ಹುತ್ತ ಅಗೆದಾಗ ಸಿಕ್ತು, ಲಿಂಗ ಸ್ವರೂಪ ವಿಗ್ರಹ, ಅಚ್ಚರಿಯ ಘಟನೆ !

ಸುಮಾರು 200 ವರ್ಷಗಳಷ್ಟು ಪಾಳು ಬಿದ್ದ ಜಾಗದಲ್ಲಿ ದೇವಾಲಯ ನಿರ್ಮಾಣ ಮಾಡಲು ರಾಮೋಹಳ್ಳಿ ಗ್ರಾಮಸ್ಥರು ಮನಸ್ಸು ಮಾಡಿದ್ದರು.

ದೇವಾಲಯ ನಿರ್ಮಿಸಲು ಸ್ಥಳೀಯರು ಕಳೆದ ವರ್ಷವೇ ಈ ತೀರ್ಮಾನ ಕೈಗೊಂಡಿದ್ದರು. ಆದರೆ ಮೂಲ ವಿಗ್ರಹವಿಲ್ಲದೇ ದೇವಸ್ಥಾನದ ಶಕ್ತಿ ಇರೋದಿಲ್ಲ ಎಂಬುದು ಭಕ್ತರ ನಂಬಿಕೆ ಆಗಿತ್ತು. ಆದರೂ ಭಕ್ತರು ಮೂಲ ವಿಗ್ರಹಕ್ಕಾಗಿ ದೇವಿ ಮುಂದೆ ಗ ಪ್ರಶ್ನೆಯನ್ನು ಇಟ್ಟಿದ್ದರು. ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿರುವ ದೇವರನ್ನು ಹಗ್ಗದಲ್ಲಿ ಕಟ್ಟಿ ತಲೆಯ ಮೇಲೆ ಹೊತ್ತು ಮುಂದೆ ಸಾಗಿದ್ದಾರೆ.

ಪಲ್ಲಕ್ಕಿ ಹೊತ್ತು ಹೊರಟಾಗ ದೇವಿ ತನ್ನ ವಿಗ್ರಹ ಎಲ್ಲಿದೆ ಎಂಬುದನ್ನು ತೋರಿಸುತ್ತಾಳೆ ಎಂಬುವುದು ಭಕ್ತರ ಅಚಲ ನಂಬಿಕೆ ಹೊಂದಿದ್ದರು. ಇದೇ ನಂಬಿಕೆಯಲ್ಲಿ ಭಕ್ತರು ಪಲ್ಲಕ್ಕಿ ಹೊತ್ತು ಹೊರಟಿದರು.

ಪಲ್ಲಕ್ಕಿ ಜಮೀನಿನ ಹುತ್ತದ ಬಳಿ ಹೋಗಿ ನಿಂತಿದೆ. ಕೊನೆಗೆ ಅರ್ಚಕರ ಸಮ್ಮುಖದಲ್ಲಿ ಹೊತ್ತಕ್ಕೆ ಮಹಾ ಮಂಗಳಾರತಿ, ಕ್ಷೀರಾಭಿಷೇಷಕ ಮತ್ತು ಜಲಾಭಿಷೇಕ ಮಾಡಲಾಯ್ತು. ನಂತರ ಅರ್ಚಕರೇ ಹುತ್ತವನ್ನು ಆಗೆಯಲು ಆರಂಭಿಸಿದರು. ಕೆಲ ಸಮಯದ ಬಳಿಕ ಹುತ್ತದ ಅಡಿಯಲ್ಲಿ ಲಿಂಗ ಸ್ವರೂಪದ ವಿಗ್ರಹ ಪತ್ತೆಯಾಗಿದೆ. ನಂತರ ಈ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಗಿದೆ.

ಈ ಕುರಿತು ಮಾತನಾಡಿದ ಅರ್ಚಕರು, ವರ್ಷದ ಹಿಂದೆ ಈ ದೇಗುಲ ನಿರ್ಮಾಣವಾಗಿದೆ. ಚೌಡೇಶ್ವರಿ, ಮಹೇಶ್ವರಿ ಮತ್ತು ಸಪಳಮ್ಮ ದೇವರುಗಳಿವೆ. ಹುತ್ತದಲ್ಲಿ ಮಹೇಶ್ವರಮ್ಮ ಮತ್ತು ಚೌಡೇಶ್ವರ ವಿಗ್ರಹ ಸಿಕ್ಕಿದೆ ಅಂತ ಹೇಳ್ತಾರೆ.

Leave A Reply

Your email address will not be published.