ಫುಟ್ಬಾಲ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೊ ಕಾರು ಅಪಘಾತ!!!

ಪಂದ್ಯಗಳಿಂದ ಬಿಡುವು ಮಾಡಿಕೊಂಡು ವಿಶ್ರಾಂತಿಗೆ ಜಾರಿದ್ದ ಪೋರ್ಚುಗಲ್ ಹಾಗೂ ಮ್ಯಾಂಚೆಸ್ಟರ್ ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೊಗೆ ದೊಡ್ಡದೊಂದು ಶಾಕಿಂಗ್ ನ್ಯೂಸ್ ಎದುರಾಗಿದೆ. ರೆಸ್ಟ್‌ನಲ್ಲಿದ್ದ ರೋನಾಲ್ಡೊಗೆ ಬರೋಬ್ಬರಿ 17 ಕೋಟಿ ರೂಪಾಯಿ ಲಾಸ್ ಆಗಿದೆ.

 

ಇದಕ್ಕೆ ಕಾರಣ ರೊನಾಲ್ಡೊ ಅವರ 17 ಕೋಟಿ ರೂಪಾಯಿ ಮೌಲ್ಯದ ಬುಗಾಟ್ಟಿ ವೆಯ್ತಾನ್ ಕಾರು ತಮ್ಮದೇ ಮನೆಯ ಕೌಂಪೌಂಡ್‌ಗೆ ಡಿಕ್ಕಿ ಹೊಡೆದು ಜಖಂ ಆಗಿದೆ.

ಯುಕೆನಿಂದ ಸ್ಪೇನ್‌ಗೆ ಹಿಂತಿರುಗಿದ ರೊನಾಲ್ಡೊ ಸ್ಪೇನ್ ಮಾಲೋರ್ಕಾದಲ್ಲಿರುವ ಮನೆಯಲ್ಲಿ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದರು. ಈ ವೇಳೆ ರೊನಾಲ್ಡೊ ಉದ್ಯೋಗಿ ಸೂಪರ್ ಕಾರಾದ ಬುಗಾಟ್ಟಿ ವೆಯಾನ್ ಕಾರನ್ನು ಮನೆಯಿಂದ ಹೊರಗಡೆ ತೆಗೆದಿದ್ದಾರೆ. ರೊನಾಲ್ಡೊ ಸೂಚನೆ ಮೇರೆಗೆ ವೆಝಾನ್ ಕಾರಿನಲ್ಲಿ ಹೊರಗಡೆ ತೆರಳಿದ್ದಾರೆ. ಮರಳಿ ಮನೆಗೆ ಬಂದ ಉದ್ಯೋಗಿ ಕಾರನ್ನು ಪಾರ್ಕ್ ಮಾಡುವ ಬದಲು ನೇರವಾಗಿ ಬಂದು ಮನೆಯ ಮುಂಭಾಗದಲ್ಲಿರುವ ಕೌಂಪೌಂಡ್‌ಗೆ ಗುದ್ದಿದ್ದಾರೆ.

ಬುಗಾಟಿ ವೆಝಾನ್ ಸೂಪರ್ ಕಾರಿನ ಗರಿಷ್ಠ ವೇಗ 410 ಕಿ.ಮೀ ಪ್ರತಿ ಗಂಟೆಗೆ. ಇನ್ನು ಕೇವಲ 2 ಸೆಕೆಂಡ್‌ನಲ್ಲಿ ಈ ಕಾರು 100 ಕಿ.ಮೀ ವೇಗ ತಲುಪಲಿದೆ. ಹೀಗಾಗಿ ಈ ಕಾರು ಚಲಾಯಿಸಲು ಅಭ್ಯಾಸ ಬೇಕೆ ಬೇಕು. ಕಾರಣ ಇದರ ವೇಗ ಹಾಗೂ ಅದನ್ನು ನಿಯಂತ್ರಿಸಬಲ್ಲ ಕೌಶಲ್ಯವೂ ಗೊತ್ತಿರಬೇಕು. ಪ್ರತಿ ಬಾರಿ ಈ ಕಾರನ್ನು ನಿರ್ವಹಣೆ ಮಾಡಲು ಕೊಂಡೊಯ್ಯುತ್ತಿದ್ದ ಉದ್ಯೋಗಿಯಿಂದ ಈ ಬಾರಿ ಎಡವಟ್ಟವಾಗಿದೆ. ಕಾರು ವೇಗವಾಗಿ ಬಂದು ಕೌಂಪೌಂಡ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಕಾರು ಬಹುತೇಕ ಜಖಂಗೊಂಡಿದೆ. ಕಾರಿನ ಮುಂಭಾಗ ಸಂಪೂರ್ಣ ನಜ್ಜು ಗುಜ್ಜಾಗಿದೆ. ಆದರೆ ಕಾರು ಚಲಾಯಿಸುತ್ತಿದ್ದ ಉದ್ಯೋಗಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಇಷ್ಟೇ ಅಲ್ಲ ರೊನಾಲ್ಡೊ ಮನೆಯ ಕೌಂಪೌಂಡ್‌ಗೂ ಹಾನಿಯಾಗಿದೆ.

Leave A Reply

Your email address will not be published.