ಪುತ್ತೂರು:ಸದಾ ಹನುಮಂತನನ್ನು ತಬ್ಬಿಕೊಂಡಿರುವ ಶ್ರೀ ರಾಮ ‘ಸಲಿಂಗ ಕಾಮಿ’ ಅನ್ನಿಸುತ್ತೆ!! ಹಿಂದೂ ದೇವರ ಅವಹೇಳನ ನಡೆಸಿದ ಕಾಂಗ್ರೆಸ್ ಐಟಿ ಸೆಲ್ ಪದಾಧಿಕಾರಿಗಳ ವಿರುದ್ಧ ದೂರು

ಹಿಂದೂ ದೇವರಾದ ಶ್ರೀರಾಮ,ಸೀತೆ ಹಾಗೂ ಹನುಮಂತನನ್ನು ಆಶ್ಲೀಲವಾಗಿ ಅವಹೇಳನ ಮಾಡಿ ಹಿಂದೂ ಧಾರ್ಮಿಕ ನಂಬಿಕೆಗಳಿಗೆ ದಕ್ಕೆ ಹಾಗೂ ಧರ್ಮಗಳ ನಡುವೆ ದ್ವೇಷವನ್ನು ಹೆಚ್ಚಿಸಿ ಸಾಮಾಜಿಕ ಆಶಾಂತಿ ಮೂಡಿಸಿರುವ ಕಾಂಗ್ರೆಸ್ ಪಕ್ಷದ ಐಟಿ ಸೆಲ್ ನ ಕಾರ್ಯದರ್ಶಿಯಾದ ಶೈಲಜಾ ಅಮರನಾಥ್,ಪ್ರೀತು ಶೆಟ್ಟಿ ಅಲಿಯಾಸ್ ಮಹಾಲಕ್ಷ್ಮಿ, ಅನಿಲ್,ಪುನೀತ್ ಮತ್ತು ಇತರರ ವಿರುದ್ಧ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ನಗರ ಪ್ರಖಂಡ ಸಹ ಸಂಯೋಜಕ್ ಪ್ರವೀಣ್ ಕುಮಾರ್ ಕಲ್ಲೇಗ ಇವರು ಪುತ್ತೂರು ನಗರ ಠಾಣೆಯಲ್ಲಿ ದೂರನ್ನು ದಾಖಲಿಸಿದರು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಜೂನ್ 16ರ ರಾತ್ರಿ 09ರ ಹೊತ್ತಿಗೆ ಸಾಮಾಜಿಕ ಜಾಲತಾಣ ಕ್ಲಬ್ ಹೌಸ್ ನಲ್ಲಿ ‘sunday uncles are monday sons’ ಎನ್ನುವ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಐಟಿ ಸೆಲ್ ನ ಪದಾಧಿಕಾರಿಗಳು ಹಿಂದೂ ದೇವರ ಬಗ್ಗೆ ತುಚ್ಛವಾಗಿ, ಅವಹೇಳನ ನಡೆಸಿದ್ದು ಕಂಡುಬಂದಿತ್ತು. ರಾಮ ಯಾವಾಗಲೂ ಹನುಮಂತನನ್ನು ತಬ್ಬಿಕೊಂಡಿರುವುದನ್ನು ಕಂಡಾಗ ಆತನೇನು ಸಲಿಂಗ ಕಾಮಿ ಅನ್ನಿಸುತ್ತೆ, ನಾನು ಮಾಡರ್ನ್ ಸೀತೆ ನನಗೆ ಹನುಮಂತ ಚಿಕನ್ ಬಿರಿಯಾನಿ ಮಟನ್ ಬಿರಿಯಾನಿ ತಂದುಕೊಡುತ್ತಿದ್ದ, ನಿಮ್ಮ ವನವಾಸದಲ್ಲಿ ಸೊಳ್ಳೆ ಕಚ್ಚುತ್ತಿರಲಿಲ್ಲವೇ, ನಮಗೆ ವನವಾಸಕ್ಕೆ ಅರಣ್ಯ ಅಧಿಕಾರಿಗಳು ಉತ್ತಮ ಕೊಠಡಿ ಕೊಟ್ಟಿದ್ದರು ಎಂಬಿತ್ಯಾದಿಯಾಗಿ ನುಡಿದಿದ್ದರು ಎನ್ನುವ ಆರೋಪ ಕೇಳಿಬಂದಿದೆ.

ಸದ್ಯ ಹಿಂದೂ ದೇವರ ಅವಹೇಳನ ನಡೆಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿದ್ದು, ಈ ಸಂದರ್ಭದಲ್ಲಿ ಪುತ್ತೂರು ಬಜರಂಗದಳದ ಪ್ರಮುಖರು ಉಪಸ್ಥಿತರಿದ್ದರು.

error: Content is protected !!
Scroll to Top
%d bloggers like this: