ಒಂದು ವಾರದಿಂದ ಕೊಳೆಯುತ್ತಿದೆ ಬೆಳ್ಳಾರೆ ಸಂತೆ ಮಾರುಕಟ್ಟೆಯಲ್ಲಿ ತ್ಯಾಜ್ಯ

ಸುಳ್ಯ : ತಾಲೂಕಿನ ಎರಡನೇ ಪೇಟೆಯಾಗಿರುವ ಬೆಳ್ಳಾರೆಯ ಬಸ್ ತಂಗುದಾಣದ ಪಕ್ಕವಿರುವ ಸಂತೆ ಮಾರುಕಟ್ಟೆಯ ಸುತ್ತ ಕಳೆದ 6 ದಿನಗಳಿಂದ ತರಕಾರಿ ಸೇರಿದಂತೆ ಇತರ ತ್ಯಾಜ್ಯಗಳು ಕೊಳೆತು ನಾರುತ್ತಿದೆ.

ಈ ಕುರಿತು ಬೆಳ್ಳಾರೆಯ ಸಾಮಾಜಿಕ ಕಾರ್ಯಕರ್ತ ಸದಾಶಿವ ಪೂಜಾರಿಯವರು ಗ್ರಾ.ಪಂ.ಗಮನಕ್ಕೆ ಕಳೆದ ಸೋಮವಾರವೇ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಕಳೆದ ಶನಿವಾರ ನಡೆದ ಸಂತೆಯ ತ್ಯಾಜ್ಯ ಈ ಶುಕ್ರವಾರದವರೆಗೂ ತೆರವು ಮಾಡಿಲ್ಲ.ಈ ಕುರಿತು ಈಗಾಗಲೇ ಸುಳ್ಯ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಹಾಗೂ ದ.ಕ.ಜಿಲ್ಲಾಧಿಕಾರಿಯವರಿಗೂ ದೂರು ನೀಡಲಾಗಿದೆ ಎನ್ನಲಾಗಿದೆ.

ಈ ತ್ಯಾಜ್ಯದಿಂದಾಗಿ ಬೆಳ್ಳಾರೆ ಪೇಟೆ ಹಾಗೂ ಬಸ್ ತಂಗುದಾಣದಲ್ಲಿರುವ ಪ್ರಯಾಣಿಕರಿಗೆ ಮೂಗು ಬಿಡದ ಪರಿಸ್ಥಿತಿ ಬಂದಿದೆ

error: Content is protected !!
Scroll to Top
%d bloggers like this: