ಗೂಗಲ್ ಕ್ರೋಮ್ ನಿಂದ ಬಿಗ್ ವಾರ್ನಿಂಗ್, ಕ್ರೋಮ್  ಬಳಕೆದಾರರೇ ತಕ್ಷಣ ಈ ರೀತಿ ಮಾಡಿ

ನೀವು ಗೂಗಲ್ ಕ್ರೋಮ್ ಬಳಕೆದಾರರೇ ಆದಷ್ಟು ಬೇಗ ನಿಮ್ಮ ಬ್ರೌಸರ್ ಅನ್ನು ಹೊಸ ಆವೃತ್ತಿಗೆ ಅಪ್ಡೇಟ್ ಮಾಡಿ.  ಹಿಂದಿನ ಆವೃತ್ತಿಯ ಗೂಗಲ್ ಕ್ರೋಮ್‌ನಲ್ಲಿ ಅಪಾಯಕಾರಿಯಾದ ದೋಷಗಳು ಕಂಡುಬಂದಿರುವ ಬಗ್ಗೆ ವರದಿಯಾಗಿದೆ. ಹೀಗಾಗಿ ಕ್ರೋಮ್ ಬಳಕೆ ಮಾಡುವವರು ತಕ್ಷಣವೇ ತಮ್ಮ ಬ್ರೌಸರ್ ಅನ್ನು 102.0.5005.115 ನೂತನ ಆವೃತ್ತಿಗೆ ಅಪ್ಡೇಟ್ ಮಾಡುವಂತೆ ಸೂಚಿಸಲಾಗಿದೆ. ಈ ಹೊಸ ಆವೃತ್ತಿ ಕಳೆದ ಜೂನ್ 9 ರಂದು ಬಿಡುಗಡೆ ಮಾಡಲಾಗಿದೆ.

ಸದ್ಯ ಕಂಡು ಬಂದಿರುವ ಕೊರತೆಯ ಬಗ್ಗೆ ಗೂಗಲ್ ಕೆಲಸ ಮಾಡುತ್ತಿದ್ದು ಆದಷ್ಟು ಬೇಗ ಸರಿಪಡಿಸುವುದಾಗಿ ಹೇಳಿದೆ. ವಿಂಡೋಸ್ ಮ್ಯಾಕ್ ಮತ್ತು ಲಿನಕ್ಸ್‌ನಲ್ಲಿ ಮಾತ್ರ ಕ್ರೋಮ್ ಹೊಸತು ಲಭ್ಯವಿದೆ. ಮುಂದಿನ ವಾರದಲ್ಲಿ ಎಲ್ಲ ಬಳಕೆದಾರರಿಗೆ ನೂತನ ಆವೃತ್ತಿ ಸಿಗಲಿದೆಯಂತೆ.

ಗೂಗಲ್ ಕ್ರೋಮ್ ಅತ್ಯಂತ ಪ್ರಸಿದ್ಧ ವೆಬ್ ಬ್ರೌಸರ್ ಆಗಿದ್ದು, ಹ್ಯಾಕರ್ಸ್‌ಗೆ ಇದು ದೊಡ್ಡ ಟಾರ್ಗೆಟ್. ಬಹಳ ಮಂದಿ ವೈಯಕ್ತಿಕವಾಗಿ ಬಳಸುವ ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳಲ್ಲಿ ಗೂಗಲ್ ಕ್ರೋಮ್ ಬ್ರೌಸರ್‌ನಲ್ಲಿ ಬಹಳಷ್ಟು ಪಾಸ್‌ವರ್ಡ್‌ಗಳನ್ನ ಆಟೊಸೇವ್ ಮಾಡಿರುತ್ತಾರೆ. ಈ ಪಾಸ್‌ವರ್ಡ್‌ಗಳನ್ನ ದೋಚಲು ಹ್ಯಾಕರ್ಸ್ ಬಹಳ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ವಿವಿಧ ರೀತಿಯಲ್ಲಿ ಬಳಕೆದಾರರ ಮಾಹಿತಿ ಕದಿಯಲು ಪ್ರಯತ್ನಿಸುತ್ತಿರುತ್ತಾರೆ. ಇದಕ್ಕಾಗಿ ಕಾಲಕ್ಕೆ ತಕ್ಕಂತೆ ಅಪ್ಡೇಟ್ ಮಾಡುವುದು ಮುಖ್ಯ.

ಅಪ್ಡೇಟ್ ಮಾಡುವುದು ಹೇಗೆ ?
ಡೆಸ್ಕ್ ಟಾಪ್ ಕಂಪ್ಯೂಟರ್ ಬಳಕೆದಾರರು ಗೂಗಲ್ ಕ್ರೋಮ್ ಬ್ರೌಸರ್ ತೆರೆಯಿರಿ.
ಬಲ ತುದಿ ಮೇಲ್ಬಾಗದಲ್ಲಿರುವ ಮೂರು ಚುಕ್ಕಿಗಳ ಮೆನು ಆಯ್ಕೆ (Customize and control Google Chrome) & ಮಾಡಿ.
ನಂತರ ಸೆಟ್ಟಿಂಗ್ಸ್ ತೆರೆಯಿರಿ.
ಬಳಿಕ, ಅಬೌಟ್ ಕ್ರೋಮ್ ಓಪನ್ ಮಾಡಿ.
ಅಲ್ಲಿ ಇರುವ ಗೂಗಲ್ ಕ್ರೋಮ್ ಅಪ್‌ಡೇಟ್ ನೌ ಎಂದಿರುವುದನ್ನು ಕ್ಲಿಕ್ ಮಾಡಿ.
ಅಪ್‌ಡೇಟ್ ಆದ ಬಳಿಕ, ರೀಲಾಂಚ್ ಮಾಡಿ.

Leave A Reply