ಚಿಗುರು ಮೀಸೆಯ ಯುವಕನ ಜೊತೆ “ಆಂಟಿ” ಎಸ್ಕೇಪ್ !!! ಗೃಹಿಣಿಯನ್ನು ಕಾಡಂಚಿನಲ್ಲಿ ಬಿಟ್ಟು ಅರ್ಚಕ ಪರಾರಿ!

ಎರಡು ಮಕ್ಕಳ ತಾಯಿಯೋರ್ವಳು ತರುಣನ ಜೊತೆ ಓಡಿ ಹೋಗಿ ಈಗ ಪೇಚಿಗೆ ಸಿಲುಕಿದ ಘಟನೆಯೊಂದು ನಡೆದಿದೆ. ಮಹಿಳೆಯ ಜೊತೆ ಬಹಳ ಎಂಜಾಯ್ ಮಾಡಿದ ನಂತರ ಈ ಯುವಕ ಆಕೆಯನ್ನು ಕಾಡಲ್ಲಿ ಒಂಟಿಯಾಗಿ ಬಿಟ್ಟು ಓಡಿಹೋಗಿದ್ದಾನೆ ಅಂದರೆ ನಂಬುತ್ತೀರಾ? ನಂಬಲೇಬೇಕು. ಈ ವಿಚಿತ್ರ ಘಟನೆಯನ್ನು ನಾವು ನಿಮಗೆ ಸಂಪೂರ್ಣವಾಗಿ ತಿಳಿಸುತ್ತೇವೆ.

ಹತ್ತು ದಿನಗಳ ಹಿಂದೆ 21 ವರ್ಷದ ಅರ್ಚಕನ ಜೊತೆ ಪರಾರಿಯಾಗಿದ್ದ ವಿವಾಹಿತ ಮಹಿಳೆ ಕಾಡಂಚಿನಲ್ಲಿ ಪತ್ತೆಯಾಗಿದ್ದಾಳೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೊಲ್ಲೂಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

21 ವರ್ಷದ ಅರ್ಚಕನ ಜೊತೆ ಪರಾರಿಯಾಗಿದ್ದ ಎರಡು ಮಕ್ಕಳ ತಾಯಿ ಈಗ ಅತಂತ್ರಳಾಗಿ ಕಾಡಂಚಿನಲ್ಲಿ ಪತ್ತೆಯಾಗಿದ್ದಾಳೆ. ಬಾಳು ಕೊಡುವುದಾಗಿ ನಂಬಿಸಿ ಕರೆದೊಯ್ದ ಚಿಗುರು ಮೀಸೆಯ ಯುವ ಅರ್ಚಕ, ಆಕೆಯೊಂದಿಗೆ ಹತ್ತು ದಿನ ಒಡನಾಟ ಬೆಳೆಸಿ ನಂತರ ಕಾಡಂಚಿನಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಗ್ರಾಮಸ್ಥರ ಕಣ್ಣಿಗೆ ಬಿದ್ದ ಗೃಹಿಣಿ ಅರ್ಚಕನ ಜೊತೆ ಇರಬೇಕೆಂದು ಪಟ್ಟು ಹಿಡಿದಿದ್ದಾಳೆ. ಆದರೆ, ಪೂಜಾರಿ ಕೈಕೊಟ್ಟು ಪರಾರಿಯಾಗಿದ್ದಾನೆ.

35 ವರ್ಷದ ಗೃಹಿಣಿ, ಜೂನ್ 12ರಂದು ತಂದೆ ಮನೆಯಿಂದ ಓಡಿಹೋಗಿದ್ದಾಳೆ. ನಂತರ ದಿಕ್ಕುತೋಚದ ಸ್ಥಿತಿಯಲ್ಲಿ ನಿರ್ಜನ ಪ್ರದೇಶದಲ್ಲಿ ಗೃಹಿಣಿ ಪತ್ತೆಯಾಗಿದ್ದಾಳೆ.

ಈ ಮಹಿಳೆ ಮಹದೇಶ್ವರನ ದೇವಸ್ಥಾನಕ್ಕೆ ಹೋಗಿದ್ದಾಗ 21 ವರ್ಷದ ಅರ್ಚಕ ಸಂತೋಷ್ ಪರಿಚಯವಾಗಿದ್ದಾನೆ. ಬಳಿಕ ಗೃಹಿಣಿಯ ಜೊತೆಗೆ ಸಲುಗೆ ಬೆಳೆಸಿದ್ದಾನೆ. ನಿನಗೆ ಹೊಸ ಬಾಳು ಕೊಡುತ್ತೇನೆಂದು ನಂಬಿಸಿದ ಸಂತೋಷ್, ಗೃಹಿಣಿಯನ್ನು ತನ್ನ ಜೊತೆ ಕರೆದೊಯ್ದಿದ್ದಾನೆ. ಹತ್ತು ದಿನಗಳ ಕಾಲ ಆಕೆಯೊಂದಿಗೆ ತಿರುಗಾಡಿ, ನಂತರ ಆತ್ಮಹತ್ಯೆ ನಾಟಕವಾಡಿ ಕಾಡಿಗೆ ಕರೆತಂದಿದ್ದಾನೆ. ಆದರೆ ತಕ್ಷಣ ತನ್ನ ಮನಸ್ಸು ಬದಲಾಯಿಸಿ, ಮಧ್ಯರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಸಂತೋಷ್ ನಾಪತ್ತೆಯಾಗಿದ್ದಾನೆ.

ಇಡೀ ರಾತ್ರಿ ಒಂಟಿಯಾಗಿ ಕಾಡಿನಲ್ಲಿ ಕಾಲ ಕಳೆದ ಗೃಹಿಣಿ, ಮುಂಜಾನೆ ಸ್ಥಳೀಯರ ಕಣ್ಣಿಗೆ ಬಿದ್ದಿದ್ದಾಳೆ. ಗೃಹಿಣಿಯ ಕಥೆ ಕೇಳಿದ ಗ್ರಾಮಸ್ಥರು ಹುಲ್ಲಹಳ್ಳಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಗೃಹಿಣಿಗೆ ರಕ್ಷಣೆ ನೀಡಿದ್ದಾರೆ. ಬಾಳು ಕೊಡುವುದಾಗಿ ನಂಬಿಸಿ ಕರೆದೊಯ್ದ ಪೂಜಾರಿ ಸಂತೋಷ್ ಇದೀಗ ನಾಪತ್ತೆಯಾಗಿದ್ದಾನೆ. ಇತ್ತ ಗಂಡನ ಮನೆಯೂ ಇಲ್ಲ, ಬಾಳು ಕೊಡುವುದಾಗಿ ನಂಬಿಸಿದ ಸಂತೋಷ್ ಸಹ ಇಲ್ಲದೆ ಗೃಹಿಣಿ ಅತಂತ್ರಕ್ಕೆ ಸಿಲುಕಿದ್ದಾಳೆ.

ಸದ್ಯ ಸಂತೋಷ್ ಜೊತೆ ಇರುವುದಾಗಿ ಗೃಹಿಣಿ ಪಟ್ಟು ಹಿಡಿದಿದ್ದಾಳೆ. ಹುಲ್ಲಹಳ್ಳಿ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

error: Content is protected !!
Scroll to Top
%d bloggers like this: