಿತ್ತು ತೆಗೆದು ಭೀಕರವಾಗಿ ಕೊಲೆ ನಡೆಸಿದ ಘಟನೆಯೊಂದು ಬೆಳಕಿಗೆ ಬಂದಿದೆ.

ಮೃತ ಮಹಿಳೆಯನ್ನು ಜಾರ್ಖಂಡ್ ನ ಗ್ರಾಮವೊಂದರ ಗುಡಿಯಾ ದೇವಿ(26) ಎಂದು ಗುರುತಿಸಲಾಗಿದ್ದು, ಆಕೆಯ ಅಕ್ಕ ಭಾವ ಹಾಗೂ ಮಂತ್ರವಾದಿ ಸೇರಿ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಘಟನೆ ವಿವರ: ಮಹಿಳೆಯನ್ನು ವಾಮಾಚಾರಕ್ಕೆ ಬಲಿ ಕೊಡಲು ಅಕ್ಕ ಭಾವ ನಿರ್ಧರಿಸಿದ್ದು, ಅದರಂತೆ ಮಂತ್ರವಾದಿಯೊಬ್ಬನ ಬಳಿಗೆ ಕರೆದುಕೊಂಡು ಹೋದ ವೇಳೆ ಆತ ಮಹಿಳೆಗೆ ಕೋಲಿನಿಂದ ಹೊಡೆದಿದ್ದ. ಇದರಿಂದ ಮಹಿಳೆ ಮೂರ್ಛೆ ಹೋಗಿದ್ದು, ಈ ವೇಳೆ ಆರೋಪಿಗಳು ಸೇರಿ ಮಹಿಳೆಯ ದೇಹವನ್ನೇ ಅರೆನಗ್ನಗೊಳಿಸಿ, ನಾಲಗೆಯನ್ನು ಕತ್ತರಿಸಿ ಛಿದ್ರಗೊಳಿಸಿದ್ದಾರೆ.

ಬಳಿಕ ಮಹಿಳೆಯ ಖಾಸಗಿ ಅಂಗಕ್ಕೆ ಕೈ ಹಾಕಿ ಕರುಳು ಕಿತ್ತು ತೆಗೆದು ವಾಮಾಚಾರ ನಡೆಸಿದ್ದು, ಕೃತ್ಯದಿಂದ ಮಹಿಳೆ ಸಾವನ್ನಪ್ಪಿದ್ದಾಳೆ. ಕೃತ್ಯದ ಬಳಿಕ ಆರೋಪಿಗಳು ಶವನನ್ನು ಕಾಡಿನಲ್ಲಿ ಎಸೆದು ಪರಾರಿಯಾಗಿದ್ದರು.

Leave A Reply

Your email address will not be published.