ಕನ್ನಡ ಚಿತ್ರನಟನಿಗೆ ಚಾಕುವಿನಿಂದ ಇರಿದು ಹತ್ಯೆ

ಬೆಂಗಳೂರು : ಚಾಕುವಿನಿಂದ ಇರಿದು ನಟನೊಬ್ಬನನ್ನು ಕೊಲೆಗೈದಿರುವ ಘಟನೆ ಆರ್‌ ಆರ್‌ ನಗರದ ಪಟ್ಟಣಗೆರೆಯಲ್ಲಿ ಶನಿವಾರ ( ಜೂ. 18) ರಂದು ನಡೆದಿದೆ.

ಸತೀಶ್‌ ವಜ್ರ (36) ಕೊಲೆಯಾದ ನಟ. ಕೌಟುಂಬಿಕ ವಿಚಾರಕ್ಕೆ ಸತೀಶ್‌ ಕೊಲೆಯಾಗಿದೆ ಎಂದು ಶಂಕಿಸಲಾಗಿದೆ.

ಮನೆಯಲ್ಲಿ ಚಾಕುವಿನಿಂದ ಇರಿದು ಭಾಮೈದನೇ ಸತೀಶ್‌ ನನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಸತೀಶ್‌ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು.

‘ಲಗೋರಿʼ ಸಿನಿಮಾ ಹಾಗೂ ಕಿರುತೆರೆಯಲ್ಲಿ ಸತೀಶ್‌ ಸಹ ನಟನಾಗಿ ಕಾಣಿಸಿಕೊಂಡಿದ್ದರು. ಆರ್‌ ಆರ್‌ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Leave A Reply