ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅಣ್ಣನ ಜೊತೆ ಮೂರನೇ ಮದುವೆಗೆ ಸಿದ್ಧಳಾದ ಕನ್ನಡದ ಖ್ಯಾತ ನಟಿ !!

ಕನ್ನಡದ ಪ್ರಸಿದ್ಧ ನಟಿ, ಈಗ ತೆಲುಗಿನಲ್ಲಿ ಮಿಂಚುತ್ತಿರುವ ಪವಿತ್ರ ಲೋಕೇಶ್ ಅವರು ಮೂರನೇ ಮದುವೆಯಾಗುತ್ತಿದ್ದಾರಂತೆ. ತೆಲುಗಿನ ಹಿರಿಯ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಇಬ್ಬರೂ ಪ್ರೀತಿಸುತ್ತಿದ್ದಾರೆ. ಬಹಳ ದಿನಗಳಿಂದ ಲಿವ್‌ ಇನ್ ರಿಲೇಶನ್‌ ಶಿಪ್‌ನಲ್ಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಪವಿತ್ರಾ ಲೋಕೇಶ್ ಹಾಗೂ ನರೇಶ್ ಇಬ್ಬರೂ ತೆಲುಗಿನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೀಗಾಗಿ ಈ ಸುದ್ದಿ ನಿಜ ಇದ್ದರೂ ಇರಬಹುದು ಎಂದು ಅಂದಾಜಿಸಲಾಗುತ್ತಿದೆ. ಇತ್ತೀಚೆಗೆ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಇಬ್ಬರೂ ಒಟ್ಟಿಗೆ ಮಹಾಬಲೇಶ್ವರಕ್ಕೆ ಹೋಗಿ ಸ್ವಾಮೀಜಿಯೊಬ್ಬರನ್ನು ಭೇಟಿಯಾಗಿ ಬಂದಿದ್ದಾರೆ ಎನ್ನಲಾಗಿದೆ. ಇಲ್ಲಿಂದ ಇಬ್ಬರ ಮದುವೆ ವಿಚಾರ ಬೆಳಕಿಗೆ ಬಂದಿದೆ ಎನ್ನುವುದು ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿ.

ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಅಣ್ಣ ನರೇಶ್ ಅವರನ್ನು ಪವಿತ್ರಾ ಲೋಕೇಶ್ ಮದುವೆಯಾಗುತ್ತಿದ್ದಾರೆ ಎಂಬುದು ಇದೀಗ ದಟ್ಟವಾಗಿದೆ. ಅಂದ ಹಾಗೆ ಇದು ನರೇಶ್ ಅವರಿಗೆ ಕೂಡಾ ಮೂರನೇ ಮದುವೆಯಂತೆ, ನಟಿ ಪವಿತ್ರಾ ಲೋಕೇಶ್ ಅವರಿಗೂ ಕೂಡ ಇದು ಮೂರನೇ ಮದುವೆಯಾಗಿದೆ.

ನಟ, ನಿರ್ದೇಶಕ ಸುಚೇಂದ್ರ ಪ್ರಸಾದ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ 2007ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರಿಗೂ ಅದು ಎರಡನೇ ಮದುವೆಯಾಗಿತ್ತು. ಆದರೂ ಇಬ್ಬರ ವೈವಾಹಿಕ ಜೀವನದಲ್ಲಿ ಸಾಮರಸ್ಯವಿಲ್ಲ ಎಂದು ಸ್ಯಾಂಡಲ್‌ವುಡ್ ಈಗ ಮಾತಾಡಿಕೊಳ್ಳುತ್ತಿದೆ. ಇಬ್ಬರೂ ಜೊತೆಯಲ್ಲಿ ಜೀವನ ನಡೆಸುತ್ತಿಲ್ಲ ಎಂದು ಎಂಬ ಗುಸುಗುಸು ಎದ್ದಿದೆ. ಈ ಮೊದಲು ಪವಿತ್ರಾ ಲೊಕೇಶ್ ಸಾಫ್ಟ್ ವೇರ್ ಎಂಜಿನೀಯರ್ ಒಬ್ಬರನ್ನು ವಿವಾಹವಾಗಿದ್ದರು. ಅವರಿಗೆ ವಿಚ್ಛೇದನ ನೀಡಿದ ನಂತರ ಸುಚೇಂದ್ರ ಪ್ರಸಾದ್ ಅವರನ್ನು ವರಿಸಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಇದೀಗ ಪವಿತ್ರಾ ಹಾಗೂ ಸುಚೇಂದ್ರ ನಡುವೆ ಕೂಡಾ ಬಿರುಕು ಉಂಟಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ತೆಲುಗಿನ ಖ್ಯಾತ ಹಿರಿಯ ನಟ ಕೃಷ್ಣ ಅವರ ಎರಡನೇ ಪತ್ನಿ ವಿಜಯ ನಿರ್ಮಲ ಅವರ ಪುತ್ರ ನರೇಶ್,​​ ರೇಖಾ ಎಂಬುವವರನ್ನು ಮದುವೆಯಾಗಿದ್ದರು. ಕೆಲವು ವರ್ಷಗಳ ನಂತರ ಮೊದಲ ಪತ್ನಿಗೆ ಡೈವೋರ್ಸ್ ನೀಡಿ ರಮ್ಯ ರಘುಪತಿ ಎಂಬುವವರನ್ನು ಮದುವೆಯಾದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಇದೀಗ ರಮ್ಯ ಜೊತೆಗಿನ ಸಂಬಂಧದಲ್ಲಿ ಕೂಡಾ ಬಿರುಕು ಉಂಟಾಗಿದ್ದು, ನರೇಶ್ ಪವಿತ್ರಾ ಲೋಕೇಶ್ ಅವರನ್ನು ಮದುವೆಯಾಗುತ್ತಿದ್ದಾರೆ ಎನ್ನಲಾಗಿದೆ.

ಮತ್ತೊಂದೆಡೆ ಪವಿತ್ರಾ ಲೋಕೇಶ್, ಸುಚೇಂದ್ರ ಪ್ರಸಾದ್ ಅವರಿಂದ ದೂರವಾದರೂ ಇನ್ನೂ ವಿಚ್ಛೇದನ ಪಡೆದಿಲ್ಲ. ಕಾನೂನಿನ ಪ್ರಕಾರ ಡೈವೋರ್ಸ್ ಪಡೆದ ನಂತರ ಪವಿತ್ರಾ ಮತ್ತೊಂದು ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.

Leave A Reply