ದೇವರ ಅವಹೇಳನ,ಮನೆಗೆ ದಾಳಿ ಪ್ರಕರಣ : ಟಿವಿ ವಿಕ್ರಮ ನಿರೂಪಕಿ ಮುಮ್ತಾಝ್ ವಿರುದ್ದ ಶೈಲಜಾ ಅಮರನಾಥ್ ದೂರು
ಪುತ್ತೂರು : ಕ್ಲಬ್ ಹೌಸ್ ನಲ್ಲಿ ನಡೆದ ಚರ್ಚಾಕೂಟವೊಂದರಲ್ಲಿ ಶ್ರೀ ರಾಮಚಂದ್ರ, ಸೀತಾ ಮಾತೆ,ಹನುಮಂತ ದೇವರನ್ನು ಅವಮಾನ ಮಾಡಿದ್ದಾರೆನ್ನುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣೆಯಲ್ಲಿ ಮೂರು ಪ್ರಕರಣ ದಾಖಲಾಗಿದೆ.
ಮೊದಲಿಗೆ ಹಿಂದೂ ಸಂಘಟನೆಗಳು ಶೈಲಜಾ ಅಮರನಾಥ ವಿರುದ್ಧ ದೂರು ನೀಡಿದ್ದರೆ,ಎರಡನೇಯದು ಶೈಲಜಾ ಅವರ ಮನೆಗೆ ದಾಳಿ ಮಾಡಿದ ಕುರಿತು ಮೂವರು ಅಪರಿಚಿತರ ವಿರುದ್ಧ ದೂರು ದಾಖಲಾಗಿದೆ.ಮೂರನೇಯದ್ದು ವಿಕ್ರಮ ಚಾನೆಲ್ ನಿರೂಪಕಿ ಮುಮ್ತಾಝ್ ವಿರುದ್ಧ ಶೈಲಜಾ ದೂರು ನೀಡಿದ್ದಾರೆ.
ಶೈಲಜಾ ಅಮರನಾಥ್ ನೀಡಿದ ದೂರಿನಲ್ಲಿ ,ವಿಕ್ರಮ ಯೂ ಟೂಬ್ ಚಾನಲ್ ನವರು ರಾಮ ದೇವರ ವಿಚಾರದಲ್ಲಿ ಎಡಿಟ್ ಆಡಿಯೋ ಮತ್ತು ವಿಡಿಯೋ ಮಾಡಿ ಶೈಲಜಾ ಅವರ ಪೋನ್ ನಂಬ್ರ ಹಾಗೂ ಭಾವಚಿತ್ರವನ್ನು ಬಳಸಿ ತಪ್ಪು ಸಂದೇಶವನ್ನು ದಿನಾಂಕ : 17-06-2022 ರಂದು ರವಾನೆ ಮಾಡಿದ್ದು, ಈ ಕಾರಣದಿಂದ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿರುವುದಲ್ಲದೇ ,ಜೂ.18ರ ಸಂಜೆ 4:30 ಗಂಟೆ ಪಿರ್ಯಾದಿದಾರರ ಮನೆಗೆ ಕಲ್ಲು ಬಿಸಾಡಿ ಕಿಟಕಿ ಗಾಜು ಪುಡಿ ಮಾಡಿ ಮಡ್ ಆಯಿಲ್ ಚೆಲ್ಲಿ ,ಶೈಲಜಾ ಅವರ ಕಛೇರಿಯ ಮೇಲೆ ಶ್ರದ್ಧಾಂಜಲಿ ಫೋಟೋವನ್ನು ಅಂಟಿಸಿರುವುದಾಗಿದೆ.
ಈ ಕೃತ್ಯಕ್ಕೆ ವಿಕ್ರಮ ಯೂ ಟೂಬ್ ಚಾನಲ್ ನ ನಿರೂಪಕಿ ಎಂ.ಎಸ್ ಮುಮ್ತಾಸ್ ಆಗಿದ್ದು ಆಕೆಯ ಮೇಲೆ ಹಾಗೂ ಆ ಚಾನಲ್ ನ ಮೇಲೆ ಕೂಡಲೇ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.