“ಶಿವಲಿಂಗ”ಕ್ಕೆ ಸಾರಾಯಿ ‘ಅಭಿಷೇಕ’ ಮಾಡಿದ ಯುವಕರು

ಹಿಂದೂ ಧರ್ಮದಲ್ಲಿ ದೇವ ದೇವರುಗಳಿಗೆ ಭಕ್ತಿ ಭಾವನೆ ಇದೆ. ಆದರೆ ಯುವಕರಿಬ್ಬರು ಶಿವಲಿಂಗಕ್ಕೆ ಬಿಯರ್ ನಿಂದ ಅಭಿಷೇಕ ಮಾಡಿದ್ದಾರೆ. ಇಂತಹ ಹೀನಾಯ ಕೃತ್ಯಕ್ಕೆ ಜನ ಛೀ ಥೂ ಅಂತಿದ್ದಾರೆ.

ಯುವಕರಿಬ್ಬರು ತಮ್ಮ ಪಾಡಿಗೆ ತಾವು ಬಿಯರ್ ಕುಡಿದು ಸುಮ್ನಿರೋ ಬದಲು ಶಿವಲಿಂಗಕ್ಕೆ ಅಭಿಷೇಕ ಮಾಡಿದ್ದಾರೆ. ಇದೀಗ ಇವರು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು, ಅದರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ಚಿತ್ರದಲ್ಲಿ ಕಾಲುವೆಯ ದಡದಲ್ಲಿ ಒಬ್ಬ ಯುವಕ ತಾನು ಬಿಯರ್ ಕುಡಿಯುತ್ತಿದ್ದರೆ, ಮತ್ತೊಬ್ಬ ಅಲ್ಲಿರುವ ಶಿವಲಿಂಗದ ಮೇಲೆ ಬಿಯರ್ ಸುರಿಯುತ್ತಿದ್ದಾನೆ. ಅಷ್ಟು ಮಾತ್ರವಲ್ಲದೇ, ಇಬ್ಬರೂ ಶೂ ಧರಿಸಿ ಈ ಕೃತ್ಯ ಮಾಡಿದ್ದಾರೆ.

ಈ ಫೋಟೋ ಹಾಗೂ ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರ ಗಮನಕ್ಕೆ ಬಂದಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ, ಇವರ ವಿರುದ್ಧ ದೂರು ದಾಖಲಿಸಿದ್ದು, ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಬಜರಂಗದಳ ಹೇಳಿದೆ. ಆರೋಪಿ ಯುವಕರನ್ನು ಹಿಡಿದು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅರವಿಂದ್ ಸಿಂಗ್ ದೈನಿಕ್ ಭಾಸ್ಕರ್ ಅವರಿಗೆ ತಿಳಿಸಿದರು.

Leave A Reply