ಕಿರುತೆರೆ ನಟಿ ಚೇತನ ರಾಜ್ ನಂತರ ಮತ್ತೊಂದು ನಟಿಯ ಪಾಲಿಗೆ ವಿಲನ್ ಆದ ವೈದ್ಯೆ!!

0 4

ಇತ್ತೀಚೆಗಷ್ಟೇ ಬೊಜ್ಜು ಕರಗಿಸುವ ಶಸ್ತ್ರ ಚಿಕಿತ್ಸೆ ವೇಳೆ ಕಿರುತೆರೆ ನಟಿ ಚೇತನಾ ರಾಜ್ (21) ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಘಟನೆ ಭಾರೀ ಸುದ್ದಿ‌‌ ಮಾಡಿತ್ತು. ಈ ಬಗ್ಗೆ ನಟ ನಟಿಯರು ಮಾತ್ರವಲ್ಲದೇ ಸಾರ್ವಜನಿಕರು ಕೂಡಾ ಎಚ್ಚೆತ್ತುಕೊಳ್ಳಲು ಒಂದು ಮೆಸೇಜ್ ಕೂಡಾ ದೊರಕಿದಂತಾಯ್ತು ಎಂದೇ ಹೇಳಬಹುದು.

ಈ ನಡುವೆ ದಂತ ಚಿಕಿತ್ಸೆಗೆಂದು ಹೋದ ನಟಿಯ ಮುಖವನ್ನೇ ವೈದ್ಯರು ವಿರೂಪಗೊಳಿಸಿರುವ ಘಟನೆ ನಡೆದಿದೆ. ಹೌದು ಸ್ಯಾಂಡಲ್‌ವುಡ್ ನಟಿ ಸ್ವಾತಿ ಪಾಲಿಗೆ ಈಗ ದಂತ ವೈದ್ಯರೇ ವಿಲನ್ ಆಗಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಸಿನಿಮಾ ನಟಿಯ ಮುಖ ವಿರೂಪವಾಗಿದೆ. ಎಫ್‌ಐಆರ್, 6 ಟು 6 ಸೇರಿದಂತೆ ಹಲವು ಸಿನಿಮಾದಲ್ಲಿ ಸ್ವಾತಿ ನಟಿಸಿದ್ದಾರೆ. ಹಲ್ಲಿನ ಚಿಕಿತ್ಸೆಗಾಗಿ ಡೆಂಟಲ್ ಆಸ್ಪತ್ರೆಗೆ ನಟಿ ಸ್ವಾತಿ ಹೋಗಿದ್ದರು. ಚಿಕಿತ್ಸೆ ಪಡೆದ ಬಳಿಕ ಮುಖದಲ್ಲಿ ಊತ ಕಾಣಿಸಿಕೊಂಡು ವಿರೂಪವಾಗಿದೆ.

ಮುಖ ವಿರೂಪಗೊಂಡ ಬಳಿಕ ಮನೆಯಿಂದ ಹೊರಬರಲಾರದೆ ನಟಿ ತೊಂದರೆ ಅನುಭವಿಸುತ್ತಿದ್ದಾರೆ. ರೂಟ್ ಕ್ಯಾನಲ್‌ಗೆ ಎಂದು ಸ್ವಾತಿ ದಂತ ವೈದ್ಯರ ಬಳಿ ಹೋಗಿದ್ದರು. ಈ ವೇಳೆ ಈ ಘಟನೆ ನಡೆದಿದೆ. ಫೈ ಸ್ಟಾರ್ ರಿವ್ಯೂ ನೋಡಿ ಆಸ್ಪತ್ರೆಗೆ ಹೋಗಿದ್ದ ನಟಿಯಿಂದ ಈಗ ಸ್ಟಾರ್ ಆಗೋ ಭಾಗ್ಯ ಕಸಿದುಕೊಂಡಂತಾಗಿದೆ.

ಚಿಕಿತ್ಸೆ ಪಡೆದ ಬಳಿಕ ಮುಖದಲ್ಲಿ ಭಾರಿ ಬದಲಾವಣೆಯಾಗಿತ್ತು. ಆದರೆ ಎರಡು ದಿನದಲ್ಲಿ ಊತ ಕಮ್ಮಿಯಾಗುತ್ತೆ ವೈದ್ಯರು ಹೇಳಿದ್ದರು ಎನ್ನಲಾಗಿದೆ. ಆದರೆ 20 ದಿನಗಳು ಕಳೆದರೂ ಮುಖ ಮೊದಲಿನಂತಾಗಲಿಲ್ಲ. ಸದ್ಯ ಬೇರೆ ಆಸ್ಪತ್ರೆಯಲ್ಲಿ ನಟಿ ಸ್ವಾತಿ ಟ್ರೀಟ್ಮೆಂಟ್ ಪಡೆದುಕೊಳ್ಳುತ್ತಿದ್ದಾರೆ.

Leave A Reply