ಮೈರೋಳ್ತಡ್ಕ ಶಾಲೆಯಲ್ಲಿ ಸ್ವಚ್ಚತಾ ಅಭಿಯಾನ,ಶ್ರಮದಾನ ಕಾರ್ಯಕ್ರಮ

ಮೈರೋಳ್ತಡ್ಕ:ಜೂ 25ರಂದು ಬಂದಾರು ಗ್ರಾಮದ
ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮೈರೋಳ್ತಡ್ಕ ಇಲ್ಲಿ ಶಾಲಾ ಆವರಣ,ಮೈದಾನ,ಅಡಿಕೆ ತೋಟದಲ್ಲಿ ಗಿಡಗಂಟಿಗಳನ್ನು ತೆಗೆಯುವ ಮೂಲಕ ಸ್ವಚ್ಚತಾ ಅಭಿಯಾನ ಮತ್ತು ಶ್ರಮದಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಸುಮಾರು 50 ಜನ ವಿದ್ಯಾರ್ಥಿಗಳ ಪೋಷಕರು,ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು,ಉಪಾಧ್ಯಕ್ಷರು,ಸರ್ವಸದಸ್ಯರು,ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

Leave A Reply

Your email address will not be published.