ಅವರಿಬ್ಬರ ನಡುವೆ ನಡೆದಿತ್ತು ಸಾಯುವ ಒಪ್ಪಂದ!! | ಆ ಒಪ್ಪಂದದಲ್ಲೂ ಆಯಿತು ಮೋಸ!

Share the Article

ಪ್ರೀತಿಸುತ್ತಿದ್ದ ಜೋಡಿಯೊಂದು ದಿಢೀರ್ ಸಾಯುವ ನಿರ್ಧಾರಕ್ಕೆ ಬಂದು ನದಿಗೆ ಹಾರಿ ಆತ್ಮಹತ್ಯೆ ನಡೆಸಿಕೊಳ್ಳುಲು ಮುಂದಾಗಿದ್ದು, ಮಹಿಳೆ ನೀರಿಗೆ ಹಾರುತ್ತಿದ್ದಂತೆ ಯುವಕ ಸ್ಥಳದಿಂದ ಕಾಲ್ಕಿತ್ತ ಪರಿಣಾಮ ಮಹಿಳೆ ಈಜಿ ದಡ ಸೇರಿದ್ದು,ಸದ್ಯ ನೊಂದ ಮಹಿಳೆ ಠಾಣೆಗೆ ದೂರು ನೀಡಿದ ಘಟನೆಯೊಂದು ವರದಿಯಾಗಿದೆ.

ಹೌದು, ಇಂತಹದೊಂದು ಘಟನೆ ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದಿದ್ದು, ಪ್ರೇಮಿಗಳಿಬ್ಬರು ಸಾಯುವ ಒಪ್ಪಂದ ನಡೆಸಿಕೊಂಡು ನದಿಗೆ ಹಾರಲು ಮುಂದಾಗಿದ್ದರು. ಅತ್ತ ಮಹಿಳೆ ನೀರಿಗೆ ಹಾರುತ್ತಿದ್ದಂತೆ ಯುವಕ ಒಪ್ಪಂದ ಮುರಿದು ಸ್ಥಳದಿಂದ ಪರಾರಿಯಾಗಿದ್ದ. ಇಲ್ಲಿ ಮಹಿಳೆ ವಿವಾಹಿತೆಯಾಗಿದ್ದು, ಆಕೆಗೆ ಇಬ್ಬರು ಮಕ್ಕಳಿದ್ದರೂ ಅದೇ ಊರಿನ ಯುವಕನೊಂದಿಗೆ ಅಕ್ರಮ ಸಂಬಂಧ ಇತ್ತೆನ್ನಲಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಮಹಿಳೆ ಕುಟುಂಬ ಸದಸ್ಯರೊಂದಿಗೆ ಹೊರಗೆ ತೆರಳಿದ್ದು, ಊರಿಗೆ ಮರಳಿದಾಗ ಯುವಕನಿಗೆ ವಿವಾಹವಾದ ಬಗ್ಗೆ ತಿಳಿಯುತ್ತದೆ. ಇದರಿಂದ ಕೋಪಗೊಂಡ ಆಕೆ ಯುವಕನೊಂದಿಗೆ ಜಗಳವಾಡಿ ಕೊನೆಗೆ ಇಬ್ಬರೂ ಸಾಯುವ ನಿರ್ಧಾರಕ್ಕೆ ಬಂದಿದ್ದರು. ಅಂತೆಯೇ ನದಿ ದಂಡೆಯಲ್ಲಿ ನಿಂತು ಮಹಿಳೆ ಹಾರುತ್ತಿದ್ದಂತೆ ಯುವಕ ಹಾರದೇ ಮೋಸ ಮಾಡಿದ್ದು, ಇದನ್ನು ಗಮನಿಸಿದ ಆಕೆ ಈಜಿ ದಡ ಸೇರಿದ್ದಳು.

ಬಳಿಕ ಯುವಕನ ಮೋಸದ ಬಗ್ಗೆ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಹಿಳೆ ನೀಡಿದ ದೂರನಂತೆ ಯುವಕನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

Leave A Reply