ಮುಂಗಾರು ಮಳೆ ಅಬ್ಬರ, ಸ್ಮಾರ್ಟ್‌ಸಿಟಿಯಲ್ಲಿ ಸ್ಕೂಟರ್ ಸಮೇತ ಮ್ಯಾನ್‌ಹೋಲ್‌ಗೆ ಬಿದ್ದ ಪೊಲೀಸ್ ದಂಪತಿ!!! ವೀಡಿಯೋ ನೋಡಿ ನೆಟ್ಟಿಗರಿಂದ ತರಾಟೆ

ದೇಶಾದ್ಯಂತ ಮುಂಗಾರು ಆರಂಭ ಜೋರಾಗಿದೆ. ಈಶಾನ್ಯ ಭಾರತದಲ್ಲಿ ಮಳೆ ಅಬ್ಬರಿಸುತ್ತಿದೆ. ಬಿಸಿಗಾಳಿಯಿಂದ ತತ್ತರಿಸಿದ್ದ ದೆಹಲಿ, ಉತ್ತರ ಪ್ರದೇಶದಲ್ಲೂ ಉತ್ತಮ ಮಳೆಯಾಗುತ್ತಿದೆ.

ಉತ್ತರ ಪ್ರದೇಶದ ಸ್ಮಾರ್ಟ್ ಸಿಟಿ ಯೋಜನೆಯಡಿ ಆಯ್ಕೆಯಾಗಿರುವ ಅಲಿಘರ್ ದಲ್ಲೂ ಉತ್ತಮ ಮಳೆ ಇದೆ. ಈಗ ಈ ಮಳೆಯಿಂದಾಗಿ ಚರಂಡಿಯೊಂದಕ್ಕೆ ದಂಪತಿಗಳು ಸ್ಕೂಟರ್ ಸಮೇತ ಬಿದ್ದಿರುವ ವಿಡಿಯೋ ಈಗ ವೈರಲ್ ಆಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಅದೃಷ್ಟವಶಾತ್ ಸಮೀಪದ ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ. ಜಲಾವೃತಗೊಂಡ ರಸ್ತೆಯ ಮೇಲೆ ದಂಪತಿಗಳು ಬೈಕ್ ಸಮೇತ ತೆರೆದ ಮ್ಯಾನ್‌ಹೋಲ್‌ಗೆ ಬೀಳುತ್ತಿರುವ ವೀಡಿಯೋವನ್ನು ಸ್ಥಳೀಯರು ಸೆರೆ ಹಿಡಿದಿದ್ದಾರೆ, ಈ ವಿಡಿಯೋ ಈಗ ಟ್ವಿಟರ್ ನಲ್ಲಿ ವೈರಲ್ ಆಗಿದೆ.

ಮೂಲಗಳ ಪ್ರಕಾರ, ಸ್ಕೂಟರ್‌ನಲ್ಲಿ ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿ ಮತ್ತು ಅವರ ಪತ್ನಿ ಪ್ರಯಾಣಿಸುತ್ತಿದ್ದು, ವೈದ್ಯರನ್ನು ನೋಡಲು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಇನ್ನು ಮ್ಯಾನ್‌ಹೋಲ್‌ಗೆ ಬಿದ್ದವರನ್ನು, ಯುಪಿ ಪೊಲೀಸ್ ಅಧಿಕಾರಿ ದಯಾನಂದ್ ಸಿಂಗ್ ಅಟ್ರಿ ಮತ್ತು ಅವರ ಪತ್ನಿ ಅಂಜು ಅತ್ರಿ ಎಂದು ಗುರುತಿಸಲಾಗಿದೆ. ಗಂಡ ಹೆಂಡತಿ ಇಬ್ಬರಿಗೂ ಗಾಯಗಳಾಗಿವೆ.
“ನನ್ನ ಮುಂದಿರುವ ರಸ್ತೆಯು ಜಲಾವೃತಗೊಂಡಿದ್ದರಿಂದ, ನಾನು ಹೊಂಡವನ್ನು ಕಾಣಿಸದ ಕಾರಣ ಅದರಲ್ಲಿ ಬಿದ್ದಿದ್ದೇನೆ’ ಎಂದು ದಯಾನಂದ ಸಿಂಗ್ ಅತಿ ತಿಳಿಸಿದರು.

ಇನ್ನು ಟ್ವಿಟರ್ ನಲ್ಲಿ ವಿಡಿಯೋ ವೈರಲ್ ಆಗಿದ್ದು ಬಿಜೆಪಿ ಸರ್ಕಾರವನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಟ್ವಿಟರ್ ಬಳಕೆದಾರರೊಬ್ಬರು, “ಸ್ಮಾರ್ಟ್ ಸಿಟಿ ಅಲಿಘರ್‌ಗೆ ಸ್ವಾಗತ ಎಂದು” ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

Leave a Reply

error: Content is protected !!
Scroll to Top
%d bloggers like this: