ನಿಮ್ಮ ಮೊಬೈಲ್ ನಲ್ಲೂ ಈ ಡೇಂಜರಸ್ ಆಪ್ ಗಳಿದ್ದರೆ ಇಂದೇ ಡಿಲೀಟ್ ಮಾಡಿ!!
ಗೂಗಲ್ ಪ್ಲೇ ಸ್ಟೋರ್ನಲ್ಲಿ ಕೆಲವೊಂದು ಡೇಂಜರಸ್ ಆಡ್ವೇರ್ಗಳು ಹಾಗೂ ಡೇಟಾ ಕಳವು ಮಾಡುವ ಮಾಲ್ವೇರ್ ಆಪ್ಗಳಿರುವುದನ್ನು ಸೈಬರ್ ಸೆಕ್ಯೂರಿಟಿ ತಜ್ಞರು ತಿಂಗಳ ಹಿಂದೆ ಪತ್ತೆ ಮಾಡಿದ್ದರು. ಅದರಲ್ಲಿನ ಐದು ಆಪ್ಗಳು ಈವರೆಗೂ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವುದು ಶಾಕಿಂಗ್ ನ್ಯೂಸ್ ಆಗಿದ್ದು, ಈ ಡೇಂಜರಸ್ ಆಪ್ಗಳು ಎರಡೂ ಮಿಲಿಯನ್ಗೂ ಹೆಚ್ಚು ಬಾರಿ ಡೌನ್ಲೋಡ್ ಬೇರೆ ಆಗಿದೆ. ಹೀಗಾಗಿ, ನಿಮ್ಮ ಮೊಬೈಲ್ ನಲ್ಲೂ ಈ ಆಪ್ ಇದ್ದರೆ ಈ ಕೂಡಲೇ ಎಚ್ಚೆತ್ತುಕೊಳ್ಳೋದು ಸೂಕ್ತ..
ಗೂಗಲ್ ಪ್ಲೇ ಸ್ಟೋರ್ನಲ್ಲಿರುವ ಆಯಂಡ್ರಾಯ್ಡ್ ಮಾಲ್ವೇರ್ ನಿಮ್ಮ ಫೋನಿಗೆ ಬೇಡವಾದ ಜಾಹೀರಾತುಗಳನ್ನು ಕಳುಹಿಸುವುದರಿಂದ, ಬ್ಯಾಟರಿ ಬೇಗನೇ ಮುಗಿದು ಹೋಗಬಹುದು, ಫೋನ್ ಸಿಕ್ಕಾಪಟ್ಟೆ ಬಿಸಿಯಾಗಬಹುದು, ಬಳಕೆದಾರರು ಬಯಸಿದಂತೆ ಪೋನ್ ಕೆಲಸ ಮಾಡದಿರಬಹುದು ಹಾಗೂ ನಿಮಗೆ ಗೊತ್ತಾಗದೆ ಹಣಕಾಸು ವ್ಯವಹಾರಗಳೂ ನಡೆಯಬಹುದು. ಸ್ಪೈವೇರ್ ಆಪ್ಗಳು ಇತರ ಆಪ್ಗಳ ಡೇಟಾವನ್ನು ಸಹ ಕಳವು ಮಾಡುತ್ತವೆ.
ಇನ್ನು ಈ ಆಂಡ್ರಾಯ್ಡ್ ಮಾಲ್ವೇರ್ ಫೋನಿಗೆ ಅಗತ್ಯವಾದ ಆಪ್ ಒಂದರ ರೀತಿಯಲ್ಲಿ ತನ್ನನ್ನು ಬಚ್ಚಿಟ್ಟುಕಕೊಂಡು, ಯಾವ್ಯಾವುದೋ ಜಾಹೀರಾತುಗಳನ್ನು ನೀವು ನೋಡುವಂತೆ ಮಾಡಿ ಈ ಆಪ್ಗಳು ಹಣ ಮಾಡಬಹುದು. ಡೇಟಾ ಕಳವು ಮಾಡುವ ಮಾಲ್ವೇರ್ಗಳು ಸಹ ಬಹಳವೇ ಅಪಾಯಕಾರಿಯಾಗಿದ್ದು, ಇವು ಸೋಷಿಯಲ್ ಮೀಡಿಯಾ, ಬ್ಯಾಂಕ್ ಖಾತೆಗಳ ಪಾಸ್ವರ್ಡ್ ಹಾಗೂ ಲಾಗಿನ್ ಮಾಹಿತಿಗಳನ್ನು ಕಳವು ಮಾಡಬಲ್ಲವು.
ನಿಮ್ಮ ಫೋನಿನಲ್ಲಿ ಈ ಮಾಲ್ವೇರ್ಗಳಿದ್ದರೆ ತಕ್ಷಣ ಡಿಲೀಟ್ ಮಾಡಿ:
ಪಿಪ್ ಪಿಕ್ ಕ್ಯಾಮೆರಾ ಫೋಟೊ ಎಡಿಟರ್ :
ಈ ಆಪ್ ಈಗಾಗಲೇ 1 ಮಿಲಿಯನ್ಗೂ ಹೆಚ್ಚು ಬಾರಿ ಡೌನ್ಲೋಡ್ ಆಗಿದ್ದು, ಇಮೇಜ್ ಎಡಿಟಿಂಗ್ ಸಾಫ್ಟ್ವೇರ್ನಲ್ಲಿ ಅಡಗಿರುವ ಮಾಲ್ವೇರ್ ನಿಮ್ಮ ಫೇಸ್ಬುಕ್ ಲಾಗಿನ್ ಹಾಗೂ ಪಾಸ್ವರ್ಡ್ ಕಳವು ಮಾಡುತ್ತದೆ.
ವೈಲ್ಡ್ ಆಯಂಡ್ ಎಕ್ಸೋಟಿಕ್ ಎನಿಮಲ್ ವಾಲ್ ಪೇಪರ್ :
ಇದೊಂದು ರೂಪ ಬದಲಾಯಿಸುವ ಮಾಲ್ವೇರ್ ಆಗಿದ್ದು, ಸಿಮ್ ಟೂಲ್ ಕಿಟ್ ಎಂದು ತನ್ನ ಹೆಸರು ಬದಲಾಯಿಸಿಕೊಂಡು ಬ್ಯಾಟರಿ ಸೇವಿಂಗ್ ಆಪ್ಷನ್ನಿಂದ ಹೊರತಾಗಿಸಿಕೊಳ್ಳುತ್ತದೆ. ಇದು 5 ಲಕ್ಷ ಬಾರಿ ಡೌನ್ಲೋಡ್ ಆಗಿದೆ.
ಝೋಡಿ ಹೋರೊಸ್ಕೋಪ್ – ಫಾರ್ಚ್ಯೂನ್ ಫೈಂಡರ್:
ಫೇಸ್ಬುಕ್ ಐಡಿ ಪಾಸ್ವರ್ಡ್ ಕದಿಯುವ ಮತ್ತೊಂದು ಮಾಲ್ವೇರ್ ಇದಾಗಿದ್ದು, 5 ಲಕ್ಷ ಬಾರಿ ಡೌನ್ಲೋಡ್ ಆಗಿದೆ.
ಪಿಪ್ ಕ್ಯಾಮೆರಾ 2022 (PIP Camera 2022) : ಕ್ಯಾಮೆರಾ ಎಫೆಕ್ಟ್ ರೂಪದಲ್ಲಿರುವ ಇದು ಫೇಸ್ ಬುಕ್ ಐಡಿ ಪಾಸ್ ವರ್ಡ್ ಕದಿಯುತ್ತದೆ. 50 ಸಾವಿರ ಡೌನ್ಲೋಡ್ ಆಗಿದೆ.
ಮ್ಯಾಗ್ನಿಫೈಯರ್ ಫ್ಲ್ಯಾಶ್ ಲೈಟ್ :
ವಿಡಿಯೋ ಹಾಗೂ ಸ್ಟ್ಯಾಟಿಕ್ ಬ್ಯಾನರ್ ಆಪ್ ಆಗಿರುವ ಇದೊಂದು ಮಾಲ್ವೇರ್ ಆಗಿದೆ.