ISEC recruitment | ಇ-ಮೇಲ್ ಕಳುಹಿಸಲು ಕೊನೆ ದಿನ ಜುಲೈ 4

ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ ವಿವಿಧ ಅಸೋಸಿಯೇಟ್ ಪ್ರೊಫೆಸರ್ ಮತ್ತು ಪ್ರೊಫೆಸರ್ ಹುದ್ದೆಗಳ ನೇಮಕಾತಿಗೆ ಮುಂದಾಗಿದ್ದು, ಕೃಷಿ ಅಭಿವೃದ್ಧಿ ಮತ್ತು ಗ್ರಾಮೀಣ ಪರಿವರ್ತನೆ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಈ ಹುದ್ದೆ ನೇಮಕಾತಿಗೆ ಸಂಸ್ಥೆ ಮುಂದಾಗಿದೆ. ಕೃಷಿ ಅರ್ಥಶಾಸ್ತ್ರ ಅಥವಾ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮಾಡಿದವರಿಗೆ ಇದೊಂದು ಉತ್ತಮ ಅವಕಾಶವಾಗಿದೆ.

ಸಂಸ್ಥೆ: ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ (ISEC)
ಹುದ್ದೆಗಳ ಸಂಖ್ಯೆ: ನಿರ್ದಿಷ್ಟಪಡಿಸಲಾಗಿಲ್ಲ
ಉದ್ಯೋಗ ಸ್ಥಳ: ಬೆಂಗಳೂರು
ಹುದ್ದೆಯ ಹೆಸರು: ಅಸೋಸಿಯೇಟ್ ಪ್ರೊಫೆಸರ್ ಮತ್ತು ಪ್ರೊಫೆಸರ್
ಹುದ್ದೆ ವೇತನ:
ಅಸೋಸಿಯೇಟ್ ಪ್ರೊಫೆಸರ್ 131400 ರೂ ಮಾಸಿಕ
ಪ್ರಾಧ್ಯಾಪಕರು 144200 ರೂಮಾಸಿಕ

ಶೈಕ್ಷಣಿಕ ಅರ್ಹತೆ: ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಕನಿಷ್ಠ 55% ಅಂಕಗಳೊಂದಿಗೆ ಕೃಷಿ ಅರ್ಥಶಾಸ್ತ್ರ ಅಥವಾ ಅರ್ಥ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್​ಡಿ ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ: ನೇಮಕಾತಿ ಮಾನದಂಡಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.

ವಯಸ್ಸಿನ ಸಡಿಲಿಕೆ:
ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ ನಿಯಮಗಳ ಪ್ರಕಾರ

ಅರ್ಜಿ ಸಲ್ಲಿಕೆ ವಿಧಾನ: ಇಮೇಲ್​ ಹಾಗೂ ಆಫ್​ಲೈನ್​​ ಮೂಲಕ

ಆಯ್ಕೆ ಪ್ರಕ್ರಿಯೆ:
ದಾಖಲೆಗಳ ಪರಿಶೀಲನೆ, ಶೈಕ್ಷಣಿಕ ಕಾರ್ಯಕ್ಷಮತೆ ಮತ್ತು ಸಂದರ್ಶನ

ಪ್ರಮುಖ ದಿನಾಂಕಗಳು:
ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: ಜೂನ್​ 5, 2022
ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: ಜುಲೈ 4, 2022

ಅಧಿಕೃತ ವೆಬ್‌ಸೈಟ್: isec.ac.in

ಅರ್ಜಿ ಸಲ್ಲಿಕೆ:
ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

ಅಧಿಕೃತ ವೆಬ್​ಸೈಟ್​ ಮೂಲಕ ಅರ್ಜಿ ನಮೂನೆಯನ್ನು ಡೌನ್​ಲೋಡ್​ ಮಾಡಿ ಸ್ವಯಂ ದೃಢೀಕರಿಸಿದ ಅರ್ಜಿಗಳನ್ನು ಮೇಲ್ಕಂಡ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಕಳುಹಿಸಬೇಕು. ಅರ್ಜಿಜೊತೆಗೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ ಈ ಇಮೇಲ್​ ವಿಳಾಸಕ್ಕೆ recruitment@isec.ac.in ಕಳುಹಿಸಬೇಕು. ಹಾರ್ಡ್​ ಕಾಪಿಯನ್ನು ಈ ಕೆಳಕಂಡ ವಿಳಾಸಕ್ಕೆ ನಿಗದಿತ ದಿನಾಂಕದ ಮೊದಲು ಕಳುಹಿಸಬೇಕು.

ರಿಜಿಸ್ಟ್ರಾರ್, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ, ನಾಗರಭಾವಿ ಪಿಒ, ಬೆಂಗಳೂರು – 560072

Leave A Reply

Your email address will not be published.