ಹೆತ್ತವರನ್ನು ಬಾಯಿಯಿಂದ ಕಚ್ಚಿ ಗಾಯಗೊಳಿಸಿದ ಐನಾತಿ ಮಗ! ಮಗನ ವಿಕೃತ ವರ್ತನೆ, ಪೊಲೀಸರಿಂದ ಅರೆಸ್ಟ್

ಮನೆಗೊಬ್ಬ ಮಗ ಇರಲಿ ಅಂತ ಅದೆಷ್ಟೋ ತಂದೆ ತಾಯಿ ದೇವರಿಗೆ ಹರಕೆ ಮಾಡ್ತಾರೆ. ಹಾಗೇ ಹುಟ್ಟಿದ ಮಕ್ಕಳನ್ನು ಕಷ್ಟಪಟ್ಟು ಸಾಕುತ್ತಾರೆ. ಆದರೆ ಇಲ್ಲೊಬ್ಬ ಖತರ್ನಾಕ್ ಮಗನಿದ್ದಾನೆ. ತಂದೆ ತಾಯಿ ಅನ್ನೋ ಮಮತೆಯೂ ಇಲ್ಲದ ಕುಡುಕ ಮಗ. ಕುಡಿತದ ಚಟ ಬಿಡು ಎಂದು ಹೇಳಿದ್ದಕ್ಕೆ ಆಕ್ರೋಶಗೊಂಡು, ವೃದ್ಧ ತಂದೆ ತಾಯಿಯನ್ನು ತನ್ನ ಬಾಯಿಯಿಂದ ಕಚ್ಚಿ ಕಚ್ಚಿ ವಿಕೃತವಾಗಿ ಗಾಯಗೊಳಿಸಿದ ಘಟನೆ ನಡೆದಿದೆ. ಅಷ್ಟಕ್ಕೂ ಇದೆಲ್ಲಿ ನಡೆದಿದ್ದು ಅಂತೀರಾ?

ವಯಸ್ಸಾಗಿರುವ ವೃದ್ಧ ದಂಪತಿಯೇ ಮಗನಿಂದ ಹಲ್ಲೆಗೊಳಗಾದವರು. ವೃದ್ಧನ ಹೆಸರು ಮುನಿಕೃಷ್ಣಪ್ಪ, ವೃದ್ದೆಯ ಹೆಸರು ಜಯಮ್ಮ. ಇಬ್ಬರೂ ಚಿಕ್ಕಬಳ್ಳಾಪುರ ತಾಲೂಕಿನ ಗುಂತಪನಹಳ್ಳಿ ನಿವಾಸಿಗಳು. ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ತಮ್ಮ ಮಗನಿಗೆ ಮದುವೆಯನ್ನು ಮಾಡಿ, ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ಆದ್ರೆ ಇವರ ಮಗ ಮುನಿರಾಜು , ಈ ವೃದ್ಧ ತಂದೆ ತಾಯಿಗೆ ಕೊಡಬಾರದ ಚಿತ್ರ ಹಿಂಸೆ ಕೊಡ್ತಿದ್ದಾನೆ.


Ad Widget

Ad Widget

Ad Widget

Ad Widget

Ad Widget

Ad Widget

ವೃತ್ತಿಯಲ್ಲಿ ಚಾಲಕನಾಗಿರುವ ಮುನಿರಾಜು, ಎರಡು ದಿನಗಳಿಂದ ಕಂಠಪೂರ್ತಿ ಕುಡಿದು ಬಂದು ಮನೆಯಲ್ಲಿ ಹೆಂಡತಿ ಜೊತೆ ಗಲಾಟೆ ಮಾಡ್ತಿದ್ದಾನೆ. ಇದರಿಂದ ಮಗನಿಗೆ ಬುದ್ದಿವಾದ ಹೇಳಿದ್ದಕ್ಕೆ ತಾಯಿ, ನಿನ್ನನ್ನು ಮದ್ಯ ವ್ಯಸನ ಮುಕ್ತ ಕೇಂದ್ರಕ್ಕೆ ಸೇರಿಸ್ತೀವಿ ಅಂತಾ ಹೇಳಿದ್ದಳು. ಇದರಿಂದ ಕುಪಿತಗೊಂಡ ಮುನಿರಾಜ ತನ್ನ ತಾಯಿ ಜಯಮ್ಮಳಿಗೆ ಹೊಡೆದು ಆಕೆಯ ಬಾಯಿ ಮತ್ತು ಕೈಗೆ ಬಾಯಿಯಿಂದ ಕಚ್ಚಿದ್ದಾನೆ.

ಸುದ್ದಿ ತಿಳಿದ ತಂದೆ ಮುನಿಕೃಷ್ಣಪ್ಪ, ಮಗನಿಗೆ ಎರಡೇಟು ಹಾಕಿದ್ದಕ್ಕೆ ತಂದೆಗೂ ಬಾಯಿಯಿಂದ ಕಚ್ಚಿ ಗಾಯಗೊಳಿಸಿದ್ದಾನೆ. ಅಸಹಾಯಕಳಾದ ಆರೋಪಿಯ ಪತ್ನಿ, ಪೊಲೀಸ್ ಎಮರ್ಜೆನ್ಸಿಗೆ ಕರೆ ಮಾಡಿದ್ದಕ್ಕೆ ತಕ್ಷಣ ಪೊಲೀಸರು ಸ್ಥಳಕ್ಕೆ ಬಂದು, ಅರೆ ಬೆತ್ತಲಾಗಿದ್ದ ಆರೋಪಿ ಮುನಿರಾಜುನನ್ನು ವಶಕ್ಕೆ ಪಡೆದು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಾಳು ಅಪ್ಪ ಅಮ್ಮನನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ಮದ್ಯ ವ್ಯಸನಿಯಾಗಿರುವ ಮಗ ಮುನಿರಾಜು ಈ ವೃದ್ಧ ತಂದೆ ತಾಯಿಯನ್ನೇ ಹೊಡೆದು ವಿಕೃತವಾಗಿ ಬಾಯಿಯಿಂದ ಕಚ್ಚಿ ಗಾಯಗೊಳಿಸಿದ್ದಾನೆ.

error: Content is protected !!
Scroll to Top
%d bloggers like this: