ನಿಮ್ಮ ಮೊಬೈಲ್ ನಲ್ಲೂ ಈ ಡೇಂಜರಸ್ ಆಪ್ ಗಳಿದ್ದರೆ ಇಂದೇ ಡಿಲೀಟ್ ಮಾಡಿ!!

ಗೂಗಲ್ ಪ್ಲೇ ಸ್ಟೋರ್​ನಲ್ಲಿ ಕೆಲವೊಂದು ಡೇಂಜರಸ್ ಆಡ್​ವೇರ್​ಗಳು ಹಾಗೂ ಡೇಟಾ ಕಳವು ಮಾಡುವ ಮಾಲ್​ವೇರ್​ ಆಪ್​ಗಳಿರುವುದನ್ನು ಸೈಬರ್ ಸೆಕ್ಯೂರಿಟಿ ತಜ್ಞರು ತಿಂಗಳ ಹಿಂದೆ ಪತ್ತೆ ಮಾಡಿದ್ದರು. ಅದರಲ್ಲಿನ ಐದು ಆಪ್​ಗಳು ಈವರೆಗೂ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಲಭ್ಯವಿರುವುದು ಶಾಕಿಂಗ್ ನ್ಯೂಸ್ ಆಗಿದ್ದು, ಈ ಡೇಂಜರಸ್ ಆಪ್​ಗಳು ಎರಡೂ ಮಿಲಿಯನ್​ಗೂ ಹೆಚ್ಚು ಬಾರಿ ಡೌನ್ಲೋಡ್ ಬೇರೆ ಆಗಿದೆ. ಹೀಗಾಗಿ, ನಿಮ್ಮ ಮೊಬೈಲ್ ನಲ್ಲೂ ಈ ಆಪ್ ಇದ್ದರೆ ಈ ಕೂಡಲೇ ಎಚ್ಚೆತ್ತುಕೊಳ್ಳೋದು ಸೂಕ್ತ..

ಗೂಗಲ್ ಪ್ಲೇ ಸ್ಟೋರ್​ನಲ್ಲಿರುವ ಆಯಂಡ್ರಾಯ್ಡ್​ ಮಾಲ್​ವೇರ್ ನಿಮ್ಮ ಫೋನಿಗೆ ಬೇಡವಾದ ಜಾಹೀರಾತುಗಳನ್ನು ಕಳುಹಿಸುವುದರಿಂದ, ಬ್ಯಾಟರಿ ಬೇಗನೇ ಮುಗಿದು ಹೋಗಬಹುದು, ಫೋನ್ ಸಿಕ್ಕಾಪಟ್ಟೆ ಬಿಸಿಯಾಗಬಹುದು, ಬಳಕೆದಾರರು ಬಯಸಿದಂತೆ ಪೋನ್ ಕೆಲಸ ಮಾಡದಿರಬಹುದು ಹಾಗೂ ನಿಮಗೆ ಗೊತ್ತಾಗದೆ ಹಣಕಾಸು ವ್ಯವಹಾರಗಳೂ ನಡೆಯಬಹುದು. ಸ್ಪೈವೇರ್ ಆಪ್​ಗಳು ಇತರ ಆಪ್​ಗಳ ಡೇಟಾವನ್ನು ಸಹ ಕಳವು ಮಾಡುತ್ತವೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಇನ್ನು ಈ​ ಆಂಡ್ರಾಯ್ಡ್ ಮಾಲ್​ವೇರ್ ಫೋನಿಗೆ ಅಗತ್ಯವಾದ ಆಪ್​ ಒಂದರ ರೀತಿಯಲ್ಲಿ ತನ್ನನ್ನು ಬಚ್ಚಿಟ್ಟುಕಕೊಂಡು, ಯಾವ್ಯಾವುದೋ ಜಾಹೀರಾತುಗಳನ್ನು ನೀವು ನೋಡುವಂತೆ ಮಾಡಿ ಈ ಆಪ್​ಗಳು ಹಣ ಮಾಡಬಹುದು. ಡೇಟಾ ಕಳವು ಮಾಡುವ ಮಾಲ್​ವೇರ್​ಗಳು ಸಹ ಬಹಳವೇ ಅಪಾಯಕಾರಿಯಾಗಿದ್ದು, ಇವು ಸೋಷಿಯಲ್ ಮೀಡಿಯಾ, ಬ್ಯಾಂಕ್ ಖಾತೆಗಳ ಪಾಸ್​ವರ್ಡ್​ ಹಾಗೂ ಲಾಗಿನ್ ಮಾಹಿತಿಗಳನ್ನು ಕಳವು ಮಾಡಬಲ್ಲವು.

ನಿಮ್ಮ ಫೋನಿನಲ್ಲಿ ಈ ಮಾಲ್​ವೇರ್​ಗಳಿದ್ದರೆ ತಕ್ಷಣ ಡಿಲೀಟ್ ಮಾಡಿ:

ಪಿಪ್ ಪಿಕ್ ಕ್ಯಾಮೆರಾ ಫೋಟೊ ಎಡಿಟರ್ :
ಈ ಆಪ್ ಈಗಾಗಲೇ 1 ಮಿಲಿಯನ್​ಗೂ ಹೆಚ್ಚು ಬಾರಿ ​ಡೌನ್ಲೋಡ್ ಆಗಿದ್ದು, ಇಮೇಜ್ ಎಡಿಟಿಂಗ್ ಸಾಫ್ಟ್‌ವೇರ್​ನಲ್ಲಿ ಅಡಗಿರುವ ಮಾಲ್​ವೇರ್​ ನಿಮ್ಮ ಫೇಸ್​ಬುಕ್ ಲಾಗಿನ್ ಹಾಗೂ ಪಾಸ್​ವರ್ಡ್​ ಕಳವು ಮಾಡುತ್ತದೆ.

ವೈಲ್ಡ್​ ಆಯಂಡ್ ಎಕ್ಸೋಟಿಕ್ ಎನಿಮಲ್ ವಾಲ್ ಪೇಪರ್ :
ಇದೊಂದು ರೂಪ ಬದಲಾಯಿಸುವ ಮಾಲ್​ವೇರ್ ಆಗಿದ್ದು, ಸಿಮ್ ಟೂಲ್ ಕಿಟ್ ಎಂದು ತನ್ನ ಹೆಸರು ಬದಲಾಯಿಸಿಕೊಂಡು ಬ್ಯಾಟರಿ ಸೇವಿಂಗ್ ಆಪ್ಷನ್​ನಿಂದ ಹೊರತಾಗಿಸಿಕೊಳ್ಳುತ್ತದೆ. ಇದು 5 ಲಕ್ಷ ಬಾರಿ ಡೌನ್ಲೋಡ್ ಆಗಿದೆ.

ಝೋಡಿ ಹೋರೊಸ್ಕೋಪ್ – ಫಾರ್ಚ್ಯೂನ್ ಫೈಂಡರ್:
ಫೇಸ್​ಬುಕ್ ಐಡಿ ಪಾಸ್​ವರ್ಡ್​ ಕದಿಯುವ ಮತ್ತೊಂದು ಮಾಲ್​ವೇರ್ ಇದಾಗಿದ್ದು, 5 ಲಕ್ಷ ಬಾರಿ ಡೌನ್ಲೋಡ್ ಆಗಿದೆ.

ಪಿಪ್ ಕ್ಯಾಮೆರಾ 2022 (PIP Camera 2022) : ಕ್ಯಾಮೆರಾ ಎಫೆಕ್ಟ್​ ರೂಪದಲ್ಲಿರುವ ಇದು ಫೇಸ್​ ಬುಕ್ ಐಡಿ ಪಾಸ್​ ವರ್ಡ್ ಕದಿಯುತ್ತದೆ. 50 ಸಾವಿರ ಡೌನ್ಲೋಡ್ ಆಗಿದೆ.

ಮ್ಯಾಗ್ನಿಫೈಯರ್ ಫ್ಲ್ಯಾಶ್ ಲೈಟ್ :
ವಿಡಿಯೋ ಹಾಗೂ ಸ್ಟ್ಯಾಟಿಕ್ ಬ್ಯಾನರ್ ಆಪ್ ಆಗಿರುವ ಇದೊಂದು ಮಾಲ್​ವೇರ್ ಆಗಿದೆ.

Leave a Reply

error: Content is protected !!
Scroll to Top
%d bloggers like this: