ಬ್ಯಾಂಕ್ ನಲ್ಲಿ ಒಂದು ಖಾತೆ ತೆರೆಯಲು ಎಷ್ಟೆಲ್ಲಾ ಡಾಕ್ಯುಮೆಂಟ್ ತಗೊಂಡು ಹೋಗಬೇಕು. ಎಷ್ಟು ಸಹಿ ಬೇಕು, ಕಾಯಬೇಕು ಅಷ್ಟು ಮಾತ್ರವಲ್ಲದೇ ನಾವಿದ್ದ ಕಡೆಯಿಂದ ನಮಗೆ ಬೇಕಾದ ಬ್ಯಾಂಕ್ ಹುಡುಕಬೇಕು. ಇಷ್ಟೆಲ್ಲಾ ಕೆಲಸಗಳಿರುತ್ತವೆ. ಈಗ ಈ ಗೊಂದಲಗಳಿಗೆ ಎಲ್ಲಾ ಬ್ರೇಕ್ ಬಿದ್ದಿದೆ. ಹೌದು, ಈಗ ಇದಕ್ಕೆ ಕರ್ನಾಟಕ ಬ್ಯಾಂಕ್ ಹೊಸ ದಾರಿಯೊಂದನ್ನು ಹುಡುಕಿದೆ.
ಹೌದು, ಕರ್ನಾಟಕ ಬ್ಯಾಂಕ್ ನಲ್ಲಿ ಖಾತೆ ತೆರೆಯಬಯಸುವ ಹೊಸ ಗ್ರಾಹಕರಿಗೆ ವಿಶಿಷ್ಟ ಸೌಲಭ್ಯವೊಂದನ್ನು ಪರಿಚಯಿಸಿದ್ದು, ಇದರ ಮೂಲಕ ಗ್ರಾಹಕರು ತಾವಿರುವ ಸ್ಥಳದಿಂದಲೇ ವೀಡಿಯೋ ಕರೆ ಮಾಡಿ ಉಳಿತಾಯ ಖಾತೆಯನ್ನು ತೆರೆಯಬಹುದಾಗಿದೆ.

ಬುಧವಾರದಂದು ಈ ಸೌಲಭ್ಯವನ್ನು
ಲೋಕಾರ್ಪಣೆಗೊಳಿಸಲಾಗಿದ್ದು, ಈ ವ್ಯವಸ್ಥೆಯಡಿ ಡಿಜಿಟಲ್ ಪ್ರಕ್ರಿಯೆ ಮೂಲಕ ಕಾಗದ ರಹಿತವಾಗಿ ಖಾತೆ ತೆರೆಯಬಹುದಾಗಿದೆ. ಗ್ರಾಹಕರು ತಮ್ಮ ಆಧಾರ್/ಪಾನ್ ಸಂಖ್ಯೆಯನ್ನು ನಮೂದಿಸಿ ಉಳಿತಾಯ ಖಾತೆಯನ್ನು ಕೆಲವೇ ನಿಮಿಷಗಳಲ್ಲಿ ಆರಂಭಿಸಬಹುದಾಗಿದೆ.