ಬೈಕ್ ವೀಲಿಂಗ್ ಗೆ ಬ್ರೇಕ್ ಹಾಕಲು ಮಾಸ್ಟರ್ ಪ್ಲಾನ್ ನೊಂದಿಗೆ ರಸ್ತೆಗಿಳಿದ ಆರಕ್ಷಕರು!!

Share the Article

ಚಿಕ್ಕಮಂಗಳೂರು: ಇವಾಗ ಅಂತೂ ಬೈಕ್ ಇಲ್ಲದ ಯುವಕರೇ ಇಲ್ಲ. ಎಲ್ಲಿ ನೋಡಿದ್ರೂ ಬೈಕ್ ರೈಡ್ ಮಾಡಿಕೊಂಡು ಜಾಲಿ ಮಾಡೋರೇ ಹೆಚ್ಚು. ಅದ್ರಲ್ಲೂ ರಸ್ತೆಯಲ್ಲಿ ವೀಲಿಂಗ್‌ ಮಾಡೋದೇ ಟ್ರೆಂಡ್. ಪ್ರಾಣವನ್ನೂ ಲೆಕ್ಕಿಸದೆ ಸ್ಟೈಲ್ ಆಗಿ ವೀಲಿಂಗ್ ಮಾಡೋರೆ ಇಲ್ಲೆಡೆ ಕಾಣಿಸುತ್ತಾರೆ.

ಹೀಗಾಗಿ, ಇಂತಹ ಟ್ರೆಂಡ್ ಗೆ ಬ್ರೇಕ್‌ ಹಾಕೋದಕ್ಕೆ ಚಿಕ್ಕಮಗಳೂರಿನಲ್ಲಿ ಪೊಲೀಸರು ಹೊಸ ಪ್ಲಾನ್‌ ಮಾಡಿದ್ದಾರೆ. ನಿನ್ನೆ ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕರು ವೀಲಿಂಗ್‌ ಮಾಡಿದ್ದನ್ನು ಕಂಡು ಜನ ಸಾಮಾನ್ಯರು ಭಾರೀ ಆಕ್ರೋಶಕ್ಕೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್‌ ಸೂಚನೆ ಮೆರೆಗೆ ಪೊಲೀಸರಿಂದ ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ.

ಕರ್ಕಶ ಶಬ್ದ ಮಾಡ್ತಿದ್ದ ಬೈಕ್‌ಗಳ ಸೈಲೆನ್ಸರ್‌ಗಳ ತೆಗೆದು ಬುಲ್ಡೋಜರ್‌ ಗಳನ್ನು ಬಳಸಿ ಚಿಕ್ಕಮಗಳೂರು ನಗರ ಸಂಚಾರಿ ಪೊಲೀಸರು ಪುಡಿಪುಡಿ ಮಾಡಲಾಗಿದೆ. ಇದೇ ರೀತಿ ನ್ಯೂಯರ್ಕ್ ಪೊಲೀಸರು ಕೂಡ ಅಪಾಯಕಾರಿ ಬೈಕ್ ಗಳ ಮೇಲೆ ಬುಲ್ಡೋಜರ್ ಹತ್ತಿಸಿದ್ದಾರೆ.

Leave A Reply