ಯಾರೂ ಕಂಡಿರದ ವಿಭಿನ್ನ ಸ್ಕೂಟರ್ ಇಲ್ಲಿದೆ ನೋಡಿ, ವೀಡಿಯೋ ವೈರಲ್

Share the Article

ವರ್ಣರಂಜಿತ ಸ್ಕೂಟರೊಂದರ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಏಕೆಂದರೆ ಈ ಸ್ಕೂಟರ್ ಸಂಪೂರ್ಣ ಲೈಟಿಂಗ್ಸ್‌ನೊಂದಿಗೆ ಮಿಂಚುತ್ತಿದೆ. ಸಾಲದ್ದಕ್ಕೆ ಮೀಟರ್ ಮೇಲೊಂದು ಟಿವಿ, ಏನು ಹೇಳಬಹುದು ಈ ವ್ಯಕ್ತಿಯ ಸೃಜನಶೀಲತೆಗೆ, ಏನು ಹೇಳಬಹುದು ಈ ವ್ಯಕ್ತಿಯ ಪ್ರತಿಭೆಗೆ?

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಉದ್ಯಮಿ, ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಆಗೊಂದು ಈಗೊಂದು ಪೋಸ್ಟ್ ಗಳನ್ನು ಮಾಡುತ್ತಿರುತ್ತಾರೆ. ಇದೀಗ ವಿಭಿನ್ನವಾದ ವಿಡಿಯೋವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ಅವರು ಈ ರೀತಿಯ ಪ್ರತಿಭೆ ಭಾರತದಲ್ಲಿ ಮಾತ್ರ ಇದೆ ಎನ್ನುವ ಅರ್ಥದಲ್ಲಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಸ್ಕೂಟರ್ ಸಂಪೂರ್ಣ ಲೈಟಿಂಗ್‌ನೊಂದಿಗೆ ಮಿಂಚುತ್ತಿದೆ. ಸಾಲದ್ದಕ್ಕೆ ಮೀಟರ್ ಮೇಲೊಂದು ಟಿವಿ, ಏನು ಹೇಳಬಹುದು ಈ ವ್ಯಕ್ತಿಯ ಸೃಜನಶೀಲತೆಗೆ, ಪ್ರತಿಭೆಗೆ?

ಆನಂದ್ ಮಹೀಂದ್ರಾ ಅವರು ವೀಡಿಯೋ ಹಂಚಿಕೊಳ್ಳುವಾಗ, ‘ಜೀವನವು ನೀವು ಬಯಸಿದಷ್ಟು ವರ್ಣರಂಜಿತ ಮತ್ತು ಮನರಂಜನೆಯಾಗಿರಬಹುದು’ ಎಂದು ಶೀರ್ಷಿಕೆ ಬರೆದು ಭಾರತದಲ್ಲಿ ಮಾತ್ರ ಎಂದು ಹ್ಯಾಶ್ಟ್ಯಾಗ್ ಮಾಡಿದ್ದಾರೆ. ವಿಡಿಯೋದಲ್ಲಿ ಗಮನಿಸಿದಂತೆ, ಕಸ್ಟಮೈಸ್ ಮಾಡಿದ ಸ್ಕೂಟರ್ ಅನ್ನು ಪೆಟ್ರೋಲ್ ಪಂಪ್‌ನಲ್ಲಿ ನಿಲ್ಲಿಸಲಾಗಿದೆ, ಅದರ ಮುಂಭಾಗದಲ್ಲಿರುವ ಮೀಟರ್‌ನ ಮೇಲ್ಬಾಗದಲ್ಲಿ ಸಣ್ಣ ಟಿವಿ ಅಳವಡಿಸಲಾಗಿದ್ದು, ನಟಿಯೊಬ್ಬಳು ಹಾಡಿಗೆ ನೃತ್ಯ ಮಾಡುವುದನ್ನು ಕಾಣಬಹುದು. ಅಲ್ಲದೆ ಸ್ಕೂಟರ್ ಸಂಪೂರ್ಣ ಲೈಟಿಂಗ್ಸ್‌ನಿಂದ ಕಂಗೊಳಿಸುತ್ತಿದೆ.

Leave A Reply