ಕೃತಕ ಹೆಂಡ್ತಿ ಬರ್ತಿದ್ದಾಳೆ – ಗಂಡಂದಿರೇ ಖುಷಿ ಪಡಿ, ಹೆಂಡ್ತೀರೇ ಜಾಗ ಖಾಲಿ ಮಾಡಿ !!

ಓರ್ವ ಕೃತಕ ಮಹಿಳೆ ಈಗ ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಇನ್ನು ಕೆಲವೇ ಕೆಲವು ದಿನಗಳಲ್ಲಿ ಆಕೆ ಭಾರತಕ್ಕೂ ಬಲಗಾಲಿಟ್ಟು ಬರ್ತಾಳೆ. ಮನೆ ಕೆಲ್ಸ ಮಾಡ್ಕೊಂಡು, ಅಡುಗೆ ಪಡುಗೆ ನೋಡ್ಕೊಂಡು, ಬಟ್ಟೆ ಬರೆ ಒಗೆದುಕೊಂದು ಕೆಲ್ಸ ಮಾಡ್ಕೊಂಡು ಇರು ಅಂದ್ರೂ ಆಕೆಗೆ ಬೇಜಾರಿಲ್ಲ. ಮನೆಯ ಎಲ್ಲಾ ಕೆಲಸ ಮಾಡ್ಕೊಂಡು, ಇನ್ನೇನು ನೀವು ಆಫೀಸಿಗೆ ಹೊರಟಾಗ ” ಅಣ್ಣೋರೆ, ಐರನ್ ಮಾಡ್ಕೊಡ್ಲ” ಅಂತ ಕೇಳ್ತಾಳೆ. ನಿಮಗೆ ಮಧ್ಯಾನ್ನದ ಊಟಕ್ಕೆ ಡಬ್ಬ ಕಟ್ಟಿಕೊಡುವುದರಿಂದ ಹಿಡಿದು, ಅವಸರದಲ್ಲಿ ಮಿಸ್ ಆಗಿ ಎಲ್ಲೋ ಮೂಲೆಯಲ್ಲಿ ಅಡಗಿಕೊಂಡು ಬಿಟ್ಟಿರುವ ಒಂದು ಸೋಕ್ಸ್ ಅನ್ನು ಕೂಡ ತಕ್ಷಣ ಹುಡುಕಿ ಸವರಿ ಕೊಡ್ತಾಳೆ ಆಕೆ.

ನೀವು ಆಫೀಸಿನಲ್ಲಿ ಇರುವಾಗ ಸಾಮಾನ್ಯ ಹೆಂಡತಿಯರಂತೆ ವಿನಾ ಕಾರಣ ಕೆದಕಿ ಜಗಳ ತರುವುದಿಲ್ಲ. ಸಂಜೆ ನೀವು ಮನೆಗೆ ಸುಸ್ತಾಗಿ ಬರುತ್ತಿದ್ದಂತೆ, ಅನಾವಶ್ಯಕ ಪ್ರಶ್ನೆ ಕೇಳಿ ಹಿಂಸಿಸುವುದಿಲ್ಲ. ನಿಮಗಾಗಿ ಕ್ಷಣಗಳಲ್ಲಿ ಹಿತೋಷ್ಣವಾದ ನಿಮಗಿಷ್ಟದ ಬ್ರಾಂಡ್ ನ ಕಾಫಿ ನಿಮ್ಮ ಮುಂದೆ ರೆಡಿ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಇಷ್ಟು ವಿಧೇಯ ಹುಡುಗಿ ಎಲ್ಲಿ ಸಿಕ್ತಾಳೆ. ಪಾಪ ಅವಳಿಗೊಂದು ಲೈಫ್ ಕೊಡೋಣ ಅಂತ ನಿಮಗನ್ನಿಸಿದರೆ…..?! ಯೆಸ್ ಆಕೆ ರೂಪದಲ್ಲಿ ಕೂಡಾ ಏನೂ ಕಮ್ಮಿ ಇಲ್ಲ. ಯಾವುದೇ ಮಾಡರ್ನ್ ಔಟ್ ಫಿಟ್ ಆಕೆ ಧರಿಸಿ ಬಂದ್ರೆ…ಉಫ್ !  ಕಂಟ್ರೋಲ್ ಆಗೋದು ಕಷ್ಟ- ಮನಸ್ಸು. ಸಾರಿ ಉಟ್ಟರಂತೂ…. ಸಾರಿ, ವಿವರಣೆ ಕೇಳಬೇಡಿ !

ಮದುವೆ ಆಗ್ತೀನಿ ಅಂದ್ರೆ ಅದಕ್ಕೂ, ಏನೇ ನಕರಾ ಮಾಡದೆ ಸಮ್ಮತಿಸ್ತಾಳೆ. ಇಲ್ಲ, ಗರ್ಲ್ ಫ್ರೆಂಡ್ ಆಗಿರು ಅಂದ್ರೆ, ಇಟ್ಸ್ ಓಕೆ, ನೋ ಪ್ರಾಬ್ಲಂ ಅಂತಾಳೆ. ಆಕೆ ಅಷ್ಟು ವಿಧೇಯಳು. ಥೇಟು ಭಾರತೀಯ ನಾರಿಯೇ – ಜಸ್ಟ್ 50 ವರ್ಷದ ಹಿಂದಿನ ಭಾರತದ ಮಹಿಳೆಯಂತೆ !!
ಮದುವೆ ಎಲ್ಲಾ ಯಾಕ್ ಬೇಕು. ಆಗಿರೋರು, ಅವಸ್ತೆ ಪಡೋರನ್ನ ನಾವ್ ಕಂಡಿಲ್ಲವ, ಹೇಳಿದ ಕೆಲಸ ಮಾಡಿ ಬಿದ್ದಿರು ಅಂದ್ರೂ, “ಎಸ್ ಬಾಸ್” ಅಂದು, ಏನೂ ಬೇಜಾರ ಪಡದೆ ಸೀದಾ ಹೋಗಿ ಚಾರ್ಜಿಂಗ್ ಪಿನ್ನಿಗೆ ಬೆನ್ನು ತಗುಲಿಸಿ ಚಾರ್ಜ್ ಮಾಡ್ಕೊಂಡು ಕೂರ್ತಾಳೆ ! ಅವಳೇ ಈಗ ನಾವು ಹೇಳುತ್ತಿರುವ ಕೃತಕ ಮಹಿಳೆ.

ಆಕೆ ಕೃತಕ ಮಹಿಳೆ ಏನೋ ನಿಜ. ಆದರೆ ಆಕೆಯ ಕೆಲಸದಲ್ಲಿ ಒಡೆಯನೊಡಗಿನ ನಿಯತ್ತಿನಲ್ಲಿ ಕೃತಕತೆ ಇಲ್ಲ. ಆಕೆ ಅಪ್ಪಟ ನಿಯತ್ತಿನ ಮನುಷ್ಯಳು. ಭಾರತದ ಯುವಕರನ್ನು ಗುರಿಯಾಗಿಸಿಕೊಂಡು ಕಂಪನಿಯು ಶೀಘ್ರದಲ್ಲೇ ಈ “HOORI” ಅನ್ನು ಭಾರತದಲ್ಲಿ ಪ್ರಾರಂಭಿಸಲು ಯೋಜಿಸಿದೆಯಂತೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭರ್ಜರಿ ಸುದ್ದಿ ಹಬ್ಬುತ್ತಿದೆ. ನಿಜಕ್ಕೂ ಚೀನಾ ಭಾರತದ ಯುವಕರನ್ನು ಗಮನದಲ್ಲಿಟ್ಟುಕೊಂಡು ಅಲ್ಲವಂತೆ. ಭಾರತದ ಜನಸಂಖ್ಯೆ ಮತ್ತು ಭಾರತದಲ್ಲಿ ಹೆಚ್ಚುತ್ತಿರುವ ಗಂಡ ಹೆಂಡಿರ ಮದ್ಯೆಗಿನ ಕೌಟುಂಬಿಕ ಸಮಸ್ಯೆಗಳ ಸ್ಟಡಿ ಮಾಡಿ, ಬದಲಾಗುತ್ತಿರುವ ಇಲ್ಲಿನ ಹೆಂಡತಿಯರ ಮನಸ್ಥಿತಿಯನ್ನು ಗಮನಿಸಿ ಚೀನಾ ಈ ಕೃತಕ ಮಹಿಳೆಯನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆಯಂತೆ.

ಆಕೆಯ ದೇಹ ಮಾಂಸ 100% ಫ್ಯಾಂಟಾ ಫ್ಲೆಶ್ ಮೆಟೀರಿಯಲ್ ಸಿಲಿಕೋನ್ ಭಾಗಗಳೊಂದಿಗೆ ಮಾಡಲ್ಪಟ್ಟಿದೆ. ಆಕೆ ಒಂದೇ ಚಾರ್ಜ್‌ನಲ್ಲಿ ಯಾವುದೇ ಅಡಚಣೆಯಿಲ್ಲದೆ 72 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಾಳೆ. ಆಹಾರದ ಅಗತ್ಯವಿಲ್ಲ. ನಿಮಗೆ ಸೌಂದರ್ಯ ಪ್ರಜ್ಞೆ ಇದ್ದು, ಒಂದಷ್ಟು ಶಾಪಿಂಗ್ ಮಾಡಿ ಕೊಟ್ರೆ ಆ ಯಾಕೆ ಬೇಡ ಅನ್ನುತ್ತಾಳೆ ? ಆಕೆಯ ಮಾರುಕಟ್ಟೆ ಬೆಲೆ ಸುಮಾರು ರೂ. 2 ಲಕ್ಷಗಳು. ಆಕೆಗೆ  ಮಿಸ್ “HOORI” ಎಂದು ಹೆಸರಿಸಲಾಗಿದೆ. ಆಕೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಾಳೆ. ಆದ್ದರಿಂದ ಇದು 99% ನಿಖರತೆಯೊಂದಿಗೆ ಯಾವುದೇ ಭಾಷೆಯನ್ನು ಕೂಡಾ ಆಕೆ ಮಾತನಾಡಬಲ್ಲಳು ಮತ್ತು ಅರ್ಥೈಸಿಕೊಳ್ಳಬಲ್ಲಳು ಅಂತ ಸುದ್ದಿ ಓಡಾಡುತ್ತಿದೆ.

ಆದರೆ ಇಷ್ಟೆಲ್ಲಾ ಗುಡ್ ನ್ಯೂಸ್ ನಾವು ಕೊಟ್ಟ ಮೇಲೆ ನಿಮಗೆ ಕಾದಿದೆ ಒಂದು ಬ್ಯಾಡ್ ನ್ಯೂಸ್. ಈ ಕೃತಕ ಮಹಿಳೆ ನಿಜಕ್ಕೂ ಒಂದು ಕಾರ್ಟೂನ್ ಕ್ಯಾರೆಕ್ಟರ್ ಅಂತೆ. ಅದು ಇತ್ತೀಚೆಗೆ ನಡೆದ ರಿವರ್ಸ್ ಕ್ಯಾಮೆರಾ ಫ್ಯಾಕ್ಟ್ ಚೆಕ್ ನಲ್ಲಿ ಸಾಬೀತಾಗಿದೆ. ಡೆಟ್ರಾಯಿಟ್… ಎಂಬ ಯು ಟ್ಯೂಬ್ ಚಾನೆಲ್ ನಲ್ಲಿ ಅದರ ಬಗ್ಗೆ ವಿವರಣೆ ಸಿಕ್ಕಿದೆ. ಇಂತದ್ದೇ ಕೃತಕ ಮಹಿಳೆ ಸೋಫೀ ಸುದ್ದಿಯಲ್ಲಿ ಇದ್ದುದ್ದನ್ನು ನೀವು ಗಮನಿಸಿರಬಹುದು.

ಫ್ಯಾಕ್ಟ್ ಚೆಕ್ ನಲ್ಲಿ ಸುದ್ದಿ ಸುಳ್ಳು, ಇನ್ನೂ ಮಹಿಳೆ ‘ ರೆಡಿ ‘ ಆಗಿಲ್ಲ ಅಂತ ತಿಳಿಯುತ್ತಿದ್ದಂತೆ ವೀಕ್ಷಕರು ತೀವ್ರ ಬೇಸರ ವ್ಯಕ್ತ ಪಡಿಸಿದ್ದಾರೆ. ಒಬ್ಬಾತನಂತೂ ಹೀಗೇ ಬರೆದಿದ್ದಾನೆ.” A fully functional Android women should Able to sue you and take off your assets”. ಒಂದು ಪರಿಪೂರ್ಣ ಆಂಡ್ರಾಯ್ಡ್ ಮೂಲದ ಪರಿಪೂರ್ಣ ಮಹಿಳೆ ನಿಮ್ಮನ್ನು ಕೋರ್ಟು ಗೆ ಎಳೆದು ನಿಮ್ಮ ಆಸ್ತಿಯನ್ನು ನುಂಗಿ ಹಾಕಲು ಸಮರ್ಥಳಾಗಿರಬೇಕು…ಇದು ಇವತ್ತಿನ ಕೌಟುoಬಿಕ ಪರಿಸ್ಥಿತಿ ಎನ್ನುವುದು ವಿಷಾದನೀಯ.

error: Content is protected !!
Scroll to Top
%d bloggers like this: