ಜುಲೈ 1 ರಿಂದ ಟಿಡಿಎಸ್ ಹೊಸ ನಿಯಮ ಜಾರಿಗೆ !! | ಇದರಿಂದ ತೆರಿಗೆ ಪಾವತಿದಾರರ ಮೇಲೆ ಉಂಟಾಗುವ ಪರಿಣಾಮವೇನು??

ಇದೇ ಜುಲೈ 1 ರಿಂದ, ಟಿಡಿಎಸ್ ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದ್ದು, ಹೊಸ ನಿಯಮವು ಸೇಲ್ಸ್ ಪ್ರಮೋಶನ್ ಬಿಸಿನೆಸ್ ಗೆ ಅನ್ವಯಿಸುತ್ತದೆ. ಇದರ ಪ್ರಭಾವ ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಮತ್ತು ವೈದ್ಯರ ಮೇಲೆ ಬೀರಲಿದೆ.

ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಟಿಡಿಎಸ್ ನ ಹೊಸ ನಿಯಮದ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಆದಾಯ ಸೋರಿಕೆಯನ್ನು ತಡೆಗಟ್ಟುವ ಸಲುವಾಗಿ ಆದಾಯ ತೆರಿಗೆ ಕಾಯಿದೆ, 1961 ಕ್ಕೆ 194R ಎನ್ನುವ ಹೊಸ ವಿಭಾಗವನ್ನು ಸೇರಿಸಲಾಗಿದೆ.

ವಿತ್ತ ಸಚಿವಾಲಯದ ಜಂಟಿ ಕಾರ್ಯದರ್ಶಿ ಕಮಲೇಶ್ ಸಿ ವರ್ಷಣಿ 194R ಇದರ ಪ್ರಯೋಜನಗಳನ್ನು ವಿವರವಾಗಿ ವಿವರಿಸಿದ್ದು, ವೈದ್ಯರು ಸ್ವೀಕರಿಸುವ ಉಚಿತ ಔಷಧ ಮಾದರಿಗಳು, ವಿದೇಶಿ ವಿಮಾನ ಯಾನ ಟಿಕೆಟ್‌ಗಳು ಅಥವಾ ಇಂಡಿಯನ್ ಪ್ರೀಮಿಯರ್ ಲೀಗ್ ಉಚಿತ ಟಿಕೆಟ್‌ಗಳನ್ನು ಒಳಗೊಂಡಿರುತ್ತವೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಈ ಮೇಲಿನ ಎಲ್ಲಾ ದಾಖಲೆಗಳನ್ನು ಬಹಿರಂಗಪಡಿಸಬೇಕು ಎಂದು ಹೇಳಿದ್ದಾರೆ.

CBDT ಏನು ಹೇಳಿದೆ? :

ತೆರಿಗೆ ಪಾವತಿಸುವವರ ಕೈಯಲ್ಲಿರುವ ಹಣದ ಮೇಲೆ ತೆರಿಗೆ ಪರಿಶೀಲನೆ ನಡೆಸುವ ಅಗತ್ಯವಿಲ್ಲ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಹೇಳಿದೆ. ಲಾಭವಾಗಿ ನೀಡಲಾದ ಬಂಡವಾಳ ಸ್ವತ್ತುಗಳು ಸಹ 194R ಅಡಿಯಲ್ಲಿ ಬರುತ್ತವೆ. ಅಲ್ಲದೆ, ರಿಯಾಯಿತಿಗಳನ್ನು ಹೊರತುಪಡಿಸಿ ಪ್ರೋತ್ಸಾಹಕಗಳನ್ನು ನೀಡುವ ಮಾರಾಟಗಾರರಿಗೂ 194R ಅನ್ವಯಿಸುತ್ತದೆ. ಈ ರಿಯಾಯಿತಿಯು ನಗದು ರೂಪದಲ್ಲಿ, ಕಾರು, ಟಿವಿ, ಕಂಪ್ಯೂಟರ್, ಚಿನ್ನದ ನಾಣ್ಯ, ಮೊಬೈಲ್ ಫೋನ್, ಉಚಿತ ಟಿಕೆಟ್ ಹೀಗೆ ಯಾವುದೇ ರೂಪದಲ್ಲಿ ಇರಬಹುದು.

ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರು ಔಷಧಿಗಳ ಉಚಿತ ಮಾದರಿಗಳನ್ನು ಪಡೆದರೆ ಸೆಕ್ಷನ್ 194R ಅನ್ವಯವಾಗುತ್ತದೆ ಎಂದು CBDT ಸ್ಪಷ್ಟಪಡಿಸಿದೆ. ಆದರೆ, ಆಸ್ಪತ್ರೆಯಲ್ಲಿ ಸಲಹೆಗಾರರಾಗಿ ಕೆಲಸ ಮಾಡುವ ಮತ್ತು ಉಚಿತ ಮಾದರಿಗಳನ್ನು ಸ್ವೀಕರಿಸುವ ವೈದ್ಯರಿಗೆ, TDS ಮೊದಲ ಆಸ್ಪತ್ರೆಯಲ್ಲಿ ಮಾತ್ರ ಅನ್ವಯವಾಗುತ್ತದೆ.

Leave A Reply

Your email address will not be published.