40 ವರ್ಷದ ಬಳಿಕ ಪ್ರತೀ ತಿಂಗಳು ಒಂದು ಸಾವಿರ ರೂಪಾಯಿಯನ್ನು ಪಡೆಯಬಹುದಾದ ಯೋಜನೆಯ ಕುರಿತು ಮಾಹಿತಿ

0 84

ಪ್ರತಿಯೊಬ್ಬ ಮನುಷ್ಯನು ಮುಂದಿನ ಸುಖಕರ ಜೀವನಕ್ಕಾಗಿ ಭವಿಷ್ಯ ನಿಧಿಯನ್ನು ಸಂಗ್ರಹಿಸುವುದು ಮುಖ್ಯ. ಹೀಗಾಗಿ ಸರ್ಕಾರ ಇಂತವರಿಗಾಗಿಯೇ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳಲ್ಲಿ ಅಟಲ್ ಪಿಂಚಣಿ ಯೋಜನೆ ಕೂಡ ಒಂದು. ನೀವು ಈ ಯೋಜನೆಯಿಂದ 40 ವರ್ಷದ ಬಳಿಕ ಪ್ರತೀ ತಿಂಗಳು ಒಂದು ಸಾವಿರ ರೂಪಾಯಿಯನ್ನು ಪಡೆಯಬಹುದು.

ಈ ಯೋಜನೆಯಡಿ ವೃದ್ಧಾಪ್ಯ ಪಿಂಚಣಿ ಪಡೆಯಲು, ಅರ್ಜಿದಾರರು ಪ್ರತಿ ತಿಂಗಳು ಹಣ ಠೇವಣಿ ಇಡಬೇಕಾಗುತ್ತದೆ. ವಾಸ್ತವವಾಗಿ, ಈ ಯೋಜನೆಗೆ ಸೇರುವ ವಯಸ್ಸು 18 ರಿಂದ 40 ವರ್ಷಗಳು. ಹಾಗಾಗಿ 40 ವರ್ಷಕ್ಕಿಂತ ಮೇಲ್ಪಟ್ಟ ಜನ ಈ ಯೋಜನೆಗೆ ಸೇರಲು ಸಾಧ್ಯವಿಲ್ಲ. ಇನ್ನು ಈ ಯೋಜನೆಯಲ್ಲಿ ಪಿಂಚಣಿ ಲಾಭ ಪಡೆಯೋಕೆ ನೀವು ಕನಿಷ್ಠ 20 ವರ್ಷಗಳ ಕಾಲವಾದರೂ ಇದರಲ್ಲಿ ಹೂಡಿಕೆ ಮಾಡಬೇಕು. ಬಳಿಕ ನಿಮಗೆ 60 ವರ್ಷವಾದಾಗ ನೀವು ಈ ಯೋಜನೆಯ ಪ್ರಯೋಜನ ಪಡೆಯಬಹುದು.

ಅರ್ಜಿದಾರರ ವಯಸ್ಸು 18 ವರ್ಷವಾಗಿದ್ರೆ, ಅರ್ಜಿದಾರರು ತಿಂಗಳಿಗೆ ರೂ 210 ಹೂಡಿಕೆ ಮಾಡಬಹುದು. ಅಂತಹವರು 60 ವರ್ಷ ವಯಸ್ಸಿನಿಂದ ತಿಂಗಳಿಗೆ ರೂ. 5,000 ಪಿಂಚಣಿ ಪಡೆಯುತ್ತಾರೆ. ಇನ್ನು ಅರ್ಜಿದಾರರು 1,000 ರೂಪಾಯಿ ಪಿಂಚಣಿ ಪಡೆಯಲು ಬಯಸಿದರೆ, ಅರ್ಜಿದಾರರು 18 ವರ್ಷ ವಯಸ್ಸಿನಿಂದ ತಿಂಗಳಿಗೆ 42 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ.

ಆಕಸ್ಮತ್ ಠೇವಣಿದಾರ ಪತಿ 60 ವರ್ಷಕ್ಕಿಂತ ಮೊದಲೇ ಮರಣ ಹೊಂದಿದರೆ, ಈ ಪಿಂಚಣಿಯ ಹಣವನ್ನ ಹೆಂಡತಿಗೆ ಅಥವಾ ಗಂಡನಿಗೆ ನೀಡಲಾಗುತ್ತದೆ. ಒಂದು ವೇಳೆ, ಪತಿ-ಪತ್ನಿ ಇಬ್ಬರು ಸಾವನ್ನಪ್ಪಿದರೆ, ನಾಮಿನಿಗೆ ಸಂಪೂರ್ಣ ಹಣವನ್ನು ಹಿಂತಿರುಗಿಸಲಾಗುತ್ತದೆ.

ಅಟಲ್ ಪಿಂಚಣಿ ಯೋಜನೆಯು ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದ್ದು, ಮಾಹಿತಿಯ ಪ್ರಕಾರ, ಸುಮಾರು 4 ಕೋಟಿ ಜನರು ಈ ಯೋಜನೆಗೆ ಸೇರಿದ್ದಾರೆ. ನೀವು ಕೂಡ ಈ ಯೋಜನೆಗೆ ಸೇರಲು ಇಚ್ಛಿಸಿದರೆ, ಹತ್ತಿರದ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ʼನಲ್ಲಿ ಖಾತೆ ಹೊಂದಿರಬೇಕು. ಅಲ್ಲಿ ಅಟಲ್‌ ಪಿಂಚಣಿ ಯೋಜನೆಯ ಅರ್ಜಿ ತುಂಬುವುದರ ಮೂಲಕ ಯೋಜನೆಗೆ ಸೇರಬಹುದಾಗಿದೆ.

Leave A Reply