ಅಗ್ನಿಪಥ್ ಯೋಜನೆಯ ವಯೋಮಿತಿ ವಿಸ್ತರಣೆ ಮಾಡಿದ ಕೇಂದ್ರ ಸರ್ಕಾರ, ಇದರ ಪ್ರಯೋಜನ ಹೆಚ್ಚಿನ ವಿವರ ಇಲ್ಲಿದೆ!
ಭಾರತೀಯ ಸೇನೆಯ ಅಗ್ನಿಪಥ್ ಯೋಜನೆಯಲ್ಲಿ ಮಹತ್ವದ ಬದಲಾವಣೆಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಸಶಸ್ತ್ರ ಪಡೆಗಳಲ್ಲಿ ಎಲ್ಲ ಹೊಸ ನೇಮಕಾತಿಗಳ ವಯೋಮಿತಿಯನ್ನು 17 ವರ್ಷದಿಂದ – 21 ವರ್ಷಗಳು ಎಂದು ಮೊದಲು ನಿಗದಿ ಮಾಡಲಾಗಿತ್ತು.
ಕಳೆದ ಎರಡು ವರ್ಷಗಳಲ್ಲಿ ಮಹಾಮಾರಿ ಕೊರೋನಾ ಹಾವಳಿಯಿಂದಾಗಿ ನೇಮಕಾತಿಯನ್ನು ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಆದ್ದರಿಂದ 2022ರ ಅಗ್ನಿಪಥ್ ಯೋಜನೆಗೆ ನೇಮಕಾತಿ ಪ್ರಕ್ರಿಯೆಗೆ ಗರಿಷ್ಠ ವಯಸ್ಸಿನ ಮಿತಿಯನ್ನು 23 ವರ್ಷಗಳಿಗೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕಳೆದ ಎರಡು ವರ್ಷಗಳಲ್ಲಿ ಯಾವುದೇ ನೇಮಕಾತಿ ನಡೆಯದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಕ್ಷಣಾ ಸಚಿವಾಲಯ ಕೂಡ
ಕಳೆದ ಎರಡು ವರ್ಷಗಳಲ್ಲಿ ನೇಮಕಾತಿಯನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ ಎಂಬ ಅಂಶವನ್ನು ಅರಿತು, 2022 ರ ಪ್ರಸ್ತಾವಿತ ನೇಮಕಾತಿ ಚಕ್ರಕ್ಕೆ ಒಂದು ಬಾರಿ ವಿನಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ. ಅಗ್ನಿಪಥ್ ಯೋಜನೆಗೆ ಹದಿನೇಳುವರೆ ವರ್ಷ ಕನಿಷ್ಠ ಹಾಗು 21 ವರ್ಷ ಗರಿಷ್ಠ ವಯೋಮಿತಿ ನಿಗದಿ ಮಾಡಿದ್ದಕ್ಕೆ, ಕಳೆದ ಎರಡು ವರ್ಷಗಳಿಂದ ಸೇನಾ ನೇಮಾಕಾತಿಗಾಗಿ ಪ್ರಯತ್ನ ನಡೆಸುತ್ತಿದ್ದ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದೇ ಕಾರಣಕ್ಕಾಗಿ ಬಿಹಾರ, ಹರಿಯಾಣ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ದೊಡ್ಡ ಮಟ್ಟದ ಹಿಂಸಾಚಾರ ನಡೆದಿದ್ದ, ರೈಲು, ಬಸ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು.
ಸೇನಾ ನೇಮಕಾತಿಯ ಹೊಸ ಯೋಜನೆ ಅಗ್ನಿಪಥದಿಂದಾಗುವ ಪ್ರಯೋಜನಗಳು
4 ವರ್ಷಗಳ ಶಿಸ್ತುಬದ್ಧ ಮತ್ತು ಕೌಶಲ್ಯಪೂರ್ಣ ಜೀವನದ ನಂತರ, 24 ವರ್ಷ ವಯಸ್ಸಿನ ವ್ಯಕ್ತಿಯು ಇತರ ಯುವಕರಿಗಿಂತ ಉದ್ಯೋಗವನ್ನು ಪಡೆಯಲು ಉತ್ತಮ ಆಯ್ಕೆಯಾಗುತ್ತಾನೆ.
4 ವರ್ಷಗಳ ನಂತರ, CAPFS ಮತ್ತು ಅಸ್ಸಾಂ ರೈಫಲ್ಸ್ನಲ್ಲಿ ನೇಮಕಾತಿಯಲ್ಲಿ ಅರ್ಹ ಅಗ್ನಿಶಾಮಕ ದಳದವರಿಗೆ ಆದ್ಯತೆ ನೀಡಲು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
4ರಲ್ಲಿ 1 ಖಾಯಂ ಕೆಲಸ ಸಿಗುತ್ತದೆ.
21-24 ವರ್ಷ ವಯಸ್ಸಿನಲ್ಲಿ ಎಷ್ಟು ಜನರು 12 ಲಕ್ಷ ರೂಪಾಯಿ ಠೇವಣಿ ಹೊಂದಿದ್ದಾರೆ?
4 ವರ್ಷಗಳ ನಂತರ, ಅನೇಕ ದೊಡ್ಡ ಕಂಪನಿಗಳು
ಅಗ್ನಿವೀರರಿಗೆ ಉದ್ಯೋಗ ನೀಡುವುದಾಗಿ ಘೋಷಿಸಿವೆ.
ಇನ್ನು 4 ವರ್ಷಗಳಲ್ಲಿ ಅಗ್ನಿವೀರರಿಗೆ ಪದವಿ ಕೋರ್ಸ್ ಆರಂಭವಾಗಲಿದೆ. ದೇಶ-ವಿದೇಶಗಳಲ್ಲಿ ಮನ್ನಣೆ ಸಿಗಲಿದೆ.
21-24 ವರ್ಷ ವಯಸ್ಸಿನಲ್ಲಿ, ನೀವು ಸುಮಾರು 20 ಲಕ್ಷ
ಮೊತ್ತವನ್ನು ಸೇರಿಸಲು ಸಾಧ್ಯವಾಗುತ್ತದೆ.
4 ವರ್ಷದಲ್ಲಿ 7-8 ಲಕ್ಷ ರೂಪಾಯಿ ಠೇವಣಿ ಇಡಲಿದ್ದು, 12 ಲಕ್ಷ ರೂಪಾಯಿ ಕೇಂದ್ರ ಸರ್ಕಾರ ನೀಡಲಿದೆ.
4 ವರ್ಷದಲ್ಲಿ 7-8 ಲಕ್ಷ ರೂಪಾಯಿ ಠೇವಣಿ ಇಡಲಿದ್ದು, 12 ಲಕ್ಷ ರೂಪಾಯಿ ಕೇಂದ್ರ ಸರ್ಕಾರ ನೀಡಲಿದೆ.
ಉತ್ತರ ಪ್ರದೇಶ, ಮಧ್ಯಪ್ರದೇಶ, ಉತ್ತರಾಖಂಡ, ಹರಿಯಾಣ ಮತ್ತು ಅಸ್ಸಾಂನಂತಹ ಹಲವಾರು ರಾಜ್ಯ ಸರ್ಕಾರಗಳು ಪೊಲೀಸ್ ಮತ್ತು ಪೊಲೀಸ್ ಮಿತ್ರ ಪಡೆಗಳಿಗೆ ಸೇವಾ ನಂತರದ ನೇಮಕಾತಿಯಲ್ಲಿ ಅಗ್ನಿವೀರರಿಗೆ ಆದ್ಯತೆ ನೀಡಿವೆ.