WhatsApp ಗ್ರೂಪ್ ಕಾಲ್‌ನಲ್ಲಿ ಬಂತು ಅಚ್ಚರಿಯ ಬೆಳವಣಿಗೆ : ನೀವು ಗಮನಿಸಿದ್ರಾ?

Share the Article

ಪ್ರಸಿದ್ಧ ಮೆಸೆಂಜರ್ ಅಪ್ಲಿಕೇಷನ್ ಆಗಿರುವ ವಾಟ್ಸಾಪ್ ಹೊಸ ಅಪ್ಡೇಟ್‌ ಒಂದನ್ನು ಬಿಡುಗಡೆ ಮಾಡಿದ್ದು ಇದರಿಂದ ಬಳಕೆದಾರರಿಗೆ ಹೆಚ್ಚಿನ ಅನುಕೂಲವಾಗಲಿದೆ. ಗ್ರುಪ್ ಕಾಲ್ ಗಳಲ್ಲಿ ಹೋಸ್ಟ್ ಆಗಿರುವವರು ಇತರರನ್ನು ಮ್ಯೂಟ್ ಮಾಡಬಹುದಾದ ಹೊಸ ವೈಶಿಷ್ಟ್ಯವನ್ನು ಸೇರಿಸಲಾಗಿದೆ.

ಇತ್ತೀಚೆಗಷ್ಟೇ ಗ್ರೂಪ್ ಕಾಲ್ ನಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ವಾಟ್ಸಾಪ್ ಏರಿಕೆ ಮಾಡಿತ್ತು. ಆದರೆ ಕೆಲವು ಫೀಚರ್‌ಗಳು ಇದರಲ್ಲಿ ಮಿಸ್ ಆಗಿದ್ದವು.

ಈಗ ಹೊಸ ಅಪ್ಡೇಟ್ ನಲ್ಲಿ ಹೋಸ್ಟ್ ಆದವರಿಗೆ ಇತರ ಪಾರ್ಟಿಸಿಪಂಟ್ಸ್ ಗಳನ್ನು ಮ್ಯೂಟ್ ಮಾಡುವ ಅವಕಾಶ ಕಲ್ಪಿಸಲಾಗಿದ್ದು ಇದು ಗುಂಪುಕರೆಗಳಲ್ಲಿ ನಾಯ್ಸ್ ಕ್ರಿಯೇಟ್ ಮಾಡುವವರನ್ನು ತಡೆಯಲು ಸಹಾಯಕವಾಗುತ್ತದೆ. ಅಲ್ಲದೇ ತಮ್ಮನ್ನು ಮ್ಯೂಟ್ ಮಾಡಿಕೊಳ್ಳಲು ಮರೆತಿರುವವರನ್ನು ಮ್ಯೂಟ್ ಮಾಡಲು ಸಹಾಯಕವಾಗಲಿದೆ. ಅಲ್ಲದೇ ನಿರ್ದಿಷ್ಟ ವ್ಯಕ್ತಿಗೆ ಅದೇ ಕರೆಯಲ್ಲಿ ಸಂದೇಶವನ್ನೂ ಸಹ ಕಳುಹಿಸಬಹುದಾದ ವ್ಯವಸ್ಥೆಯನ್ನು ಒಳಗೊಂಡಿದೆ. ಅಲ್ಲದೇ ಗ್ರೂಪ್ ಕರೆ ಮಿಸ್ಡ್ ಕಾಲ್ ಆದಲ್ಲಿ ಇನ್ನೂ ಮುಗಿದೆಲ್ಲವೆಂದಾದರೆ ನೀವು ತಕ್ಷಣವೇ ಆ ಗುಂಪನ್ನು ಸೇರಿಕೊಳ್ಳಲೂ ಬಹುದಾಗಿದೆ.

ಈ ಹಿಂದೆ ಕೇವಲ 8 ಮಂದಿಗೆ ಮಾತ್ರ ಗ್ರೂಪ್‌ಕಾಲ್‌ನಲ್ಲಿ ಭಾಗವಹಿಸಲು ಅವಕಾಶ ನೀಡಿತ್ತು. ಆದರೆ ಕಳೆದ ಏಪ್ರಿಲ್‌ನಲ್ಲಿ ಗ್ರೂಪ್ ಕಾಲ್‌ನಲ್ಲಿ 32 ಸದಸ್ಯರನ್ನು ಸೇರಿಸುವ ಅವಕಾಶವನ್ನು ನೀಡಿದೆ.

ಇತ್ತೀಚಿನ ವಾಟ್ಸ್ಆ್ಯಪ್ ಬೀಟಾ ಅಪ್‌ಡೇಟ್ ಹೊಸದಾಗಿ ‘ಅಡ್ಮಿನ್ ಅಪೂವಲ್’ ವೈಶಿಷ್ಟ್ಯವನ್ನು ಸಹ ಒಳಗೊಂಡಿದ್ದು, ಇದನ್ನು ಸಕ್ರಿಯಗೊಳಿಸಿದಾಗ, ಗ್ರೂಪ್ ನಿರ್ವಾಹಕರು ಲಿಂಕ್ ಮೂಲಕ ಗ್ರೂಪ್ ಅನ್ನು ಸೇರಲು ಬಯಸುವ ಜನರ ವಿನಂತಿಗಳನ್ನು ಸ್ವೀಕರಿಸಲು ಅಥವಾ ನಿರಾಕರಿಸಲು ಅನುಮತಿಸುತ್ತದೆ ಎಂದು WABetalnfo ವರದಿ ಮಾಡಿದೆ.

Leave A Reply

Your email address will not be published.