ರೋಹಿತ್ ಚಕ್ರತೀರ್ಥರನ್ನು ಬಂಧಿಸುವಂತೆ ಒತ್ತಾಯಿಸುವುದು ಅಸಂವಿಧಾನಿಕ !!| ಅಚ್ಚರಿಯ ಹೇಳಿಕೆ ನೀಡಿದ ನಟ ಚೇತನ್

ರಾಜ್ಯದಲ್ಲಿ ಇಂದು ಕನ್ನಡಪರ ಸಂಘಟನೆಗಳು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಹಿಂಬಾಲಕರು ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧಿಸಿದಂತೆ ಹೋರಾಟ ಮಾಡುತ್ತಿದ್ದಾರೆ. ಈ ನಡುವೆ ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ನಿನ್ನೆಯಿಂದ ಕಾಂಗ್ರೆಸ್ ಮತ್ತು ಇತರರ ಮೇಲೆ ಮುಗಿಬಿದ್ದಿದ್ದು, ಒಂದು ರೀತಿಯಲ್ಲಿ ಬಿಜೆಪಿ ಅಥವಾ ರೋಹಿತ್ ಚಕ್ರತೀರ್ಥ ಕುರಿತಂತೆ ಮೃದು ಧೋರಣೆ ತೋರುತ್ತಿದ್ದಾರೆ ಎನ್ನುವಂತೆ ಪೋಸ್ಟ್ ಮಾಡಿದ್ದಾರೆ.

ಹೌದು. ಚೇತನ್ ಅವರ ಈ ನಡೆ ಭಾರೀ ಕುತೂಹಲ ಮತ್ತು ಚರ್ಚೆಯನ್ನುಂಟು ಮಾಡಿದೆ. ಚೇತನ್ ಕಾಂಗ್ರೆಸ್ ಪರ ಎಂದು ಹೇಳುತ್ತಿದ್ದವರಿಗೂ ಈ ಅಚ್ಚರಿಯ ನಡೆ ಗೊಂದಲವನ್ನುಂಟು ಮಾಡಿದೆ. ಇಂದು ಕನ್ನಡಪರ ಸಂಘಟನೆಗಳು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಹಿಂಬಾಲಕರು ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧಿಸಿದಂತೆ ಹೋರಾಟ ಮಾಡುತ್ತಿದ್ದಾರೆ. ರಾಜ್ಯಾದ್ಯಂತ ಪ್ರಗತಿಪರ ಮನಸ್ಸುಗಳು ಕೂಡ ಈ ಹೋರಾಟಕ್ಕೆ ಕೈ ಜೋಡಿಸಿವೆ. ಈ ಬೆನ್ನಲ್ಲೇ ಚೇತನ್ ಫೇಸ್ ಬುಕ್ ನಲ್ಲಿ ಬರೆದುಕೊಂಡ ಬರಹಗಳು ಮಹತ್ವ ಪಡೆದುಕೊಂಡಿದ್ದು, ಚೇತನ್ ಯಾರ ಪರ ಎನ್ನುವ ಪ್ರಶ್ನೆಯನ್ನೂ ಹುಟ್ಟುಹಾಕಿವೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಕೆಲ ಗಂಟೆಗಳ ಹಿಂದೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಚೇತನ್ “ಸಿದ್ಧರಾಮಯ್ಯನವರು ಚಕ್ರತೀರ್ಥನ ಬಂಧನಕ್ಕೆ ಆಗ್ರಹ ನೀಡಿದ್ದಾರೆ. ಇದು ವಾಕ್ ಸ್ವಾತಂತ್ರ್ಯದ ವಿರೋಧಿಯಾಗಿದ್ದು, ಅಸಂವಿಧಾನಿಕವಾಗಿದೆ. ಸಿದ್ಧರಾಮಯ್ಯನವರು ರಾಜಕೀಯ ಲಾಭಕ್ಕಾಗಿ ಪ್ರಜಾಪ್ರಭುತ್ವವನ್ನು ನಾಶಮಾಡುವ ಮೂಲಕ ಕಾಂಗ್ರೆಸ್ ಪಕ್ಷವು ಎಂದಿನಂತೆ ಅಪಮಾನಿಸುವುದನ್ನು ಮುಂದುವರೆಸಿದೆ” ಎಂದು ಬರೆದುಕೊಂಡಿದ್ದಾರೆ.

ಮತ್ತೆ ಎರಡು ಗಂಟೆಯ ನಂತರ ಮತ್ತೊಂದು ಪೋಸ್ಟ್ ಮಾಡಿದ್ದು, “ಇವತ್ತಿನ ಪಠ್ಯಪುಸ್ತಕ ಪ್ರತಿಭಟನೆ ಸಮಾನತೆ ಮತ್ತು ನ್ಯಾಯಪರ ಹೋರಾಟ ಅಲ್ಲ, ಇದು ಕಾಂಗ್ರೆಸ್ ಮತ್ತು ಬ್ರಾಹ್ಮಣ್ಯದ ಸವಲತ್ತುಗಳನ್ನು ಉಳಿಸಿಕೊಳ್ಳುವ ಹೋರಾಟ. ಕಾಂಗ್ರೆಸ್ ಬೆಂಬಿತ ಪಠ್ಯಪುಸ್ತಗಳು, ಬಿಜೆಪಿ ಬೆಂಬಲಿತ ಪ್ರಸ್ತುತ ಪಠ್ಯಪುಸ್ತಗಳು ಎರಡರಲ್ಲೂ ನಿಜವಾದ ಸಮಾನತವಾದಕ್ಕೆ ನ್ಯಾಯ ಒದಗಿಸಿಲ್ಲ’ ಎಂದು ಚಾಟಿ ಬೀಸಿದ್ದಾರೆ. ಹಾಗಾಗಿ ಚೇತನ್ ಈಗ ಯಾರ ಪರ ಎಂಬ ವಿಷಯ ಮಾತ್ರ ಎಲ್ಲರ ತಲೆಗೆ ಹುಳ ಬಿಟ್ಟಂತಾಗಿದೆ.

error: Content is protected !!
Scroll to Top
%d bloggers like this: