ಅಂದು ತರಗತಿಗೆ ನೊ ನೊ…ಇಂದು ಯೂಟರ್ನ್…ಹಿಜಾಬ್ ಹೋರಾಗಾರ್ತಿಯರ ಅಂತಿಮ ತೀರ್ಮಾನ

ಮಂಗಳೂರು: ‘ಹಿಜಾಬ್ ನಮ್ಮ ಹಕ್ಕು’ ಎಂದು ಹೋರಾಟ ನಡೆಸಿ, ಹಿಜಾಬ್ ಧರಿಸದೆ ತರಗತಿಗೂ ಬರಲ್ಲ ಪರೀಕ್ಷೆನೂ ಬರೆಯಲ್ಲ ಎಂದು ಹೋರಾಟ ನಡೆಸಿದ್ದ ವಿದ್ಯಾರ್ಥಿಗಳು ಇದೀಗ ಕಂಪ್ಲೇಂಟ್ ಚೇಂಜ್ ಆಗಿ ಪ್ರಾಂಶುಪಾಲರ ಬಳಿ ಕ್ಷಮೆಯಾಚಿಸಿದ ಘಟನೆ ನಡೆದಿದೆ.

 

ಹೌದು. ಅಂದು ಅದೆಷ್ಟೇ ಬುದ್ಧಿ ಮಾತು ಹೇಳಿದರೂ ಯಾರ ಮಾತಿಗೂ ಜಗ್ಗದೇ, ಕೋರ್ಟ್ ಆದೇಶಕ್ಕೂ ತಲೆ ಬಾಗದ ಮುಸ್ಲಿಂ ಹುಡುಗಿಯರು ಶಿಕ್ಷಣಕ್ಕಿಂತ ಹಿಜಾಬ್ ಯೇ ಮುಖ್ಯ ಎಂದು ಕಾಲೇಜಿನ ವಿರುದ್ಧವೇ ಹೋರಾಟಕ್ಕೆ ಇಳಿದಿದ್ದರು. ಇದೀಗ ಹೋರಾಟಕ್ಕೆ ಇಳಿದಿದ್ದ 15 ಮಂದಿ ವಿದ್ಯಾರ್ಥಿನಿಯರ ಪೈಕಿ ಒಬ್ಬಾಕೆ ಪ್ರಾಂಶುಪಾಲರ ಬಳಿ ಕ್ಷಮೆಯಾಚಿಸಿ, ಕಾಲೇಜಿನ ನಿಯಮವನ್ನು ಅನುಸರಿಸಿ ಕಾಲೇಜಿಗೆ ಬರಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾಳೆ.

ಇತ್ತೀಚೆಗೆ ಮಂಗಳೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಮೂವರು ವಿದ್ಯಾರ್ಥಿನಿಯರ ಪೈಕಿ, ಒಬ್ಬಾಕೆ ಧಾರ್ಮಿಕ ಕಟ್ಟುಪಾಡುಗಳನ್ನು ಕಾಲೇಜಿನ ಒಳಗೆ ಅನುಸರಿಸದೇ, ಕಾಲೇಜಿನ ನಿಯಮಗಳನ್ನು ಪಾಲಿಸಿ ತರಗತಿಗೆ ಬರುವುದಾಗಿ ಪ್ರಾಂಶುಪಾಲರ ಬಳಿ ತನ್ನ ಹೆತ್ತವರ ಸಮ್ಮುಖದಲ್ಲಿ ಕ್ಷಮೆಯಾಚಿಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಗೆ ಮತ್ತೆ ಕಾಲೇಜಿನಲ್ಲಿ ಮುಂದುವರಿಯಲು ಪ್ರಾಂಶುಪಾಲರು ಅನುಮತಿಯನ್ನು ನೀಡಿದ್ದಾರೆ.

ಆದರೆ, ಒಟ್ಟು 15 ಮಂದಿ ಹಿಜಾಬ್‌ಗಾಗಿ ಪಟ್ಟು ಹಿಡಿದಿದ್ದ ವಿದ್ಯಾರ್ಥಿನಿಯರ ಪೈಕಿ ಇಬ್ಬರು ವಿದ್ಯಾರ್ಥಿನಿಯರು ಮಂಗಳೂರು ವಿವಿ ಕಾಲೇಜನ್ನು ತೊರೆದು ಬೇರೆ ಕಾಲೇಜಿಗೆ ವರ್ಗಾವಣೆಯಾಗಲು ಕಾಲೇಜಿನಿಂದ ಎನ್‌ಒಸಿ ಪಡೆದುಕೊಂಡಿದ್ದಾರೆ. ಮತ್ತೊಬ್ಬಾಕೆ ಕಾಲೇಜಿನಿಂದ ವರ್ಗಾವಣೆ ಪತ್ರವನ್ನು ಕಾಲೇಜಿನಿಂದ ಪಡೆದಿದ್ದಾಳೆ. ಒಟ್ಟಾರೆ ಹಿಜಾಬ್ ವಿರುದ್ಧದ ಹೋರಾಟ ತಣ್ಣಗೆ ಆಗುತ್ತೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ…

Leave A Reply

Your email address will not be published.